Advertisement

ಹಿರಿಯರನ್ನು ಗೌರವಿಸಿ

05:50 PM Dec 16, 2019 | Naveen |

ಹಿರಿಯೂರು: ಹಿರಿಯ ನಾಗರಿಕರನ್ನು ಪ್ರೀತಿ ಹಾಗೂ ಗೌರವದಿಂದ ಕಾಣುವಂತಹ ಕೆಲಸವನ್ನು ಇಂದಿನ ಯುವ ಸಮೂಹ ಮಾಡಬೇಕು ಎಂದು ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎನ್‌. ಶ್ರೀಪತಿ ಹೇಳಿದರು.

Advertisement

ನಗರದ ವಾಣಿವಿಲಾಸ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ, ವಾಣಿವಿಲಾಸ ವಿದ್ಯಾಸಂಸ್ಥೆ ಹಾಗೂ ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾ ಸಂಘ ಸಕ್ಕರ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ನಾಗರಿಕರ ಬಗ್ಗೆ ಅಸಡ್ಡೆ, ಅಗೌರವದ ಭಾವನೆ ತೋರದೆ ಅವರ ಮಾರ್ಗದರ್ಶನ ಪಡೆದು ಉನ್ನತಿ ಸಾಧಿಸಬೇಕು ಎಂದರು. ಸಮಾಜಸೇವಕಿ ಶಶಿಕಲಾ ರವಿಶಂಕರ್‌ ಮಾತನಾಡಿ, ಸಮಾಜದಲ್ಲಿ ದುಡಿಮೆಯ ನೆಪದಲ್ಲಿ ಮಕ್ಕಳು ಹೆತ್ತ ತಂದೆ-ತಾಯಿಯನ್ನು ದೂರ ಮಾಡಬಾರದು. ಹಣ, ಅಧಿಕಾರ, ಆಸ್ತಿ, ಅಂತಸ್ತುಗಳಿಗೆ ಆದ್ಯತೆ ನೀಡದೆ ತಂದೆ-ತಾಯಿ, ಗುರುಹಿರಿಯರನ್ನು ಗೌರವಿಸಿದಾಗ ಮಾತ್ರ ಮಾನವೀಯ ಮೌಲ್ಯಗಳು ಉಳಿಯುತ್ತವೆ ಎಂದು ಅಭಿಪ್ರಾಯಪಟ್ಟರು.

ಪ್ರೊ| ಎಚ್‌.ಎನ್‌. ನರಸಿಂಹಯ್ಯ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ, ಅನುಭವ ಹಾಗೂ ಚಿಂತನೆಗಳನ್ನು ರೂಢಿಸಿಕೊಂಡಲ್ಲಿ ಉತ್ತಮ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ. ಅನುಭವ ಎನ್ನುವುದು ಯಾವುದೇ ಶಾಲಾ-ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಕಲಿತ ವಿದ್ಯೆಗಿಂತ ಅಮೂಲ್ಯವಾದುದು ಎಂದರು.

ಅಧ್ಯಕ್ಷತೆ ವಹಿಸಿದ್ದ ವಾಣಿವಿಲಾಸ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಸ್‌. ರಘುನಾಥ್‌ ಮಾತನಾಡಿ, ಮಾನವೀಯತೆ ಮತ್ತು ಮನುಷ್ಯತ್ವದ ಕೊರತೆಯಿಂದ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ಇಂದಿನ ಯುವ ಸಮುದಾಯ ತಂದೆ-ತಾಯಿಗಳನ್ನು ಮರಣದ ನಂತರ ಪೂಜಿಸುವ ಬದಲು ಬದುಕಿರುವಾಗಲೇ ಪ್ರೀತಿಯಿಂದ ಕಾಣುವ ಗುಣ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

Advertisement

ವಾಣಿವಿಲಾಸ ವಿದ್ಯಾಸಂಸ್ಥೆ ಕಾರ್ಯದರ್ಶಿ ಆಲೂರು ಹನುಮಂತರಾಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿ ಜೀವನದಿಂದಲೇ ಮಕ್ಕಳು ಮನೆಯಲ್ಲಿ ಗುರು-ಹಿರಿಯರನ್ನು, ತಂದೆ-ತಾಯಿಗಳನ್ನು, ಪ್ರೀತಿಸುವ ಗೌರವಿಸುವ ಗುಣ ಬೆಳೆಸಿಕೊಳ್ಳಲಿ ಎಂಬ ಉದ್ದೇಶದಿಂದ ಹಿರಿಯ ನಾಗರಿಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಜೆ.ಸಿ.ನಾಗಭೂಷಣಯ್ಯ, ಎಚ್‌. ರಾಮಚಂದ್ರಪ್ಪ, ಎಸ್‌.ಶಂಭುಲಿಂಗಯ್ಯ, ಎನ್‌. ವೆಂಕಟೇಶಯ್ಯ, ಸಣ್ಣಭೀಮಣ್ಣ, ಪ್ರೊ| ಬಿ.ಕೆ. ನಾಗಣ್ಣ, ಜಗನ್ನಾಥ ಗುಪ್ತಾ, ದೇವರಾಜಮೂರ್ತಿ, ಜೋಗಪ್ಪ, ಸುಂದರಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ಗೌರವಾಧ್ಯಕ್ಷ ಕೆ.ಆರ್‌. ವೆಂಕಟೇಶ್‌, ಛೇರ್ಮನ್‌ ಬಿ.ಎಸ್‌. ನವಾಬ್‌ ಸಾಬ್‌, ಉಪಾಧ್ಯಕ್ಷ ಎಚ್‌.ಎಸ್‌. ಸುಂದರರಾಜ್‌, ಕಾರ್ಯದರ್ಶಿ ಎಂ.ಎಸ್‌. ರಾಘವೇಂದ್ರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ. ವೀರಣ್ಣ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಎಸ್‌.ಜಿ. ರಂಗಸ್ವಾಮಿ ಸಕ್ಕರ, ಟಿ. ಮಲ್ಲೇಶಪ್ಪ, ಅಂಬಣ್ಣ, ಹಿರಿಯ ಪತ್ರಕರ್ತರಾದ ಪಿ.ಆರ್‌. ಸತೀಶ್‌ ಬಾಬು, ಎಂ.ಬಿ. ಲಿಂಗಪ್ಪ, ವಾಣಿವಿಲಾಸ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿಯರಾದ ಹೇಮಲತಾ, ಶಾಂತಾಬಾಯಿ, ವ್ಯವಸ್ಥಾಪಕಿ ಮೊಹಸಿನಾ ಫಿರ್ದೋಸ್‌ ಸೇರಿದಂತೆ ಶಿಕ್ಷಕ- ಶಿಕ್ಷಕಿಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next