Advertisement
ಜಿಲ್ಲಾಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರಗಳ ಮೂಲಕ ತಪಾಣೆಯನ್ನು ಮಾಡಲಾಗುತ್ತಿದೆ. ಇವಿಷ್ಟೇ ಅಲ್ಲದೆ ಜಿಲ್ಲೆಯ ಬ್ರಹ್ಮಾವರ, ಬೈಂದೂರು, ಹೆಬ್ರಿ, ಕಾರ್ಕಳ, ನಿಟ್ಟೆಯಲ್ಲಿ ಲಿಂಕ್ ಎಆರ್‌ಟಿ ಕೇಂದ್ರಗಳಿವೆ. ಎಚ್‌ಐವಿ ಸೋಂಕಿತರಿಗೆ ಇಲ್ಲಿ ಪ್ರತೀ ತಿಂಗಳು ಕೆಲವು ಪರೀಕ್ಷೆಗಳನ್ನು ಮಾಡಲಾಗುತ್ತಿದೆ.
Related Articles
Advertisement
ಎಚ್.ಐ.ವಿ. ವೈರಸ್‌ಗಳು ದೇಹದ ರೋಗ ನಿರೋಧಕ ಶಕ್ತಿಯ ಜಾಲವನ್ನು ತುಂಡರಿಸಿ, ರೋಗಗಳ ವಿರುದ್ಧ ಹೋರಾಡುವ ಬಿಳಿರಕ್ತ ಕಣಗಳ ಶಕ್ತಿಯನ್ನು ದುರ್ಬಲಗೊಳಿಸಿ ಇಡೀ ದೇಹವನ್ನು ಆವರಿಸುತ್ತವೆ. ನಿರಂತರ ಜ್ವರ, ಬೇಧಿ, ಕೆಮ್ಮುವಿನಿಂದಾಗಿ ರೋಗಿಯ ದೇಹದ ತೂಕ ಕಡಿಮೆಯಾಗುತ್ತದೆ. ವ್ಯಕ್ತಿಗೆ ಎಚ್ .ಐ.ವಿ. ಸೋಂಕು ಉಂಟಾದಾಗ ಆ ವ್ಯಕ್ತಿಗೆ ಏಡ್ಸ್ ರೋಗ ಬೆಳವಣಿಗೆಯ ಹಂತ ತಲುಪುವವರೆಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ರೋಗ ಲಕ್ಷಣಗಳು ಕಂಡು ಬರಲು 6 ತಿಂಗಳಿನಿಂದ 10 ವರ್ಷ ಅಥವಾ ಅದಕ್ಕೂ ಹೆಚ್ಚಿನ ಸಮಯ ತೆಗದುಕೊಳ್ಳಬಹುದು. ಅಲ್ಲಯ ತನಕ ಆ ವ್ಯಕ್ತಿ ಸಾಮಾನ್ಯವಾಗಿ ಮತ್ತು ಆರೋಗ್ಯವಂತನಾಗಿ ಕಾಣುತ್ತಾನೆ.
ಗರ್ಭಿಣಿಯರಿಗೆ ಕಡ್ಡಾಯ ಪರೀಕ್ಷೆ
ಜಿಲ್ಲೆಯಲ್ಲಿ ಎಲ್ಲ ಗರ್ಭಿಣಿಯರನ್ನೂ ಕಡ್ಡಾಯವಾಗಿ ಎಚ್‌ಐವಿ ತಪಾಸಣೆಗೆ ಒಳಪಡಿಸಲಾಗುತ್ತದೆ. ಪಾಸಿಟಿವ್ ಕಂಡುಬಂದರೆ ಆ ವ್ಯಾಪ್ತಿಯಲ್ಲಿ ಸೋಂಕಿನ ಪ್ರಮಾಣ ತಿಳಿದುಬರುತ್ತದೆ. ಸೆಂಟಿನಲ್ ಸರ್ವೇಯನ್ನೂ ಮಾಡಲಾಗುತ್ತದೆ. ಈ ಮೂಲಕವೂ ಸೋಂಕು ಪ್ರಸರಣದ ಬಗ್ಗೆ ತಿಳಿಯುತ್ತದೆ.
ಹೊರಜಿಲ್ಲೆಯವರೇ ಅಧಿಕ
ಜಿಲ್ಲೆಯ ಪಾಸಿಟಿವ್ ಪ್ರಕರಣಗಳಲ್ಲಿ ಅನ್ಯಜಿಲ್ಲೆಯ ಪಾಲೂ ಅಧಿಕವಿದೆ. ಬಾಗಲ ಕೋಟೆ, ಬಿಜಾಪುರ, ಚಾಮರಾಜನಗರ ದಲ್ಲಿ ಈ ಸೋಂಕು ಅಧಿಕವಿದೆ. ಅಂತಹ ವರಿಗೆ ಇಲ್ಲಿ ಚಿಕಿತ್ಸೆ ನೀಡಿ ಆ ಪ್ರಕರಣಗಳನ್ನು ಅವರ ಜಿಲ್ಲೆಗಳಿಗೆ ವರ್ಗಾಯಿಸಲಾಗುತ್ತದೆ. ಎಚ್‌ಐವಿ ಸೋಂಕಿಗೆ ಔಷಧವಿದ್ದರೂ ಸಂಪೂರ್ಣ ಗುಣಮುಖರಾಗುವುದು ಅಸಾಧ್ಯ. ಇದರ ತೀವ್ರತೆ ಹಬ್ಬುವುದನ್ನು ತಡೆಗಟ್ಟಬಹುದು ಎನ್ನುತ್ತಾರೆ ವೈದ್ಯರು.
ಜಾಗೃತಿ ಕಾರ್ಯಕ್ರಮ: ಎಚ್‌ಐವಿ ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮೂಲಕ ಹಲವಾರು ರೀತಿಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುತ್ತಿದೆ. ಸೋಂಕಿತರಿಗೆ ಉಚಿತ ಔಷಧಗಳನ್ನೂ ನೀಡಲಾಗುತ್ತದೆ. ಇದರಿಂದ ಸೋಂಕು ಪ್ರಸರಣದ ತೀವ್ರತೆ ಕಡಿಮೆಯಾಗುತ್ತದೆ. –ಡಾ| ಚಿದಂಬರ ಸಂಜು,, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ