Advertisement
ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಕೆಂಪು ಬಣ್ಣದ ಬಾಲ್ ಗಳನ್ನು ಬಳಸಿದರೆ, ನಿಗದಿತ ಓವರ್ ಕ್ರಿಕೆಟ್ ನಲ್ಲಿ ಬಿಳಿ ಬಣ್ಣದ ಚೆಂಡನ್ನು ಬಳಸಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಎರಡು. ಟೆಸ್ಟ್ ಕ್ರಿಕೆಟ್ ನಲ್ಲಿ ಆಟಗಾರರು ಬಿಳಿ ಬಣ್ಣದ ಸಮವಸ್ತ್ರ ಧರಿಸುವುದರಿಂದ ಬಿಳಿ ಬಣ್ಣದ ಚೆಂಡು ಬಳಸಿದರೆ ಸ್ಪಷ್ಟವಾಗಿ ಗೋಚರಿಸುವುದಿಲ್ಲ ಎಂಬ ಕಾರಣಕ್ಕೆ ಹೀಗೆ ಕೆಂಪು ಬಣ್ಣದ ಚೆಂಡನ್ನು ಬಳಸಲಾಗುತ್ತದೆ. ಅದೇ ರೀತಿ ಏಕದಿನ ಪಂದ್ಯದಲ್ಲಿ ಆಟಗಾರರು ಬಣ್ಣದ ಸಮವಸ್ತ್ರ ಧರಿಸುವ ಕಾರಣಕ್ಕೆ ಬಿಳಿ ಚೆಂಡು ಬಳಸಲಾಗುತ್ತಿದೆ. ಕೆಂಪು ಬಣ್ಣದ ಚೆಂಡಿನ ಸೀಮ್ ಸುಮಾರು 80 ಓವರ್ ಹಾಳಾಗದೇ ಉಳಿಯಬಲ್ಲದು. ಆದರೆ ಬಿಳಿ ಚೆಂಡಿನ ಸೀಮ್ ಬೇಗನೆ ಹಾಳಾಗಿ ಹೋಗುತ್ತದೆ.
Related Articles
Advertisement
ಮೊದಲು ಪಿಂಕ್ ಬಾಲ್ ಗಳಿಗೆ ಬಿಳಿ ಬಣ್ಣದ ನೂಲಿನಿಂದ ಹೊಲಿಯಲಾಗುತ್ತಿತ್ತು. (ಸೀಮ್) ಆದರೆ ಮೊದಲ ಕೆಲವು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಈ ಬಿಳಿ ನೂಲು ಸರಿಯಾಗಿ ಕಾಣುವುದಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಐಸಿಸಿ ಬಿಳಿ ನೂಲಿನ ಬದಲು ಕಪ್ಪು ನೂಲಿನ ಮೊರೆ ಹೋಯಿತು. ( ಚೆಂಡಿನ್ನು ಸ್ವಿಂಗ್ ಮಾಡಲು ಸೀಮ್ ಅತೀ ಮುಖ್ಯ)
ಭಾರತದಲ್ಲಿ ಪಿಂಕ್ ಬಾಲ್ ಭಾರತದಲ್ಲಿ ಈ ಮೊದಲು ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಉಪಯೋಗಿಸಲಾಗಿತ್ತು. ಬೆಂಗಾಲ್ ಸೂಪರ್ ಲೀಗ್ ನಲ್ಲೂ ಬಳಸಲಾಗಿತ್ತು. ( ಸೌರವ್ ಗಂಗೂಲಿ ಬೆಂಗಾಲ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿದ್ದ ಸಮಯ ) ಸದ್ಯ ಭಾರತ ತಂಡದಲ್ಲಿರುವ ಚೇತೇಶ್ವರ್ ಪೂಜಾರ, ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ರಿಷಭ್ ಪಂತ್ ಮತ್ತು ಕುಲದೀಪ್ ಯಾದವ್ ಮಾತ್ರ ಪಿಂಕ್ ಬಾಲ್ ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇದುವರೆಗೆ ಒಟ್ಟು 11 ಡೇ ನೈಟ್ ಪಂದ್ಯಗಳು ನಡೆದಿದ್ದು, ಅವೆಲ್ಲಾ ಆಯಾ ದೇಶದ ಬೇಸಿಗೆ ಕಾಲದಲ್ಲಿ ನಡೆದಿದೆ. ಆದರೆ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಈ ಪಂದ್ಯ ಮೊದಲ ಚಳಿಗಾಲದ ಡೇ ನೈಟ್ ಪಂದ್ಯ ಎನ್ನುವುದು ವಿಶೇಷ. ಇಬ್ಬನಿ ತಬ್ಬಿದರೆ? ನೀವು ಹಗಲು ರಾತ್ರಿ ಏಕದಿನ ಪಂದ್ಯದಲ್ಲಿ ಗಮನಿಸಿರಬಹುದು. ಬೌಲರ್ ಗಳು ಆಗಾಗ ತಮ್ಮ ಕರವಸ್ತ್ರದಿಂದ ಚೆಂಡನ್ನು ಒರೆಸುತ್ತಿರುತ್ತಾರೆ. ಇದಕ್ಕೆ ಕಾರಣ ರಾತ್ರಿ ಪಾಳಿಯಲ್ಲಿ ಬೀಳುವ ಇಬ್ಬನಿ. ಇದು ಬೌಲರ್ ಗಳ ಪಾಲಿಗೆ ಶಾಪವಿದ್ದಂತೆ. ಇಬ್ಬನಿಯಿಂದ ಒದ್ದೆಯಾದ ಚೆಂಡನ್ನು ಬಿಗಿಯಾಗಿ ಹಿಡಿಯಲಾಗುವುದಿಲ್ಲ. ಸರಿಯಾಗಿ ಸ್ಪಿನ್ ಮಾಡಲು ಕಷ್ಟ . ಕೈಯಿಂದ ಜಾರುತ್ತದೆ. ಚೆಂಡು ಕೂಡ ಬೇಗನೆ ಹಾಳಾಗುತ್ತದೆ. ಚಳಿಗಾಲದಲ್ಲಿ ಇಬ್ಬನಿ ಜಾಸ್ತಿ ಬೀಳುವುದರಿಂದ ಹಗಲು ರಾತ್ರಿಯ ಪಂದ್ಯದಲ್ಲಿ ಚೆಂಡನ್ನು 80 ಓವರ್ ಸರಿಯಾದ ಆಕಾರದಲ್ಲಿ ಕಾಪಾಡುವುದು ಕೂಡಾ ಸವಾಲಿನ ಕೆಲಸವೇ ಸರಿ.
ವಿಶ್ವದಾದ್ಯಂತ ಪ್ರಮುಖ ಮೂರು ಕ್ರಿಕೆಟ್ ಚೆಂಡು ತಯಾರಿಕಾ ಕಂಪನಿಗಳಿವೆ. ಡ್ಯೂಕ್, ಕುಕಬುರಾ ಮತ್ತು ಎಸ್ ಜಿ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಡ್ಸೂಕ್ಸ್ ಬಾಲ್ ಗಳನ್ನು ಬಳಸಿದರೆ, ಆಸ್ಟ್ರೇಲಿಯಾ , ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಕುಕಬುರಾ ಚೆಂಡನ್ನು ಬಳಸಲಾಗುತ್ತದೆ. ಇನ್ನು ಭಾರತ ಮತ್ತು ಏಷ್ಯಾದ ದೇಶಗಳಲ್ಲಿ ಎಸ್ ಜಿ ಚೆಂಡಿನಲ್ಲಿ ನಿಗದಿತ ಓವರ್ ಮತ್ತು ಟೆಸ್ಟ್ ಕ್ರಿಕೆಟ್ ಆಡಲಾಗುತ್ತದೆ. ಆಯಾ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣವಿರುವ ಚೆಂಡನ್ನೇ ಇಲ್ಲಿ ಬಳಸಲಾಗುತ್ತದೆ.