Advertisement

Hiriydaka: ಆನ್‌ಲೈನ್‌ ಮೂಲಕ ಯುವತಿಗೆ 2.80 ಲಕ್ಷ ರೂ. ವಂಚನೆ

08:06 PM Nov 05, 2024 | Team Udayavani |

ಹಿರಿಯಡಕ: ಕ್ರಿಪ್ಟೋ ಕರೆನ್ಸಿಯ ಬಗ್ಗೆ ಮೊಬೈಲ್ ನಲ್ಲಿ ಬಂದ ಸಂದೇಶವನ್ನು ನಂಬಿ ಹಿರಿಯಡಕ ಬೊಮ್ಮಾರಬೆಟ್ಟು ಗ್ರಾಮದ ಚೈತ್ರಾ (26) 2.80 ಲಕ್ಷ ರೂ. ಕಳೆದುಕೊಂಡಿದ್ದಾರೆ.

Advertisement

ವಂಚಕರು ಏಳು ತಿಂಗಳ ಹಿಂದೆ ಚೈತ್ರಾ ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿ ಡೌನ್‌ಲೋಡ್‌ ಮಾಡುವಂತೆ ತಿಳಿಸಿದ್ದರು. ಅದರಂತೆ ಚೈತ್ರಾ ಗೇಮ್‌ ಡೌನ್‌ಲೋಡ್‌ ಮಾಡಿಕೊಂಡಿದ್ದು, ತತ್‌ಕ್ಷಣಕ್ಕೆ 20 ಸಾವಿರ ರೂ. ಪಾವತಿ ಮಾಡುವಂತೆ ಸೂಚಿಸಲಾಗಿದ್ದು ಅದರಂತೆ ಗೂಗಲ್‌ ಪೇ ಮೂಲಕ ಹಣ ಪಾವತಿಸಿದ್ದರು. ಅದೇ ರೀತಿ ವಂಚಕರ ವಿವಿಧ ಖಾತೆಗಳಿಗೆ 2 ಲಕ್ಷ 80 ಸಾವಿರ ರೂಪಾಯಿಯನ್ನು ಗೂಗಲ್‌ ಪೇ ಮಾಡುವ ಮೂಲಕ ಪಾವತಿಸಿದ್ದು ಕೊನೆಗೆ ಮೋಸ ಹೋಗಿರುವುದಾಗಿ ತಿಳಿದು ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next