ಯಾದಗಿರಿ: ಕೆ.ಎ.ಇ ಪರೀಕ್ಷಾ ಅಕ್ರಮದ ಪ್ರಕರಣದಲ್ಲಿ ನಮ್ಮ ಸರ್ಕಾರ ಪಾರದರ್ಶಕ ತನಿಖೆ ನಡೆಸುತ್ತಲಿದೆ. ಸಚಿವ ಪ್ರಿಯಾಂಕ ಖರ್ಗೆ ಅವರು ಈ ಹಿಂದೆ ಸದನದಲ್ಲಿ ಪಿ.ಎಸ್.ಐ ಹಗರಣದ ಬಗ್ಗೆ ಸಾಕಷ್ಟು ಬಾರಿ ಹೇಳಿದರು ಹಿಂದಿನ ಸರ್ಕಾರ ತನಿಖೆಗೆ ವಿಳಂಬ ಮಾಡಿತ್ತು ಆದರೆ ಪ್ರಸ್ತುತ ನಮ್ಮ ಸರ್ಕಾರ ಬ್ಲುಟೂತ್ ಪ್ರಕರಣವನ್ನು ತಕ್ಷಣ ತನಿಖೆಗೆ ಕೊಟ್ಟು, ಈಗಾಗಲೇ ಆರೋಫೊಗಳನ್ನು ಬಂಧಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ ಹೇಳಿದರು.
ಶಹಾಪುರ ತಾಲೂಕಿನ ಶಿರವಾಳ ಗ್ರಾಮದಲ್ಲಿ ಪ್ರವೇಶ ಇಲಾಖೆ ಆಯೋಜಿಸಿದ ‘ನಮ್ಮ ಸ್ಮಾರಕ ದರ್ಶನ’ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಎಫ್.ಡಿ.ಎ ಅಕ್ರಮ ನಡೆದ ತಕ್ಷಣ ಕ್ರಮ ಕೈಗೊಂಡಿದ್ದೇವೆ, ತನಿಖೆಯಲ್ಲಿ ನಿರತರಾದ ಅಧಿಕಾರಿಗಳಿಗೆ ಇನ್ನೂ ಕೆಲವರ ಬಂಧನ ಯಾಕೆ ಆಗಿಲ್ಲ ಎಂದು ಕೇಳುತ್ತಾ ಇದ್ದೇವೆ, ಇದೆಲ್ಲವೂ ಸ್ಪಷ್ಟ ಹಾಗೂ ಪಾರದರ್ಶಕ ಆಡಳಿತ ಅಲ್ಲವೆ ಎಂದು ಹೇಳಿದರು.
ಆರ್.ಡಿ.ಪಾಟೀಲ ಬಂಧನಕ್ಕೆ ಮುಂದಾಗದೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ, ಯಾರು ವಿಫಲವಾಗಿದ್ದರೆ ಅವರ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದೆ, ಕಾನೂನಿನ ಚೌಕಟ್ಟಿನಲ್ಲಿ ಎಲ್ಲರೂ ಸಮಾನರು, ತಪ್ಪಿತಸ್ಥರಿಗೆ ಖಡಾಖಂಡಿತ ಶಿಕ್ಷೆಯಾಗುತ್ತದೆ ಎಂದು ಸಚಿವರು ತಿಳಿಸಿದರು.
ಇದನ್ನೂಓದಿ: ಚಿಕ್ಕಮಗಳೂರು : ಸಿಎಂ ಕುರ್ಚಿ ವಿರುದ್ಧ ಬಿಜೆಪಿ ವ್ಯಂಗ್ಯ ಪ್ರತಿಭಟನೆ