Advertisement
“ಚಿತ್ರದುರ್ಗದ ಕಲ್ಲಿನ ಕೋಟೆ, ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ’ ಎಂಬುದು ಖ್ಯಾತಿವೆತ್ತ ಮಾತು. ಇದನ್ನು ತ.ರಾ.ಸು. ಅವರ “ದುರ್ಗಾ ಸ್ತಮಾನ’ ಕಾದಂಬರಿ ನಮಗೆ ಮತ್ತಷ್ಟು ಸ್ಪಷ್ಟವಾಗಿ ಮನದಟ್ಟು ಮಾಡಿಕೊಡುತ್ತದೆ.
Related Articles
Advertisement
ಮದಕರಿ ನಾಯಕನ ಆಳ್ವಿಕೆ ದುರ್ಗದ ಇತಿಹಾಸದಲ್ಲಿ ಮೇಲೇರುತ್ತಾ ಸಾಗುತ್ತದೆ. “ರಾಜ’ ಎಂಬ ಹಣೆಪಟ್ಟಿಯ ರೂಪುರೇಷೆಗಳನ್ನು ಬದಲಾಯಿಸಲು ಬಹಳ ಶ್ರಮ ಪಡುತ್ತಾ ಜನರೊಂದಿಗೆ ಬೆರೆಯುವ ಆತ ಎಲ್ಲರ ಮೆಚ್ಚಿನ ನಾಯಕನಾಗುತ್ತಾನೆ. ಆದರೆ ಹಿತೈಷಿಗಳು ಇದ್ದಲ್ಲಿ ಹಿತ ಶತ್ರುಗಳೂ ಇರು ತ್ತಾರೆ. ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಸಾಗಿದ್ದ ಹೈದರ ಲಿಗೆ ಚಿತ್ರದುರ್ಗ ಕಲ್ಲಿನ ಕಡಲೆಯಾಗುತ್ತದೆ.
ಹೈದರಾಲಿ ಮೊದಲು ಬಂಟ ನಾಗಿ ಬಂದು ಬಳಿಕ ಶತ್ರು ವಾಗಿ ಬದಲಾಗಿ ದುರ್ಗ ದೊಳಗೆ ಗೂಢಚಾರರನ್ನು ಕಳಿಸಿ ಉಪಾಯದಿಂದ ದುರ್ಗ ವನ್ನು ಒಡೆಯುತ್ತಾನೆ. ಅದಕ್ಕಾಗಿ ಕಳ್ಳಿ ನರಸ ಪ್ಪನವರ ಹೆಸರನ್ನೂ ಬಳಸುತ್ತಾನೆ. ಹೈದರಾ ಲಿಯ ಒಳತಂತ್ರದ ವಿರುದ್ಧ ಗೆಲ್ಲಲಾಗದೆ ಮದಕರಿಯು ಯುದ್ಧವನ್ನು ಸೋಲುವ ಮೂಲಕ ಚರಿತ್ರೆಯ ಪುಟದಲ್ಲಿ ಚಿತ್ರದುರ್ಗದ ವೈಭವದ ಅಧ್ಯಾಯ ಮುಗಿಯುತ್ತದೆ.
“ದುರ್ಗಾಸ್ತಮಾನ’ವು ದುರ್ಗದ ನಾಯಕರ ಕೊನೆಯ ದಿನಗಳ ಬಗೆಗಿರುವ ಕಾದಂಬರಿ ಯಾದರೂ ಅದು ದುರ್ಗದ ಮೇಲಿನ ಹೆಮ್ಮೆ ಯನ್ನು ಮೊದಲಿಗಿಂತ ಇನ್ನಷ್ಟು ಹೆಚ್ಚಿಸುತ್ತದೆ. ಮದಕರಿನಾಯಕ ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದಾಗ ಎಲ್ಲೋ ಒಂದು ಕ್ಷಣ ನಮ್ಮ ಹೃದಯವೂ ಕಂಪಿಸುತ್ತದೆ. ಅವನ ಈಡೇರದ ಕನಸು, “ಹೈದರಾಲಿಯ ಪಂಜರ’ದ ಕುರಿತಾಗಿ ಓದಿದಾಗ ಕಣ್ಣಾಲಿಗಳು ಒ¨ªೆ ಯಾಗುತ್ತವೆ. ಇತಿಹಾಸ ಪ್ರಧಾನವಾದ ಈ ಕೃತಿಯಲ್ಲಿ ರಾಜರ ಕಾಲದ ಒಳಸುಳಿಗಳು, ತಂತ್ರಗಳನ್ನು ಕಾದಂಬರಿಕಾರರು ಕಟ್ಟಿಕೊಟ್ಟಿದ್ದು, ಪ್ರತೀ ಪುಟವೂ ಕುತೂಹಲಕಾರಿಯಾಗಿ ದೇಶ ಪ್ರೇಮದ ಕಿಚ್ಚನ್ನು ನಮ್ಮಲ್ಲಿ ಹೊತ್ತಿಸುತ್ತದೆ.
-ರಂಜಿತಾ ವಿ. ಎಲ್., ಚಿಕ್ಕಮಗಳೂರು