Advertisement

ಪಾಕ್ ನಲ್ಲಿ ಹಿಜ್ಬುಲ್ ಉಗ್ರಗಾಮಿ ಮುಖ್ಯಸ್ಥ ಸೈಯದ್ ಮೇಲೆ ದಾಳಿ; ಐಎಸ್ ಐ ಕೈವಾಡ

05:15 PM May 29, 2020 | Nagendra Trasi |

ಇಸ್ಲಾಮಾಬಾದ್/ನವದೆಹಲಿ:ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ವರಿಷ್ಠ ಸೈಯದ್ ಸಲಾಹುದ್ದೀನ್ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಮೇ 25ರಂದು ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಪಾಕಿಸ್ತಾನದ ಮೂಲಗಳ ಪ್ರಕಾರ, ಹಿಜ್ಬುಲ್ ಮುಖ್ಯಸ್ಥನ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದು ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟೆಲಿಜೆನ್ಸ್ (ಐಎಸ್ ಐ) ಎಂದು ತಿಳಿಸಿದೆ. ಐಎಸ್ ಐ ಮತ್ತು ಸಲಾಹುದ್ದೀನ್ ನಡುವೆ ಇತ್ತೀಚೆಗೆ ನಡೆದಿರುವ ಜಟಾಪಟಿಯೇ ದಾಳಿ ನಡೆಸಲು ಕಾರಣ ಎನ್ನಲಾಗಿದೆ.

ದಾಳಿ ನಡೆಸಿರುವ ಹಿಂದಿನ ಉದ್ದೇಶ ಹತ್ಯೆಗೈದಿರುವ ಹೊಣೆ ಹೊರಲು ಅಲ್ಲ, ಬದಲಾಗಿ ಹಿಜ್ಬುಲ್ ಮುಖ್ಯಸ್ಥನಿಗೆ ಎಚ್ಚರಿಕೆಯ ಸಂದೇಶ ರವಾನಿಸುವುದು ಎಂದು ಮೂಲಗಳು ಬಯಲು ಮಾಡಿವೆ. ದಾಳಿ ನಡೆದ ಕೂಡಲೇ ಸಲಾಹುದ್ದೀನ್ ನನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು ಎಂದು ವರದಿ ವಿವರಿಸಿದೆ.

ಕಳೆದ ಕೆಲವು ತಿಂಗಳ ಹಿಂದಷ್ಟೇ ಸಲಾಹುದ್ದೀನ್ ಯುನೈಟೆಡ್ ಜಿಹಾದ್ ಕೌನ್ಸಿಲ್ (ಯುಜೆಸಿ)ಗೆ ಮುಖ್ಯಸ್ಥನಾಗಿ ನೇಮಕವಾಗಿದ್ದ. ಪಾಕಿಸ್ತಾನದ ಮೂಲದ ವಿವಿಧ ಉಗ್ರಗಾಮಿ ಸಂಘಟನೆಗೆ ಐಎಸ್ ಐ ಪ್ರಾಯೋಜಕತ್ವ ನೀಡುತ್ತದೆ. ಆದರೆ ಹಿಜ್ಬುಲ್ ಅಸಮರ್ಪಕ ಬೆಂಬಲದಿಂದ ಐಎಸ್ ಐ ಅಸಮಾಧಾನಗೊಂಡಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next