Advertisement

Tour Circle: ಐತಿಹಾಸಿಕ ನಗರಿ ಶಿರಾ ಹಿನ್ನೋಟ

10:44 AM Feb 26, 2024 | Team Udayavani |

ಐತಿಹಾಸಿಕ ಪರಂಪರೆಯಲ್ಲಿ ಮಿಂಚಿ ಮರೆಯಾದ ನಗರಗಳಲ್ಲಿ ಶಿರಾ ಕೂಡ ಒಂದು. ಅದೆಷ್ಟೋ ರಾಜ ಮನೆತನಗಳು, ಪಾಳೆಗಾರರು, ಮೊಘಲರು, ಮರಾಠರು, ಆದಿಲ್‌ ಶಾಹಿಗಳು, ಸುಲ್ತಾನರನ್ನು ನೋಡಿದಂತಹ ನಗರವಿದು.

Advertisement

ಶಿರಾ ಪ್ರಕೃತಿಯನ್ನು ವರ್ಣಿಸಲು ನಮ್ಮದು ಮಲೆನಾಡಲ್ಲ, ಬರದ ನಾಡು. ಇಲ್ಲಿ ಮಳೆಯಾಗುವುದೇ ಕಡಿಮೆ, ಇನ್ನು ಪ್ರಕೃತಿ, ಹಚ್ಚ ಹಸುರು ಎಂಬ ಮಾತೆಲ್ಲಿ. ಇಲ್ಲಿ ಕಾಣ ಸಿಗುವುದು ಬರೀ ಜಾಲಿ ಮರಗಳು ಮಾತ್ರ. ಸರಕಾರದಿಂದ ಬಿಡುಗಡೆಯಾದ ಬರದ ತಾಲೂಕುಗಳಲ್ಲಿ ಶಿರಾದು ಮೇಲುಗೈ.

ಐತಿಹಾಸಿಕ ಪರಂಪರೆ

ರತ್ನಗಿರಿಯ ಪಾಳೆಗಾರನಾದ ರಂಗಪ್ಪ ನಾಯಕನು ಶಿರಾ ಪ್ರದೇಶದಲ್ಲಿ ಸಂಚರಿಸುವಾಗ ಮೊಲವೊಂದು ನಾಯಿಗಳನ್ನು ಎದುರಿಸುತ್ತಿರುವುದನ್ನು ಕಾಣುತ್ತಾನೆ. ಈ ಘಟನೆಯನ್ನು ಕಂಡ ಮೇಲೆ ವೀರತನದ ಮಣ್ಣು ಎಂದು ನಗರವನ್ನು ಕಟ್ಟಲು ನಿರ್ಣಯಿಸುತ್ತಾನೆ. ದೇವಣ, ಸಿರಿಯಣ ಎಂಬುವವರ ಸಹಾಯ ತೆಗೆದುಕೊಂಡು ಕಟ್ಟಲು ಶುರು ಮಾಡುತ್ತಾನೆ. ಕೋಟೆ ಕಟ್ಟುವ ಸಮಯದಲ್ಲಿ ಹೇರಳವಾದ ಸಂಪತ್ತು ಸಿಕ್ಕಿ ಕೋಟೆ ನಿರ್ಮಾಣವಾಗುತ್ತದೆ.

ಅಂದಿನಿಂದ ರಂಗಪ್ಪ ನಾಯಕನು ಕಸ್ತೂರಿ ರಂಗಪ್ಪ ನಾಯಕ ಎಂಬ ಬಿರುದು ಪಡೆಯುತ್ತಾನೆ. 15ನೇ ಶತಮಾನದಲ್ಲಿ ಈ ಕೋಟೆಯು ನಿರ್ಮಾಣವಾಯಿತು ಎಂದು ಇತಿಹಾಸಕಾರರು ತಿಳಿಸಿಕೊಟ್ಟಿದ್ದಾರೆ. ಕೋಟೆಯು ವಿವಿಧ ಸಂರಕ್ಷಣ ವಿಧಾನದಿಂದ ನಿರ್ಮಿಸಿದ್ದಾರೆ. ಮುಂದೆ ಈ ಕೋಟೆಯನ್ನು ದಿಲಾವರ್‌ ಖಾನ್‌ನು ಅಭಿವೃದ್ಧಿ ಮಾಡುತ್ತಾನೆ. ಈ ಕೋಟೆಯೇ ಟಿಪ್ಪುಸುಲ್ತಾನ್‌ ಶ್ರೀರಂಗಪಟ್ಟಣದಲ್ಲಿ ಕಟ್ಟಿದ ಕೋಟೆಗೆ ಸ್ಫೂರ್ತಿ ಎನ್ನುತ್ತಾರೆ.

Advertisement

ಪ್ರೇಕ್ಷಣಿಯ ಸ್ಥಳಗಳು

ಶಿರಾ ತಾಲೂಕಿನ ಪ್ರಮುಖ ಆಕರ್ಷಣೆ ಎಂದರೆ ತಪ್ಪಿಲ್ಲ. ಅನೇಕ ರಾಷ್ಟ್ರಗಳಿಂದ ಇಲ್ಲಿಗೆ ಬಂದು ತಮ್ಮ ವಂಶಾಭಿವೃದ್ಧಿ ಮಾಡುತ್ತವೆ. ಈ ಸ್ಥಳವನ್ನು 1999ರಲ್ಲಿ ಪಕ್ಷಿಧಾಮವೆಂದು ಸರಕಾರವು ಗುರುತಿಸಿತು. ರಾಜ್ಯದ 2ನೇ ದೊಡ್ಡ ಬಣ್ಣದ ಕೊಕ್ಕರೆಗಳ ಸ್ಥಳವಾಗಿದೆ. ಮಾಗೋಡು ಹೂವಿನ ತೇರು, ಸ್ಪಟಿಕಪುರಿ ಕಲ್ಲುಗಾಲಿ ರಥ, ಮರಡಿ ಗುಡ್ಡ, ಕಳುವರಹಳ್ಳಿ ಜುಂಜಪ್ಪ, ಮಲ್ಲಿಕ್‌ ರೆಹನ್‌ ದರ್ಗಾ, ಕಸ್ತೂರಿ ರಂಗಪ್ಪ ನಾಯಕ ಕೋಟೆ ಇನ್ನು ಮುಂತಾದ ಐತಿಹಾಸಿಕ ಸ್ಥಳಗಳು, ದೇವಾಲಯಗಳು, ಶಾಸನಗಳು, ಪ್ರೇಕ್ಷಣೀಯ ಸ್ಥಳಗಳನ್ನು ಕಾಣಬಹುದಾಗಿದೆ.

ನಾಡೋಜ ಬರಗೂರರು  ಈ ತಾಲೂಕಿನ ಪ್ರಮುಖರಲ್ಲಿ ಒಬ್ಬರಾಗಿದ್ದಾರೆ.  ಇವರ ಅನೇಕ ಚಿತ್ರಗಳು ಕೂಡ ಇಲ್ಲಿ ಚಿತ್ರೀಕರಣ ನಡೆದಿದೆ. ಇಲ್ಲಿ ಆಚರಿಸುವ ವೈಭವಯುತ ಜಾತ್ರೆ ಎಂದರೆ ಅದು ಕಂಬದ ರಂಗಸ್ವಾಮಿ ಜಾತ್ರಾ ಮಹೋತ್ಸವ ಮತ್ತು ತೇರಿನ ಉತ್ಸವವಾಗಿದೆ. ಒಂದು ಕಾಲದ ಐತಿಹಾಸಿಕ ನಗರವಾದ ಶಿರಾ ಈಗ ಸಂಪೂರ್ಣ ಬದಲಾಗಿ ಆಧುನೀಕರಣದ ಗಾಳಿ ಸೋಕುತ್ತಿದೆ.

ಇಲ್ಲಿರುವ ಪಕ್ಷಿಧಾಮಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಅಧಿಕವಾಗುತ್ತಿದ್ದು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರಕಾರ ಕೂಡ ಸಂಪೂರ್ಣ ನೆರವು ನೀಡುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶಿರಾ ಪ್ರಚಲಿತವಾದರೆ ಇಲ್ಲಿನ ಬಹುತೇಕ ವ್ಯವಸ್ಥೆಗಳು ಅಭಿವೃದ್ಧಿ ಕಾಣುವುದರಲ್ಲಿ ಅನುಮಾನ ಇಲ್ಲ ಎನ್ನಬಹುದು.

-ಲೋಕೇಶ್‌ ಸೂರಿ

ಶಿರಾ

Advertisement

Udayavani is now on Telegram. Click here to join our channel and stay updated with the latest news.

Next