Advertisement
ಸಂಸ್ಥೆ ಯ 2024- 27ನೇ ಸಾಲಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ 115 ಭಾರಿ ಮತಗಳ ಅಂತರದಿಂದ ಚುನಾಯಿತರಾದರು. ನಮೋಶಿ 617 ಮತ ಪಡೆದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂತೋಷ ಬಿಲಗುಂದಿ 502 ಹಾಗೂ ಡಾ. ಎಸ್. ಬಿ.ಕಾಮರೆಡ್ಡಿ 249 ಹಾಗೂ ರಾಜಶೇಖರ ನಿಪ್ಪಾಣಿ ಕೇವಲ 03 ಮತಗಳ ನ್ನು ಪಡೆದರು.
Related Articles
Advertisement
ಉಪಾಧ್ಯಕ್ಷ ರಾಗಿ ರಾಜು ಬಸವರಾಜ ಭೀಮಳ್ಳಿ ದಿಗ್ವಿಜಯ ಸಾಧಿಸಿದ್ದಾರೆ. ರಾಜು ಭೀಮಳ್ಳಿ 857 ಮತಗಳನ್ನು ಪಡೆದು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎದುರಾಳಿಗಳಾದ ಆರ್. ಎಸ್. ಹೊಸಗೌಡ 257 ಹಾಗೂ ನಿತೀನ ಜವಳಿ 254 ಮತಗಳನ್ನು ಪಡೆದು ಸೋಲು ಅನುಭವಿಸಿದರು. ರಾಜು ಭೀಮಳ್ಳಿ ಅತ್ಯಧಿಕ 847 ಮತಗಳನ್ನು ಪಡೆದು ದಿಗ್ವಿಜಯ ಸಾಧಿಸಿದರು.
ಆಡಳಿತ ಮಂಡಳಿ ಸದಸ್ಯ ರಾಗಿ ಗೆದ್ದವರು: ಡಾ. ಕೈಲಾಸ ಪಾಟೀಲ್ (722 ಮತ)ಅರುಣ ಕುಮಾರ ಎಂ. ವೈ. ಪಾಟೀಲ್ ( 690), ಉದಯಕುಮಾರ ಚಿಂಚೋಳಿ ( 668), ಡಾ. ಕಿರಣ ದೇಶಮುಖ (622), ಮಹಾದೇವಪ್ಪ ರಾಂಪೂರೆ (614), ಡಾ. ನಾಗೇಂದ್ರ ಮಂಠಾಳೆ ( 567), ಡಾ. ಶರಣಬಸಪ್ಪ ಹರವಾಳ ( 538), ಸಾಯಿನಾಥ ಎನ್. ಪಾಟೀಲ್ ( 530), ಡಾ. ಅನೀಲ ಪಟ್ಟಣ ( 529), ನಾಗಣ್ಣ ಎಸ್ ಘಂಟಿ (508), ಅನೀಲಕುಮಾರ ಮರಗೋಳ ( 494) ಹಾಗೂ ನಿಶಾಂತ ಏಲಿ ( 427) ಗೆಲುವು ಸಾಧಿಸಿದ್ದಾರೆ. ನಮೋಶಿ ಪೆನಾಲ್ ದಿಂದ ಡಾ. ಕೈಲಾಶ ಪಾಟೀಲ್, ಅರುಣ ಕುಮಾರ ಪಾಟೀಲ್, ಉದಯ ಚಿಂಚೋಳಿ, ಡಾ.ರಜನೀಶ ವಾಲಿ, ಡಾ. ಶರಣಬಸಪ್ಪ ಹರವಾಳ, ನಿಶಾಂತ ಏಲಿ ಗೆಲುವು ಸಾಧಿಸಿದ್ದಾರೆ. ಅದೇ ರೀತಿ ಬಿಲಗುಂದಿ ಪೆನಾಲ್ ದಿಂದ ಡಾ. ಕಿರಣ ದೇಶಮುಖ, ಮಹಾದೇವಪ್ಪ ರಾಂಪೂರೆ, ಡಾ. ನಾಗೇಂದ್ರ ಮಂಠಾಳೆ, ಸಾಯಿನಾಥ್ ಪಾಟೀಲ್, ಡಾ. ಅನೀಲಕುಮಾರ ಪಟ್ಟಣ ಗೆಲುವು ಸಾಧಿಸಿದ್ದಾರೆ. ಡಾ. ಎಸ್. ಬಿ.ಕಾಮರೆಡ್ಡಿ ಪೆನಾಲ್ ದಿಂದ ನಾಗಣ್ಣ ಎಸ್ ಘಂಟಿ, ಅನೀಲಕುಮಾರ ಮರಗೋಳ ಗೆಲುವು ಸಾಧಿಸಿದರು. 20 ಮತಗಳು ಅಸಿಂಧು
ಆಡಳಿತ ಮಂಡಳಿ ಸದಸ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಲಾವಣೆಯಾದ ಮತಗಳಲ್ಲಿ ತಲಾ 20 ಮತಗಳು ತಿರಸ್ಕಾರಗೊಂಡಿವೆ. ಡಾ. ಪಿ.ಎಸ್. ಶಂಕರ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಡಾ. ಪಿ.ಎಸ್. ಶಂಕರ ಇದು ಏಳನೇ ಚುನಾವಣೆಯಾಗಿ ಕಾರ್ಯನಿರ್ವಹಿಸಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಸಿದ್ದರಾಮ ಪಾಟೀಲ್, ರಾಜೇಂದ್ರ ಕೊಂಡಾ, ನರೇಂದ್ರ ಬಡಶೇಷಿ ಕಾರ್ಯನಿರ್ವಹಿಸಿದರು. ಒಂದು ಮತದಿಂದ ಗೆದ್ದ ಮರಗೋಳ ಅನೀಲಕುಮಾರ ಎಸ್ ಮರಗೋಳ ಕೇವಲ ಒಂದು ಮತದಿಂದ ಆಡಳಿತ ಮಂಡಳಿ ಸದಸ್ಯರಾಗಿ ಚುನಾಯಿತರಾದರು. ಆನಂದ ದಂಡೋತಿ 493 ಮತ ಪಡೆದು ಸೋಲು ಅನುಭವಿಸಿದರು. ಮರಗೋಳ 494 ಮತ ಪಡೆದು ಗೆಲುವು ಸಾಧಿಸಿದರು. ಕೇವಲ ಒಂದು ಮತ ಮಾತ್ರ ಮುನ್ನಡೆ ಸಾಧಿಸಿದ್ದರಿಂದ ಮರು ಮತ ಏಣಿಕೆ ನಡೆಯಿತು. ಎರಡನೇ ಸಲ ಮತ ಏಣಿಕೆಯ ನಡೆಸಿದಾಗಲೂ ಮರಗೋಳ ಒಂದು ಮತದಿಂದ ಗೆಲುವು ಸಾಧಿಸಿದರೆಂದು ಚುನಾವಣಾಧಿಕಾರಿ ಗಳು ಘೋಷಿಸಿದರು.ಕಳೆದ ಸಲವೂ ಆನಂದ ದಂಡೋತಿ ಕೇವಲ 10 ಮತಗಳ ಅಂತರದಲ್ಲೇ ಸೋಲು ಅನುಭವಿಸಿದ್ದರು.