Advertisement

ಜಪ್ಪಿನಮೊಗರು ಬಳಿ ಹಿಟ್ ಆಂಡ್ ರನ್: ಓರ್ವ ಕಾರ್ಮಿಕ ಸಾವು, ಇನ್ನೋರ್ವನಿಗೆ ಗಾಯ

09:35 AM Aug 12, 2022 | Team Udayavani |

ಉಳ್ಳಾಲ: ಅಪರಿಚಿತ ವಾಹನವೊಂದು ರಾಷ್ಟ್ರೀಯ ಹೆದ್ದಾರಿ 66 ರ ಜೆಪ್ಪಿನಮೊಗರು ಬಳಿ ಹುಲ್ಲುಗಳನ್ನು ಕಟಾವು ನಡೆಸುತ್ತಿದ್ದ ಇಬ್ಬರು ಕಾರ್ಮಿಕರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಾಳು ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಬಿಹಾರ ಜಾಮೂಲ್ ನಿವಾಸಿ ವಿಕ್ಕಿ ಖಾನ್ (23) ಮೃತ ಕಾರ್ಮಿಕ. ಗೋಪಾಲ್ ಪೂಜಾರಿ ಗಾಯಗೊಂಡವರು.

ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಹೆದ್ದಾರಿ ಬಳಿಯ ಹುಲ್ಲುಗಳನ್ನು ಕಟಾವು ನಡೆಸುತ್ತಿದ್ದಾಗ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ವಾಹನ ಢಿಕ್ಕಿ ಹೊಡೆದಿದೆ. ಪಿಕಪ್ ವಾಹನದ ಮೇಲೆ ಸಂಶಯ ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ:ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದರೆ ಬಿ.ಸಿ.ನಾಗೇಶ್?: ಕಾಂಗ್ರೆಸ್ ಗೆ ತಿರುಗೇಟು ನೀಡಿದ ಸಚಿವ

ನಾಗುರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next