Advertisement

ನೆರವೇರದ ಐನ್‌ಸ್ಟೀನ್‌ ಕೊನೆಯಾಸೆ

07:34 PM Jun 26, 2019 | Team Udayavani |

ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೊಂದು ಪುಟ್ಟ ಜಾಗ

Advertisement

ಜಗದ್ವಿಖ್ಯಾತ ವಿಜ್ಞಾನಿ ಐನ್‌ಸ್ಟೀನ್‌ ಅವರಿಗೆ ಪ್ರಚಾರ ಎಂದರೆ ಆಷ್ಟಕ್ಕಷ್ಟೆ. ಅವರು ಜನರಿಂದ, ಸಭೆ, ಸನ್ಮಾನಗಳಿಂದ ದೂರವೇ ಉಳಿಯಲು ಇಷ್ಟಪಡುತ್ತಿದ್ದರು. ಕೊನೆಗಾಲದಲ್ಲಿ ಅವರು ಹೇಳಿಕೊಂಡ ಆಸೆಯೂ ಅದಕ್ಕೆ ಪೂರಕವಾಗಿತ್ತು. ತಾವು ಸತ್ತ ನಂತರ ತಮ್ಮ ದೇಹವನ್ನು ಸುಟ್ಟು, ಬೂದಿಯನ್ನು ಯಾರಿಗೂ ಸಿಗದಂತೆ ಗಾಳಿಯಲ್ಲಿ ವಿಸರ್ಜಿಸಬೇಕು ಎಂದು ಆಸೆ ಪಟ್ಟಿದ್ದರು. ಏಕೆಂದರೆ, ತಮ್ಮ ಕೈಲಿ ಆಟೋಗ್ರಾಫ್ ಬರೆಸಿಕೊಂಡು ಅದನ್ನು ಹಣಕ್ಕಾಗಿ ಮಾರಾಟ ಮಾಡುತ್ತಿದ್ದ ಮಂದಿ ಯಾವ ಹಂತಕ್ಕೂ ಇಳಿಯಬಹುದೆಂಬ ಸಂಗತಿ ಅವರಿಗೆ ಗೊತ್ತಿತ್ತು. ಆದರೆ ಐನ್‌ಸ್ಟೀನ್‌ರ ಕೊನೆಯಾಸೆ ನೆರವೇರಲು ಜಗತ್ತು ಬಿಡಲೇ ಇಲ್ಲ. ಅವರು 1955ರಲ್ಲಿ ತೀರಿಕೊಂಡಾಗ ಥಾಮಸ್‌ ಹಾರ್ವೆ ಎಂಬ ವೈದ್ಯ ಮಹಾಶಯ ಅನಧಿಕೃತವಾಗಿ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದ. ಮುಂದೆ ವಿಷಯ ಬಹಿರಂಗಗೊಂಡು ವಿವಾದವಾಯಿತು. ಆಗ ಆತ ಐನ್‌ಸ್ಟೀನ್‌ ಮಗನ ಕ್ಷಮಾಪಣೆ ಕೇಳಿ “ವೈಜ್ಞಾನಿಕ ಕಾರಣಗಳಿಗೆ ಮಾತ್ರ ತಪಾಸಣೆ ಮಾಡಬೇಕು’ ಎಂಬ ಕರಾರಿನ ಮೇಲೆ ಐನ್‌ಸ್ಟೀನ್‌ ದೇಹವನ್ನು ಕೆಲ ದಿನಗಳ ಮಟ್ಟಿಗೆ ಇಟ್ಟುಕೊಂಡು ಹಿಂತಿರುಗಿಸಿದ. ಆದರೆ ಜಗತ್ತಿನ ಮಹಾನ್‌ ಮೇಧಾವಿಯ ಮೆದುಳು ಮತ್ತು ಕಣ್ಣುಗಳನ್ನು ಹೆಚ್ಚಿನ ವೈಜ್ಞಾನಿಕ ತಪಾಸಣೆಗೆಂದು ತನ್ನಲ್ಲಿಯೇ ಉಳಿಸಿಕೊಂಡ. ಅದರಲ್ಲಿ ಕಣ್ಣುಗಳನ್ನು ಐನ್‌ಸ್ಟೀನ್‌ ಅವರ ಗೆಳೆಯ, ನೇತ್ರವೈದ್ಯರಾದ ಹೆನ್ರಿ ಆ್ಯಡಮ್ಸ್‌ ಅವರಿಗೆ ಉಡುಗೊರೆಯಾಗಿ ನೀಡಿದ. ಡಾ.ಹೆನ್ರಿ, ಐನ್‌ಸ್ಟೀನ್‌ ಮೇಲಿನ ಸ್ನೇಹ ಮತ್ತು ಪ್ರೀತಿಯಿಂದ ಕಾಪಿಟ್ಟ ಆ ಕಣ್ಣುಗಳು ಇಂದಿಗೂ ಲಾಕರ್‌ನಲ್ಲಿ ಸುರಕ್ಷಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next