Advertisement
ಅದರಲ್ಲೂ ಗ್ರೆಗ್ ಚಾಪೆಲ್‌ರನ್ನು ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆ ಮಾಡಲು ಕ್ರಿಕೆಟ್ ದಂತಕಥೆ ಸುನೀಲ್ ಗಾವಸ್ಕರ್, ಅಂದಿನ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲಿ¾ಯಾ ವಿರೋಧಿಸಿದ್ದರು. ಅದಾದ ಮೇಲೂ ಹಠ ಹಿಡಿದು ಚಾಪೆಲ್‌ರನ್ನು ಕೋಚ್ ಹುದ್ದೆಗೆ ಗಂಗೂಲಿ ಶಿಫಾರಸು ಮಾಡಿದರು. ಅದರ ಪರಿಣಾಮ ಗಂಗೂಲಿ ಭಾರತ ತಂಡದ ನಾಯಕತ್ವ ಕಳೆದುಕೊಳ್ಳುವುದರ ಜೊತೆಗೆ, ತಂಡದಿಂದಲೂ ಹೊರಬಿದ್ದರು ಎನ್ನುವುದು ಈ ಸಂದರ್ಶನದಲ್ಲಿ ದಾಖಲಾದ ಮಹತ್ವದ ಸಂಗತಿ.ಗಂಗೂಲಿ ಹೇಳಿದ್ದೇನು?: 2004ರಲ್ಲಿ ವಿದೇಶ ಪ್ರವಾಸ ಮುಗಿಸಿ ಬಂದ ಮೇಲೆ ನನಗೆ ಮುಂದಿನ ಕೋಚ್ ಯಾರಾಗಬೇಕೆಂಬ ಬಗ್ಗೆ ಯೋಚನೆ ಶುರುವಾಗಿತ್ತು (ನ್ಯೂಜಿಲೆಂಡ್‌ನ ಜಾನ್ ರೈಟ್ ಅವಧಿ ಮುಗಿದಿತ್ತು). ನನ್ನ ಆಯ್ಕೆಯನ್ನು ಅಂದಿನ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾಗೆ ತಿಳಿಸಿದೆ. ಈ ವಿಷಯ ತಿಳಿದ ಹಲವರು ನನಗೆ ಸಲಹೆ ಗ್ರೆಗ್ ಚಾಪೆಲ್ ಬೇಡವೆಂದರು. ಅದರಲ್ಲಿ ಸುನೀಲ್ ಗಾವಸ್ಕರ್ ಒಬ್ಬರು. “ಈ ಬಗ್ಗೆ ಯೋಚನೆ ಮಾಡು. ಗ್ರೆಗ್ ಕಟ್ಟಿಕೊಂಡು ತಂಡವನ್ನು ನಡೆಸುವುದು ಬಹಳ ಕಷ್ಟದ ಕೆಲಸ. ತರಬೇತುದಾರನಾಗಿ ಅವರ ಸಾಧನೆ ಚೆನ್ನಾಗಿಲ್ಲ’ ಎಂದು ಗಾವಸ್ಕರ್ ಹೇಳಿದ್ದರು.
ಕೆಕೆಆರ್‌ನಿಂದ ಗಂಗೂಲಿ ಹೊರಬಿದ್ದಿದ್ದೇಕೆ? -88 ರನ್ ಗಳಿಸಿದ ಖುಷಿಯಲ್ಲಿ ಎದೆ ಗುದ್ದಿಕೊಂಡಿದ್ದೇ ಗಂಗೂಲಿ ಹೊರಬೀಳಲು ಕಾರಣವೇ?
2008ರಲ್ಲಿ ಐಪಿಎಲ್ ಆರಂಭವಾದಾಗ ಗಂಗೂಲಿ ಅದರ ಪ್ರಮುಖ ಭಾಗವಾಗಿದ್ದರು. ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕನಾಗಿದ್ದರು. ಆದರೆ ಇಲ್ಲೂ ಅವರ ಹಣೆ ಬರಹ ಚೆನ್ನಾಗಿರಲಿಲ್ಲ. ಐಪಿಎಲ್ 3ನೇ ಆವೃತ್ತಿ ಮುಗಿಯುವ ಹೊತ್ತಿಗೆ ಕೋಲ್ಕತಾ ಗಂಗೂಲಿಯನ್ನು ಸೇರಿಸಿ ಬಹುತೇಕ ಎಲ್ಲ ಆಟಗಾರರನ್ನು ತಂಡದಿಂದ ಕೈಬಿಟ್ಟಿತ್ತು. ತನ್ನನ್ನು ನಾಯಕತ್ವದಿಂದ ತೆಗೆದರೂ ಒಬ್ಬ ಆಟಗಾರನಾಗಿಯಂತೂ ಉಳಿಸಿಕೊಳ್ಳುತ್ತಾರೆನ್ನುವುದು ಅವರ ನಿರೀಕ್ಷೆಯಾಗಿತ್ತು. ಅದು ನಡೆಯಲಿಲ್ಲ. ಆ ಬಗ್ಗೆಯೂ ಗಂಗೂಲಿ ಹೇಳಿಕೊಂಡಿದ್ದಾರೆ.
Related Articles
Advertisement
ಆದರೆ ನಡೆದಿದ್ದೇ ಬೇರೆ. ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳಿರುವಾಗ ನಾನು ಟೀವಿ ನೋಡುವುದು, ಪತ್ರಿಕೆ ಓದುವುದು ಮಾಡಲ್ಲ. ಐಪಿಎಲ್ 3ನೇ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಈಡನ್ ಗಾರ್ಡನ್‌ನಲ್ಲಿ ಪಂದ್ಯ ಇದ್ದ ಮಧ್ಯಾಹ್ನ ನಾನು ಸುಮ್ಮನೆ ಟೀವಿ ಹಾಕಿದೆ. ಅದರಲ್ಲಿ ದೊಡ್ಡ ಅಕ್ಷರಗಳಲ್ಲಿ ಗಂಗೂಲಿ ನಿವೃತ್ತಿ ಹೊಂದುವುದು ಸೂಕ್ತ ಎಂದು ಬರುತ್ತಿತ್ತು. ಕೆಲವರು ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಊಹಿಸಿದರು.
ನಾನು ಅದೇ ಸಿಟ್ಟಿನಲ್ಲಿದ್ದೆ. ಅವತ್ತು ಪಂದ್ಯ ನಡೆದಾಗ ನಾನು 88 ರನ್ ಗಳಿಸಿ ತಂಡದ ಜಯಕ್ಕೆ ಕಾರಣವಾಗಿದ್ದೆ. ಆಗ ಉದ್ವೇಗಗೊಂಡಿದ್ದ ನಾನು ಕೈಯನ್ನು ಎದೆಗೆ ಗುದ್ದಿಕೊಂಡಿದ್ದೆ. ಇದು ಪೂರ್ತಿಯಾಗಿ ದಪ್ಪಕ್ಷರದಲ್ಲಿ ಸುದ್ದಿ ಹಾಕಿದ್ದವನ ವಿರುದ್ಧವಾಗಿತ್ತು. ಅದು ತಂಡದ ಮಾಲಿಕ ಶಾರುಖ್ ಆಗಲೀ, ಇತರೆ ಸದಸ್ಯರ ವಿರುದ್ಧವಾಗಲೀ ಇರಲಿಲ್ಲ. ಇರಲಿ, ನನ್ನನ್ನು ತಂಡದಿಂದ ತೆಗೆದುಹಾಕಿದರೂ ಶಾರುಖ್ ಜೊತೆಗಿನ ನನ್ನ ಸ್ನೇಹಕ್ಕೇನು ಅಡ್ಡಿಯಾಗಿಲ್ಲ’ ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.