Advertisement

ಆತನ ಫ್ರಿಡ್ಜ್ ನಲ್ಲಿತ್ತು 183 ನಾಯಿ,ಹಾವು,ಮೊಲ,ಹಲ್ಲಿ

11:27 PM Apr 16, 2022 | Team Udayavani |

ವಾಷಿಂಗ್ಟನ್‌: ಸರಣಿ ಕೊಲೆ ಮಾಡು ವವರು, ಬೇರೆಯವರಿಗೆ ಹಿಂಸಿಸಿ ಅದರಲ್ಲಿ ಆನಂದ ಅನುಭವಿಸುವಂತಹ ವಿಚಿತ್ರ ಮನುಷ್ಯರ ಬಗ್ಗೆ ನೀವು ಕೇಳಿರುತ್ತೀರಿ. ಅಮೆರಿಕದ ಅರಿಜೋ ನಾದಲ್ಲೂ ಅಂತದ್ದೇ ಒಬ್ಬ ವಿಚಿತ್ರ ಮನುಷ್ಯ ಬರೋಬ್ಬರಿ 183 ಪ್ರಾಣಿ ಗಳನ್ನು ಕೊಂದು, ಮನೆಯ ಫ್ರಿಡ್ಜ್ ನಲ್ಲಿಟ್ಟು ಕೊಂಡಿದ್ದ ವಿಚಾರ ಇದೀಗ ಹೊರಬಿದ್ದಿದೆ.

Advertisement

ಮೈಕೆಲ್‌ ಪ್ಯಾಟ್ರಿಕ್‌ ಟರ್ಲ್ಯಾಂಡ್‌(43) ಹೆಸರಿನ ವ್ಯಕ್ತಿ, ಗೋಲ್ಡನ್‌ ವ್ಯಾಲಿ ಎಂಬಲ್ಲಿ ತನ್ನ ಪತ್ನಿಯೊಂದಿಗೆ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಇತ್ತೀಚೆಗೆ ಆತ ಮನೆ ಖಾಲಿ ಮಾಡಿ ಕೊಂಡು ಬೇರೆ ನಗರದಲ್ಲಿ ವಾಸ ಹೂಡಿದ್ದಾನೆ. ಖಾಲಿಯಾಗಿದ್ದ ಮನೆ ಯನ್ನು ಸ್ವಚ್ಛ ಮಾಡಲೆಂದು ಮನೆಯ ಮಾಲಕ ಬಂದಾಗ ಆತನಿಗೆ ವಿಚಿತ್ರ ಕಾಣಿಸಿಕೊಂಡಿದೆ.

ಅಲ್ಲಿದ್ದ ದೊಡ್ಡ ಫ್ರಿಡ್ಜ್ ನಲ್ಲಿ ಹಾವು, ನಾಯಿ, ಮೊಲ, ಹಲ್ಲಿ ಸೇರಿ ಹಲವು ಪ್ರಾಣಿಗಳ ಮೃತ ದೇಹ ಪತ್ತೆಯಾಗಿದೆ.

ಆ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಒಟ್ಟು 183 ಪ್ರಾಣಿಗಳ ದೇಹ ಫ್ರಿಡ್ಜ್ ನಲ್ಲಿದ್ದು, ಅದರಲ್ಲಿ ಅನೇಕ ವನ್ನು ಜೀವಂತವಾಗಿ ರುವಾಗಲೇ ಫ್ರಿಡ್ಜ್ ನಲ್ಲಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಉಪಚುನಾವಣೆ: ಟಿಎಂಸಿ, ಕಾಂಗ್ರೆಸ್, ಆರ್‌ಜೆಡಿ ಗೆಲುವು; ಬಿಜೆಪಿಗೆ ಗೆಲುವಿಲ್ಲ

Advertisement

ಆತ ಅದೇ ಊರಿನ ಮಹಿಳೆಯೊಬ್ಬಳಿಂದ ಹಾವಿನ ಸಂತಾನೋತ್ಪತ್ತಿಗಾಗಿ ಆಕೆ ಸಾಕಿದ್ದ ಹಾವನ್ನು ಬಾಡಿಗೆ ತಂದಿದ್ದು, ಅದನ್ನೂ ಫ್ರಿಡ್ಜ್ ನಲ್ಲೇ ಇಟ್ಟಿದ್ದ ಎನ್ನುವ ವಿಚಾರ ತಿಳಿದುಬಂದಿದೆ.ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆತನನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next