ಮಾಹಿತಿ ಪ್ರಕಾರ ಹಿಂದೂ ದೇವಾಲಯವನ್ನು ಕೆಡವಿದ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ವಾಸ್ತವವಾಗಿ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಈ ಐತಿಹಾಸಿಕ ದೇವಾಲಯವಿದೆ. 1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಾದ ಬಳಿಕ ಈ ದೇವಸ್ಥಾನವನ್ನು ಮುಚ್ಚಲಾಗಿತ್ತು ಇದೀಗ ಅದೇ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಪಾಕ್ ಸರಕಾರ ಮುಂದಾಗಿದೆ ಅಲ್ಲದೆ ಕಳೆದ ಹದಿನೈದು ದಿನಗಳಿಂದ ಕಟ್ಟಡ ಕಾಮಗಾರಿ ಕೂಡ ನಡೆಯುತ್ತಿದೆ ಎಂದು ಹೇಳಲಾಗಿದೆ.
Advertisement
ಮತ್ತೊಂದೆಡೆ, ಇಲ್ಲಿ ಯಾವುದೇ ಹಿಂದೂ ದೇವಾಲಯ ಇರಲಿಲ್ಲ ಎಂದು ಆಡಳಿತ ಅಧಿಕಾರಿಗಳು ಪ್ರತಿಪಾದಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಲಾಂಡಿ ಕೋಟಾಲ್‌ನಲ್ಲಿರುವ ಪತ್ರಕರ್ತ ಇಬ್ರಾಹಿಂ ಶಿನ್ವಾರಿ ಅವರ ಹೇಳಿಕೆಯಂತೆ ಹಿಂದೂ ದೇವಾಲಯವು ಲಾಂಡಿ ಕೋಟಾಲ್ ಮಾರುಕಟ್ಟೆಯ ಮಧ್ಯಭಾಗದಲ್ಲಿತ್ತು ಮತ್ತೆ ಇದು 1947 ರಲ್ಲಿ ಮುಚ್ಚಲಾಯಿತು ಆ ಬಳಿಕ ಈ ದೇವಾಲಯ ಹಾಗೆಯೆ ಇತ್ತು 1992 ರಲ್ಲಿ ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ನಂತರ ಇಲ್ಲಿನ ಕುಟುಂಬಗಳು ಭಾರತಕ್ಕೆ ವಲಸೆ ಬಂದರು ಆ ಬಳಿಕ ದೇವಾಲಯವನ್ನು ಕೆಡವಿ ಹಾಕಲಾಯಿತು ಇದೀಗ ಈ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ, ಅಷ್ಟುಮಾತ್ರವಲ್ಲದೆ ಬಾಲ್ಯದಲ್ಲಿ ದೇವಸ್ಥಾನದ ಬಗ್ಗೆ ಅನೇಕ ಕಥೆಗಳನ್ನು ತಮ್ಮ ಪೂರ್ವಜರಿಂದ ಕೇಳಿದ್ದೆ ಎಂದು ನೆನಪಿಸಿಕೊಂಡ ಶಿನ್ವಾರಿ ಲಂಡಿ ಕೋಟಾಲ್ ನಲ್ಲಿ ಖೈಬರ್ ಟೆಂಪಲ್ ಎಂಬ ಹೆಸರಿನ ದೇವಸ್ಥಾನವಿತ್ತು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಹೇಳಿದ್ದಾರೆ.