ಹೂವಿನಹಿಪ್ಪರಗಿ: ತೊಗರಿ ನೋಂದಣಿಗೆ ಫೆ.25ರವರೆಗೆ ಅವಕಾಶ ನೀಡಿ 10 ಕ್ವಿಂಟಲ್‌ಗಿದ್ದ ಖರೀದಿ ಮಿತಿಯನ್ನು 20 ಕ್ವಿಂಟಲ್ ಹೆಚ್ಚಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಕೆಪಿಎಸ್ ಅಧ್ಯಕ್ಷ ಅನಿಲಗೌಡ ಪಾಟೀಲ ಮನವಿ ಮಾಡಿದರು.
ಕುದರಿ ಸಾಲವಾಡಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ತೆರೆಯಲಾದ ತೊಗರಿ ಖರೀದಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಸರಕಾರ 5,800
ರೂ. ಮತ್ತು ರಾಜ್ಯ ಸರಕಾರ 300 ರೂ. ಬೆಂಬಲ ಬೆಲೆ ಸೇರಿದಂತೆ ಒಟ್ಟು 6,100 ರೂ. ನೀಡುತ್ತಿದ್ದು, ಖಾಸಗಿ ಮಾರುಕಟ್ಟಿಗೆ ಬೆಲೆಯಲ್ಲಿ ಬಾರಿ ವ್ಯತ್ಯಾಸ ಇದ್ದು ಬೆಂಬಲ ಬೆಲೆ ಸಹಾಯವಾಗಲಿದೆ. ಸರಕಾರ ತೆರೆದಿರುವ ತೊಗರಿ ಕೇಂದ್ರದಲ್ಲಿ ರೈತರು ಮಾರಾಟ ಮಾಡಿ ಬೆಂಬಲ ಬೆಲೆಯ ಉಪಯೋಗ ಪಡೆಯಲು ಸಲಹೆ ನೀಡಿದರು.
ನಮ್ಮ ಪಿಕೆಪಿಎಸ್ ಸಿಬ್ಬಂದಿ ರೈತರ ಸರದಿಯಲ್ಲಿ ಯಾವುದೇ ವ್ಯತ್ಯಾಸ ಮಾಡದೇ ಆಯಾ ರೈತರ ಸರದಿ ಪ್ರಕಾರ ತೊಗರಿ ಖರೀದಿಸಲಾಗುತ್ತದೆ. ರೈತರು ಸಹ ಸಿಬ್ಬಂದಿಯೊಂದಿಗೆ ಸಹಕಾರದಿಂದ ವರ್ತಿಸಿದರೆ ಖರೀದಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಂಗನಗೌಡ ಪಾಟೀಲ, ಅಡಿವೆಪ್ಪಗೌಡ ಪಾಟೀಲ, ಲಕ್ಷ್ಮಣ ರ್ಯಾಗೇರಿ, ಬೀರಪ್ಪ ಉಂಡಿ, ಮಲ್ಲಣ್ಣ ಅಣ್ಣಪ್ಪನವರ, ಬಸವರಾಜ ಬೈರವಾಡಗಿ, ಪರಶುರಾಮ ಬಿದರಕುಂದಿ, ಅಬ್ಬುಲರಹಿಮಾನ ಗುಡ್ನಾಳ, ದುರಗಪ್ಪ ವಡ್ಡರ, ಅನಿಲಕುಮಾರ ದೇಸಾಯಿ, ವಿಜಯಕುಮಾರ ಬಿರಾದಾರ, ಮಲ್ಲು ಉಪ್ಪಾರ, ಭೀಮನಗೌಡ ಪಾಟೀಲ, ವಿಜಯಕುಮಾರ ದೇಸಾಯಿ, ಮಹಾಂತೇಶ ಡೋಣುರ, ಹನುಮಂತ್ರಾಯ ದೇಸಾಯಿ, ಪರಶುರಾಮ ಕಂಬಾರ, ಚಿದಾನಂದ ಜೀರ, ಲಾಳೆಸಾ ನದಾಫ್ ಇದ್ದರು.