Advertisement

370ನೇ ವಿಧಿಯ ಇತಿಹಾಸ

12:27 AM Aug 06, 2019 | Sriram |

ಅಕ್ಟೋಬರ್‌ 26, 1947
ಜಮ್ಮು ಮತ್ತು ಕಾಶ್ಮೀರದ ರಾಜ ಹರಿ ಸಿಂಗ್‌ ಸಹಿ ಮಾಡಿದ ಒಪ್ಪಂದದಲ್ಲಿ 370ನೇ ವಿಧಿ ಅಸ್ತಿತ್ವಕ್ಕೆ ಬಂದಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ಆಗ ಪ್ರಧಾನಿ ಎಂಬುದಾಗಿ ರಾಜ ಹರಿ ಸಿಂಗ್‌ ಹಾಗೂ ಭಾರತದ ಪ್ರಧಾನಿ ಜವಾಹರಲಾಲ್‌ ನೆಹರೂರಿಂದ ನೇಮಿಸಲ್ಪಟ್ಟಿದ್ದ ಶೇಖ್‌ ಅಬ್ದುಲ್ಲಾ ಈ 370ನೇ ವಿಧಿಯನ್ನು ರೂಪಿಸಿದ್ದರು. ಆರಂಭದಲ್ಲಿ ಇವರು ಇದನ್ನು ತಾತ್ಕಾಲಿಕ ಎಂದು ಉಲ್ಲೇಖೀಸು ವುದನ್ನು ವಿರೋಧಿಸಿ, ಇದು ಸಂಪೂರ್ಣ ಸ್ವಾಯತ್ತ ರಾಜ್ಯವಾಗಿರಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಕೇಂದ್ರ ಸರಕಾರ ಇದಕ್ಕೆ ಒಪ್ಪಲಿಲ್ಲ.

Advertisement

ಸಾಮಾನ್ಯವಾಗಿ ವಿವಿಧ ರಾಜರುಗಳ ಆಡಳಿತ ಪ್ರದೇಶಗಳು ಭಾರತ ಸರಕಾರದಲ್ಲಿ ವಿಲೀನವಾಗುವಾಗ ಮಾಡಿಕೊಂಡ ಒಪ್ಪಂದದಂತೆಯೇ ಈ ಒಪ್ಪಂದವೂ ಇತ್ತು. ಆದರೆ ಆಗಿನ ಪರಿಸ್ಥಿತಿಯಲ್ಲಿ ಕೆಲವು ಷರತ್ತುಗಳನ್ನು ರಾಜ ಹರಿ ಸಿಂಗ್‌ ಹಾಗೂ ಶೇಖ್‌ ಅಬ್ದುಲ್ಲಾ ವಿಧಿಸಿದ್ದರು.

ಕೇವಲ ವಿದೇಶಾಂಗ ವ್ಯವಹಾರ, ಸಂವಹನ ಮತ್ತು ರಕ್ಷಣೆಯನ್ನು ಒದಗಿಸುವ ಅಧಿಕಾರ ಮಾತ್ರವೇ ಕೇಂದ್ರ ಸರಕಾರಕ್ಕೆ ಇರಬೇಕು ಎಂದು ರಾಜ ಹರಿ ಸಿಂಗ್‌ ಸೂಚಿಸಿದ್ದರು. ಉಳಿದಂತೆ ಯಾವುದೇ ನಿರ್ಧಾರವನ್ನು ಕೈಗೊಳ್ಳು ವುದಿದ್ದರೂ ರಾಜ್ಯದ ಅನುಮತಿ ಅಗತ್ಯ. ಒಂದು ವೇಳೆ ಈ ಸಹಮತವನ್ನು ಹೊಂದದೇ ಇದ್ದಲ್ಲಿ ವಿಭಜನೆಗೂ ಪೂರ್ವ ಸ್ಥಿತಿಗೆ ಎರಡೂ ಪಕ್ಷಗಳು ಅಂದರೆ ಭಾರತ ಸರಕಾರ ಮತ್ತು ಜಮ್ಮು ಕಾಶ್ಮೀರ ಬರುತ್ತದೆ ಎಂಬ ಷರತ್ತನ್ನು ವಿಧಿಸಲಾಗಿತ್ತು.

ಅಕ್ಟೋಬರ್‌ 17, 1949
370ನೇ ವಿಧಿಯನ್ನು ಜಾರಿಗೊಳಿಸಲಾಯಿತು. ಭಾರತದ ಸಂವಿಧಾನದಿಂದ ಜಮ್ಮು ಕಾಶ್ಮೀರ ರಾಜ್ಯವನ್ನು ಹೊರಗಿಡಲಾಯಿತು. ಇದರಲ್ಲಿ ತನ್ನದೇ ಸಂವಿಧಾನವನ್ನು ಹೊಂದಲು ಜಮ್ಮು ಕಾಶ್ಮೀರಕ್ಕೆ ಅವಕಾಶ ಮಾಡಿಕೊಡಲಾ ಯಿತು. ರಕ್ಷಣೆ, ವಿದೇಶಾಂಗ ವ್ಯವಹಾರ ಮತ್ತು ಸಂವಹನವನ್ನು ಹೊರತುಪಡಿಸಿ ಎಲ್ಲ ಇತರ ವಿಷಯಗಳಲ್ಲಿ ರಾಜ್ಯವೇ ತನ್ನ ಕಾನೂನು ರಚಿಸಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು.

ಈ ವಿಧಿ ತಾತ್ಕಾಲಿಕವಾಗಿದ್ದು, ಇದನ್ನು ರಾಜ್ಯದ ಶಾಸನಸಭೆ ಅನುಮೋದಿ ಸಿತು. ಇದರ ಅಡಿಯಲ್ಲಿ ರಾಜ್ಯದ ಸಂವಿಧಾನವನ್ನು ರೂಪಿಸಲಾಯಿತು ಮತ್ತು ರಾಜ್ಯ ಮತ್ತು ಕೇಂದ್ರದ ಅಧಿಕಾರವನ್ನು ಇದರಲ್ಲಿ ನಿಗದಿಡಪಡಿಸಲಾಯಿತು.

Advertisement

1950-54
ಈ ಅವಧಿಯಲ್ಲಿ ರಾಜ್ಯ ಸರಕಾರ ಮತ್ತು ಭಾರತ ಸರಕಾರದ ಮಧ್ಯೆ ನಡೆದ ಚರ್ಚೆಯ ನಂತರ ಹಲವು ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿದೆ. ಈ ಪೈಕಿ ಮೊದಲ ಕ್ರಮವೆಂದರೆ 370ನೇ ವಿಧಿಯ ಜಾರಿಯನ್ನು ಔಪಚಾರಿಕವಾಗಿ ಘೋಷಣೆ ಮಾಡಿದ್ದರು. ಇದರ ಪ್ರಕಾರ ಜಮ್ಮು ಮತ್ತು ಕಾಶ್ಮೀರ ನಾಗರಿಕರಿಗೆ ಭಾರತದ ಪೌರತ್ವ ಒದಗಿಸಲಾಯಿತು. ಅಷ್ಟೇ ಅಲ್ಲ, ಜಮ್ಮು ಕಾಶ್ಮೀರದ ಜನರಿಗೆ ಭಾರತದ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳನ್ನೂ ಅನ್ವಯವಾಗುವಂತೆ ಮಾಡಿತು. ಜೊತೆಗೆ ಭಾರತದ ಸುಪ್ರೀಂಕೋರ್ಟ್‌ನ ನ್ಯಾಯವ್ಯಾಪ್ತಿಯನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಿಸಿತ್ತು. ಅಲ್ಲದೆ, ಇದೇ ವೇಳೆ ಸಂವಿಧಾನಕ್ಕೆ 35ಎ ವಿಧಿಯನ್ನೂ ಸೇರಿಸಲಾಯಿತು. ಈ ವಿಧಿಯ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಹೊರಗಿನವರು ಇಲ್ಲಿ ಭೂಮಿಯನ್ನು ಖರೀದಿ ಮಾಡುವುದು ಅಥವಾ ಉದ್ಯೋಗ ಪಡೆದುಕೊಳ್ಳುವುದನ್ನು ನಿರ್ಬಂಧಿಸಲಾಯಿತು.

ನವೆಂಬರ್‌ 17, 1956
370ನೇ ವಿಧಿ ರದ್ದುಗೊಳಿಸಬೇಕೆ ಎಂಬ ಬಗ್ಗೆ ಚರ್ಚೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ನಡೆಯಿತಾದರೂ, ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಹೀಗಾಗಿ ಸಂವಿಧಾನದ ಭಾಗ 21ರಲ್ಲಿ ಉಲ್ಲೇಖೀಸಿದಂತೆ ತಾತ್ಕಾಲಿಕ, ರೂಪಾಂತರಗೊಳಿಸಬಹುದು ಮತ್ತು ವಿಶೇಷ ಸೌಲಭ್ಯ ಎಂಬ ಅಂಶ ಕಾಯಂ ಆಗಿ ಉಳಿಯುವಂತಾಯಿತು.

ಪ್ರಸ್ತುತ ಸನ್ನಿವೇಶ
370ನೇ ವಿಧಿಯನ್ನು ಜಾರಿಗೆ ತಂದ ನಂತರದಲ್ಲಿ ಇದಕ್ಕೆ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ಇದನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ರಾಜ್ಯದ ವಿಧಾನಸಭೆ ಯಾವುದೇ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಇದು ಶಾಶ್ವತವಾಗಿ ಸೇರಿಹೋಗಿದೆ. ಹೀಗಾಗಿ ಕಾನೂನು ಪರಿಣಿತರು ಮತ್ತು ವಿಪಕ್ಷ ನಾಯಕರ ಪ್ರಕಾರ ಈ ವಿಧಿಯನ್ನು ಕೇವಲ ವಿಧಾನಸಭೆ ಮತ್ತು ಸಾಂವಿಧಾನಿಕ ತಿದ್ದುಪಡಿಯ ಮೂಲಕ ತೆಗೆದುಹಾಕಬಹುದು. ಸದ್ಯ ರಾಜ್ಯದಲ್ಲಿ ಶಾಸನಸಭೆ ಇಲ್ಲ. 2018 ನವೆಂಬರ್‌ನಿಂದಲೂ ರಾಜ್ಯಪಾಲರ ಆಳ್ವಿಕೆ ಇದೆ.

ಯಾರು ಏನೆಂದರು?
ವಿಧಿ 370 ನಿಷೇಧಿಸಲು ಸಂವಿಧಾನದ ತಿದ್ದುಪಡಿ ಅಗತ್ಯವಿಲ್ಲ. ಅದನ್ನೇ ಇವತ್ತು ಅಮಿತ್‌ ಶಾ ಸಂಸತ್ತಿಗೆ ತಿಳಿಸಿ ದ್ದಾರೆ. ರಾಷ್ಟ್ರಪತಿ ಈಗಾಗಲೇ ವಿಧಿ 370 ನಿಷೇಧಕ್ಕೆ ಒಪ್ಪಿಗೆ ನೀಡಿದ್ದಾರೆ. ಇಂದು ವಿಧಿ 370ಕ್ಕೆ ಸಾವಾಯಿತು
ಸುಬ್ರಮಣಿಯನ್‌ ಸ್ವಾಮಿ, ಬಿಜೆಪಿ ನಾಯಕ

ಮೈನವಿರೇಳುವ ಘಳಿಗೆ. ಜಮ್ಮು ಕಾಶ್ಮೀರದ ವಿಲೀನದಿಂದ ಆ ಭಾಗದಲ್ಲಿ ಅಭಿವೃದ್ಧಿ ಮತ್ತು ಶಾಂತಿ ನೆಲೆಸುವಂತಾಗಲಿ. ಈ ಐತಿಹಾಸಿಕ ಘಟನೆಗೆ ನನ್ನ ಮಕ್ಕಳೂ ಸಾಕ್ಷಿ ಆಗುವಂತೆ ಮಾಡುತ್ತೇನೆ.
ಪ್ರಿಯಾಂಕಾ ಚತುರ್ವೇದಿ, ಶಿವಸೇನೆ ನಾಯಕಿ

ವಿಧಿ 370 ಹಲವಾರು ದಶಕಗಳಿಂದ ಜಮ್ಮು ಕಾಶ್ಮೀರವನ್ನು ಭಾದಿಸುತ್ತಿದ್ದ ಕ್ಯಾನ್ಸರ್‌. ಕಡೆಗೂ ಅದಕ್ಕೆ ಔಷಧಿ ಕಂಡುಕೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಈಗ ನಾವು ಜಮ್ಮು ಕಾಶ್ಮೀರದ ಅಭಿವೃದ್ಧಿ ಕಡೆ ಸಂಚರಿಸಬಹುದು.
ಅನುಪಮ್‌ ಖೇರ್‌, ಬಾಲಿವುಡ್‌ ನಟ

ಬಲಪಂಥೀಯರು ಇದನ್ನು “ಅಂತಿಮ ಪರಿಹಾರ’ ಎನ್ನುತ್ತಿದ್ದಾರೆ. ಹಾಗಂದರೇನು? 1942ರಲ್ಲಿ ಯಹೂದಿಗಳ ಸಾಮೂಹಿಕ ನರಮೇಧ ನಡೆಸುವಾಗ ನಾಜಿ ಗಳು ಕೂಡ ಇದೇ ಕೋಡ್‌ ನೇಮ್‌ ಅನ್ನು ಬಳಸಿದ್ದರು.
ಡೆರೆಕ್‌ ಒಬ್ರಿಯಾನ್‌, ಟಿಎಂಸಿ ಸಂಸದ

ವಾಜಪೇಯಿ ಕಾಶ್ಮೀರ ಸಮಸ್ಯೆಗೆ ಪರಿಚಯಿ ಸಿದ್ದು ಮಾನವೀಯತೆ, ಪ್ರಜಾಪ್ರಭುತ್ವ, ಕಾಶ್ಮೀರತೆಯ ತತ್ವ. ಈ ಅಸಾಂವಿಧಾನಿಕ ನಡೆ ಕಾಶ್ಮೀರಿ ಗರಿಗೆ ನೀಡಿದ್ದ ಆಶ್ವಾ ಸನೆ ಈಡೇ ರಿಸುವ ಬದಲು ಆತಂಕವಾದಿ ಗಳ ಕೈ ಬಲಪಡಿಸಿದೆ.
-ಯೋಗೇಂದ್ರ ಯಾದವ್‌, ಸ್ವರಾಜ್‌ ಇಂಡಿಯಾ ಮುಖ್ಯಸ್ಥ

ಸರಕಾರ ಅತಿ ಕೆಟ್ಟ ಮಾದರಿ ಹುಟ್ಟು ಹಾಕಿದೆ. ಇದರರ್ಥ ಕೇಂದ್ರ ಯಾವುದಾದರೂ ರಾಜ್ಯದ ಮೇಲೆ ಸುಲಭವಾಗಿ ರಾಷ್ಟ್ರಪತಿ ಆಳ್ವಿಕೆ ಹೇರಬ ಹುದು. ಅದಕ್ಕಾಗಿ ರಾಜ್ಯದ ಯಾರನ್ನೂ ಕೇಳುವಂತಿಲ್ಲ ಎನ್ನುವಂತಿದೆ.
-ಅಮರೀಂದರ್‌ ಸಿಂಗ್‌,
ಪಂಜಾಬ್‌ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next