Advertisement

Hiriydaka: ಎಮ್.ಎಸ್.ಪಿ.ಸಿ.ಯಲ್ಲಿ ಲಕ್ಷಾಂತರ ರೂ. ಗೋಲ್ ಮಾಲ್

11:08 AM Feb 23, 2024 | Team Udayavani |

ಹಿರಿಯಡಕ: ಹಿರಿಯಡಕ ಸಮೀಪದ  ಮಂಜೊಟ್ಟಿ ಎಂಬಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ಆಗುವ ಎಮ್.ಎಸ್.ಪಿ.ಸಿ.ಯ ಪ್ರಧಾನ ಕಚೇರಿಯಲ್ಲಿ ಲಕ್ಷಾಂತರ ರೂ. ಗೋಲ್ ಮಾಲ್ ನಡೆದಿದೆ ಎಂದು ಕಾರ್ಯದರ್ಶಿ ಯಶೋಧ ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು‌ ನೀಡಿದ ಬಗ್ಗೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಬಿವೃದ್ದಿ ಇಲಾಖೆ ಕರ್ನಾಟಕ ಸರ್ಕಾರ ಇದರ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಅಂಗನವಾಡಿ ಕೇಂದ್ರಗಳಿಗೆ ಅಹಾರ ಸರಬರಾಜು ಮಾಡುವ ಬೊಮ್ಮರಬೆಟ್ಟು ಗ್ರಾಮದ ಮಂಜೊಟ್ಟಿ ಎಂಬಲ್ಲಿರುವ ಎಮ್.ಎಸ್.ಪಿ.ಸಿ.ಯಲ್ಲಿ ಕಳೆದ 12 ವರ್ಷಗಳಿಂದ ಲೆಕ್ಕ ಪತ್ರ ನಿರ್ವಹಣೆ ಮಾಡುವ ಭವ್ಯ ಎಂಬವರು ಸುಮಾರು ಮೂರು ತಿಂಗಳ ಹಿಂದೆ ಹರೀಶ್ ಗೌಡ ಎಂಬವರಿಂದ ಸಂಸ್ಥೆಯ ಲೆಕ್ಕ ಪರಿಶೋಧನೆ ಮಾಡಿಸಿದಾಗ ಸಂಸ್ಥೆಯು ಸುಮಾರು 18 ಲಕ್ಷ ನಷ್ಟದಲ್ಲಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಲೆಕ್ಕಪರಿಶೋಧಕಿ ಭವ್ಯ ಅವರಲ್ಲಿ ವಿಚಾರಿಸಿ ಲೆಕ್ಕ ಪತ್ರದ ದಾಖಲೆಗಳನ್ನು ತೋರಿಸುವಂತೆ ಕೇಳಿದಾಗ ಲೆಕ್ಕ ಪತ್ರದ ಪುಸ್ತಕವನ್ನು ಬಿಸಾಡಿ ನೀವೆ ನೋಡಿಕೊಳ್ಳಿ ಎಂದು ಹೇಳಿರುತ್ತಾರೆ. ಇದರಿಂದ ಸಂಸ್ಥೆಯಲ್ಲಿ ಅವ್ಯವಹಾರ ನಡೆದಿದ್ದರ ಬಗ್ಗೆ ತಿಳಿದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಉಪನಿರ್ದೇಶಕರಿಗೆ ದೂರು ನೀಡಿದ್ದು, ಅವರು ಸಂಸ್ಥೆಯ ಬ್ಯಾಂಕ್  ಸ್ಟೇಟ್ ಮೆಂಟ್ ಪಡೆದು ಪರಿಶೀಲನೆ ನಡೆಸಿ ಚೆಕ್ ಮತ್ತು ಎಟಿಎಂ ಮುಖಾಂತರ ಲಕ್ಷಗಟ್ಟಲೆ ಹಣ ತೆಗೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಭವ್ಯ ಬಲತ್ಕಾರವಾಗಿ ಅಧ್ಯಕ್ಷ ಹಾಗೂ ಖಜಾಂಚಿಯವರಿಂದ ಸಹಿ ಮಾಡಲು ಹೇಳಿ, ಇಲ್ಲವಾದಲ್ಲಿ ನಿಮ್ಮನ್ನು ಕೆಲಸದಿಂದ ವಜಾ ಮಾಡುವುದಾಗಿ ಬೆದರಿಸಿ ಖಾಲಿ ಚೆಕ್ಕುಗಳಿಗೆ ಹಾಗೂ ಸಂಸ್ಥೆಯ ಲೇಟರ್‌‌ರೆಡ್ ಗೆ ಸಹಿ ಮಾಡಿಸಿಕೊಂಡು ಬ್ಯಾಂಕಿನಿಂದ ಲಕ್ಷಾಂತರ ಹಣ ಪಡೆದು ತನ್ನ ಸ್ವಂತ ಉಪಯೋಗಕ್ಕೆ ಖರ್ಚು  ಮಾಡಿ ಸಂಸ್ಥೆಗೆ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಅದಲ್ಲದೆ ಸಂಸ್ಥೆಯ ಸದಸ್ಯರಿಗೆ ಬೆದರಿಕೆ ಕರೆ ಮಾಡಿರುವುದಾಗಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next