Advertisement

ಕಿಷ್ಕಿಂಧೆಯಂತಾದ ಹುಳಿಯಾರ್‌ ರಸ್ತೆ

11:38 AM Aug 12, 2019 | Naveen |

ಹಿರಿಯೂರು: ಹಿರಿಯೂರು ದಿನೇ ದಿನೇ ಬೆಳೆಯುತ್ತಿರುವ ನಗರವಾಗಿದೆ. 60 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಪುರಸಭೆಯಿಂದ ನಗರಸಭೆಗೆ ಬಡ್ತಿ ಹೊಂದಿದೆ. ಆದರೆ ಜನದಟ್ಟಣೆಯಿಂದ ಕೂಡಿರುವ ಹುಳಿಯಾರ್‌ ರಸ್ತೆ ಅಗಲೀಕರಣ ಸಮರ್ಪಕವಾಗಿ ಆಗದೇ ಇರುವುದರಿಂದ ಸಮಸ್ಯೆಯೂ ಹೆಚ್ಚುತ್ತಿದೆ.

Advertisement

ನಗರದ ಮಧ್ಯಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ-4 ಹಾದು ಹೋಗಿದ್ದು, ಪ್ರಧಾನ ರಸ್ತೆಯಾದ ಗಾಂಧಿ ವೃತ್ತದಲ್ಲಿ ಸದಾ ಜನ ದಟ್ಟಣೆ ಇರುತ್ತದೆ. ಇದೇ ವೃತ್ತದಲ್ಲಿ ಹುಳಿಯಾರ್‌ ರಸ್ತೆ ಹಾದು ಹೋಗಿದ್ದು, ಈ ಮಾರ್ಗದಲ್ಲಿ ಮೈಸೂರು, ಶ್ರೀರಂಗಪಟ್ಟಣ, ಹಾಸನ, ಮಂಗಳೂರು, ಅರಸಿಕೆರೆ, ತಿಪಟೂರುಗಳಿಗೆ ಭಾರಿ ವಾಹನಗಳು, ಲಾರಿಗಳು, ಬಸ್‌ಗಳು ಸಂಚರಿಸುತ್ತವೆ.

ರಾಜ್ಯ ಹೆದ್ದಾರಿಯಾಗಿದ್ದರೂ 20-30 ವರ್ಷಗಳಿಂದ ಈ ರಸ್ತೆ ಅಭಿವೃದ್ಧಿ ಹೊಂದಿಲ್ಲ. ಇದುವರೆಗೂ ರಸ್ತೆ ಅಗಲೀಕರಣವೂ ಆಗಿಲ್ಲ. ಹೀಗಾಗಿ ಅತ್ಯಂತ ಕಿರಿದಾದ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕಾಗಿದೆ. ಇಲ್ಲಿ ಅಪಘಾತಗಳು ಸಾಮಾನ್ಯವಾಗಿಬಿಟ್ಟಿವೆ. ಇದೇ ರಸ್ತೆಯಲ್ಲಿ ಶಾಲಾ-ಕಾಲೇಜುಗಳಿದ್ದು, ಸಾವಿರಾರು ವಿದ್ಯಾರ್ಥಿಗಳು ಪ್ರತಿ ದಿನ ಓಡಾಡುತ್ತಾರೆ. ಪಾದಚಾರಿಗಳ, ವಿದ್ಯಾರ್ಥಿಗಳ, ವಯೋವೃದ್ಧರ ಗೋಳು ಹೇಳತೀರದಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ನಗರಸಭೆಯವರು ಎಚ್ಚೆತ್ತುಕೊಂಡು ಶೀಘ್ರ ಹುಳಿಯಾರ್‌ ರಸ್ತೆ ಅಗಲೀಕರಣಕ್ಕೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಈ ಕುರಿತು ನಗರಸಭೆ ಪೌರಾಯುಕ್ತ ಮಹಂತೇಶ್‌ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು. ಹುಳಿಯಾರ್‌ ರಸ್ತೆ ಅಗಲೀಕರಣ ಕಾಮಗಾರಿ ನಗರೋತ್ಥಾನ ಯೋಜನೆಯಡಿ ನಡೆಯುತ್ತಿದೆ. ನಗರದ ಹೊರಭಾಗದಲ್ಲಿರುವ ವೇದಾವತಿ ಪ್ರಥಮ ದರ್ಜೆ ಕಾಲೇಜಿನಿಂದ ಹುಳಿಯಾರ್‌ ರಸ್ತೆ ಚಾನಲ್ವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ಹಂತ ಹಂತವಾಗಿ ನಗರದಲ್ಲೂ ಆರಂಭಗಾಗಲಿದೆ. ರಸ್ತೆ ಅಕ್ಕ ಪಕ್ಕದಲ್ಲಿರುವ ಮರ ಮತ್ತು ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಈ ಕೆಲಸ ಪೂರ್ಣ ಗೊಂಡ ನಂತರ ಉಳಿದ ಕೆಲಸ ಆರಂಭಿಸಲಾಗುವುದು.ಎರಡನೇ ಹಂತದ ಕಾಮಗಾರಿಯಲ್ಲಿ ಚಾನಲ್ನಿಂದ ನಗರದ ಒಳಭಾಗದಿಂದ ಗಾಂಧಿ ವೃತ್ತದ ವರೆಗೆ ರಸ್ತೆ ಅಗಲೀಕರಣ ನಡೆಯಬೇಕಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next