Advertisement

ಎಚ್ಕೆಆರ್‌ಡಿಬಿಗೆ 15 ಸಾವಿರ ಕೋಟಿ ರೂ. ನೀಡಲು ಮನವಿ

03:37 PM Mar 06, 2017 | Team Udayavani |

ಸೇಡಂ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರ ಸದಾ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದು, ಬಡವರಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ಪಟ್ಟಣದ ಊಡಗಿ ರಸ್ತೆಯಲ್ಲಿರುವ ಸ್ಲಂ ಬೋರ್ಡ್‌ ಕಾಲೋನಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಹುಡ್ಕೊ ಯೋಜನೆಯಡಿ ನಿರ್ಮಾಣಗೊಳಿಸಿದ ಮನೆಗಳ ಮೇಲಿನ ಸಾಲ ಮನ್ನಾದ ತಿಳಿವಳಿಕೆ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದಲೂ ಅನೇಕ  ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಈ ಭಾಗದಲ್ಲಿ 371ನೇ ಕಲಂ ತಿದ್ದುಪಡಿಯಿಂದ ಅನೇಕ ಸವಲತ್ತುಗಳು ಸಿಗುತ್ತಿವೆ. ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುವ ನಿಟ್ಟಿನಲ್ಲಿ ಪಾಲಕರು ಹೆಚ್ಚಿನ ಗಮನವಹಿಸುವುದು ಅಗತ್ಯವಾಗಿದೆ.

ಅಲ್ಲದೆ ಈ ಭಾಗದ ಅಭಿವೃದ್ಧಿಗೆ ಸ್ಥಾಪನೆಗೊಂಡಿರುವ ಹೈಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ಒಂದು ಸಾವಿರ ಕೋಟಿ ರೂ. ಒದಗಿಸುತ್ತಿರುವುದರಿಂದ ಮೂಲಸೌಲಭ್ಯದಂತಹ ಕೆಲಸ ನಡೆಸಲು ಅನುಕೂಲವಾಗುತ್ತಿದೆ. ಮುಂದಿನ ದಿನಗಳಲ್ಲಿ ಅದನ್ನು 15ಸಾವಿರ ಕೋಟಿ ರೂ. ಗೆ ಏರಿಸುವಂತೆ ಕಾಂಗ್ರೆಸ್‌ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದರು. 

ಸ್ಲಂ ಬೋರ್ಡ್‌ ಕಾಲೋನಿಯಲ್ಲಿ ಸರ್ಕಾರಿ ಶಾಲಾ ಕಟ್ಟಡವು ಸಂಪೂರ್ಣ ಅಳಿವಿನ ಅಂಚಿನಲ್ಲಿದ್ದು, ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆತಾಕೀತು ಮಾಡಿದರು. ಹೈಕ ಮೀಸಲಾತಿಯಲ್ಲಿ 12 ಸಾವಿರ ಸರ್ಕಾರಿ ಹುದ್ದೆಗಳನ್ನು ತುಂಬಲಾಗಿದೆ.

Advertisement

ಸರ್ಕಾರದ ಅವಧಿ ಮುಗಿಯುವರೆಗೆ ಅದನ್ನು 30ಸಾವಿರಕ್ಕೆ ತಲುಪುವ ಗುರಿ ಹೊಂದಲಾಗಿದೆ. ಸದ್ಯ ಇಲ್ಲಿನ ಮನೆಗಳಲ್ಲಿ ವಾಸಿಸುವರಿಗೆ ಆಯಾ ಮನೆಗಳ ಹಕ್ಕು ಪತ್ರ ವಿತರಣೆ ಮಾಡಬೇಕು. ಬಾಡಿಗೆ ಇದ್ದವರೆ ಅದರ ಮಾಲೀಕರಾಗಲಿದ್ದಾರೆ. ಸದ್ಯಕ್ಕೆ 166ಮನೆಗಳ ಮೇಲಿನ ಒಟ್ಟು 2.70ಕೋಟಿ ರೂ. ಸಾಲವನ್ನು ಸರ್ಕಾರ ಮನ್ನಾ ಮಾಡಿದೆ ಎಂದು ತಿಳಿಸಿದರು. 

ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಮಾತನಾಡಿ, ಡಾ| ಶರಣಪ್ರಕಾಶ ಪಾಟೀಲರು ಶಾಸಕರಾಗಿ ಆಯ್ಕೆಯಾದ ನಂತರ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.ಪುರಸಭೆ ಅಧ್ಯಕ್ಷೆ ಮಲ್ಲಮ್ಮ ಚವ್ಹಾಣ, ಸದಸ್ಯೆ  ನೀಲಾಬಾಯಿ ಗೋಪಾಲ ರಾಠೊಡ, ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಸದಸ್ಯರಾದ ವಿಶ್ವನಾಥ ಪಾಟೀಲ ಬೊಮ್ನಳ್ಳಿ, ಅಬ್ದುಲ್‌ ಗಫೂರ, ಜಿಪಂ ಮಾಜಿ ಸದಸ್ಯ ಧೂಳಪ್ಪ ದೊಡ್ಡಮನಿ, ಆಶ್ರಯ ಸಮಿತಿ ಸದಸ್ಯರಾದ ಜಗದೀಶ ಯಾಲಕ್ಕಿ, ವಸಂತ ಪೂಜಾರಿ,

ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಎಂ.ಎ. ಖಯುಮ,ಎಇಇ ಅರುಣಕುಮಾರ ಮಮಶೆಟ್ಟಿ, ಎಇ ಸುಧಾಕರ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ, ಸದಸ್ಯ ದತ್ತು ಪಾಟೀಲ, ಹಾಜಿ ನಾಡೆಪಲ್ಲಿ, ಮುಖಂಡ ಸುದರ್ಶನರೆಡ್ಡಿ ಪಾಟೀಲ, ಸಂತೋಷ ಕುಲಕರ್ಣಿ, ರಾಜು ಹಡಪದ ಇದ್ದರು. ಪುರಸಭೆ ನಾಮನಿರ್ದೇಶಿತ ಸದಸ್ಯ ಸಂತೋಷ ತಳವಾರನಿರೂಪಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ದಂಡೋತಿ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next