ನವದೆಹಲಿ: ದೇಶದಲ್ಲಿ ಕೊರೊನಾ ಬಳಿಕ ಅರ್ಥ ವ್ಯವಸ್ಥೆ ಚೇತರಿಕೆಯಾಗಿದೆ ಎಂಬುದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. 13 ತಿಂಗಳಿನಿಂದ ದೇಶದ ಸೇವಾ ವಲಯ ಪ್ರಗತಿಯ ಹಾದಿಯಲ್ಲಿದೆ.
ಹೀಗಾಗಿ, ಹಿಂದಿನ 14 ವರ್ಷಗಳಿಗೆ ಹೋಲಿಕೆ ಮಾಡಿದರೆ ನೇಮಕ ಪ್ರಕ್ರಿಯೆ ಹೆಚ್ಚಾಗಿದೆ. ಸೇವಾ ಕ್ಷೇತ್ರದಲ್ಲಿಯೇ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಿದೆ ಎನ್ನುವುದು ಗಮನಾರ್ಹ.
ಕಳೆದ ಜುಲೈನಲ್ಲಿ ಭಾರತದ ಸೇವಾ ಚುಟಿವಟಿಕೆಯು 55.7ರಷ್ಟಿತ್ತು. ಆಗಸ್ಟ್‌ನಲ್ಲಿ ಇದು ವೇಗವಾಗಿ ಬೆಳೆದಿದ್ದು, 57.2ಕ್ಕೆ ತಲುಪಿತು. 50ಕ್ಕಿಂತ ಹೆಚ್ಚಿನ ಗುಣಾಂಕ ಇದ್ದರೆ ಅದು ವಿಸ್ತರಣೆಯ ಸಂಕೇತ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಸಾರಿಗೆ, ಮಾಹಿತಿ ಮತ್ತು ಸಂವಹನ ವಲಯ ತೀವ್ರವಾಗಿ ಪ್ರಗತಿ ಕಂಡಿತು.
“ಎರಡನೇ ತ್ತೈಮಾಸಿಕದಲ್ಲಿ ಸೇವಾ ವಲಯ ವೇಗವಾಗಿ ಬೆಳವಣಿಗೆ ಪಡೆಯಿತು. ಕೊರೊನಾ ನಿರ್ಬಂಧಗಳ ತೆರವು, ಮಾರ್ಕೆಂಟಿಂಗ್ ಪ್ರಯತ್ನಗಳು ಕಂಪನಿಗಳಿಗೆ ಹೆಚ್ಚಿನ ಲಾಭ ತಂದುಕೊಟ್ಟಿತು.
ಈ ಹಿನ್ನೆಲೆಯಲ್ಲಿ ಸೇವಾ ಕ್ಷೇತ್ರ ವಿಸ್ತರಣೆ ಜತೆಗೆ ಉದ್ಯೋಗಾವಕಾಶಗಳು ಹೆಚ್ಚಿತು,’ ಎಂದು ಆರ್ಥಿಕ ತಜ್ಞ ಪೊಲಿಯಾನಾ ಡಿ ಲಿಮಾ ತಿಳಿಸಿದ್ದಾರೆ.