Advertisement

ಹಿರ್ಗಾನ: ಅಭಿವೃದ್ಧಿ ಕಾಣದ ಹರಿಯಪ್ಪ ಕೆರೆ

01:00 AM Mar 12, 2019 | Team Udayavani |

ಅಜೆಕಾರು: ಹಿರ್ಗಾನ ಗಾ.ಪಂ. ವ್ಯಾಪ್ತಿಯ ಪ್ರಾಚೀನ ಹರಿಯಪ್ಪ ಕೆರೆಯು ಸೂಕ್ತ ನಿರ್ವಹಣೆಯಿಲ್ಲದೆ ಹೂಳು ತುಂಬಿ ಮೈದಾನದಂತಾಗಿದೆ.

Advertisement

ಹಿಂದೆ ಬೇಸಗೆಯಲ್ಲಿಯೂ ಸಮೃದ್ಧ ನೀರಿನಿಂದ ತುಂಬಿರುತ್ತಿದ ಕೆರೆ ಇತ್ತೀಚಿನ ವರ್ಷಗಳಲ್ಲಿ ಬೇಸಗೆಗೂ ಮುನ್ನವೇ ನೀರು ಬರಿದಾಗಿ ಆಟದ ಮೈದಾನದಂತಾಗುತ್ತಿದೆ.

ಕೆರೆಯಲ್ಲಿ ತುಂಬಿ ಹೋಗಿರುವ ಹೂಳನ್ನು ತೆಗೆದಲ್ಲಿ ಪಂಚಾಯತ್‌ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಆಗುವ ಜತೆಗೆ ಪರಿಸರದ ಕೃಕರಿಗೂ ಅನುಕೂಲವಾಗಲಿದೆ.

ಪಂಚಾಯತ್‌ ವ್ಯಾಪ್ತಿಯ ಮಂಗೀ ಲಾರು, ನೆಲ್ಲಿಕಟ್ಟೆ, ಶಿವನಗರಗಳಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತಿದ್ದು ನೀರು ಒದಗಿಸಲು ಪಂಚಾಯತ್‌ ಆಡಳಿತ ಹರಸಾಹಸ ಪಡುವಂತಾಗಿದೆ.

ಪಂಚಾಯತ್‌ ವ್ಯಾಪ್ತಿಯಲ್ಲಿ ಹರಿಯಪ್ಪ ಕೆರೆ ಬಿಟ್ಟರೆ ಬೇರೆ ಯಾವುದೇ ರೀತಿಯ ನೀರಿನ ಮೂಲಗಳಿಲ್ಲ.
ಕುಡಿಯುವ ನೀರು ಒದಗಿಸಲು ಕೊಳವೆ ಬಾಯನ್ನೇ ಅವಲಂಬಿಸಲಾಗಿದ್ದು ಈಗ ಅದರಲ್ಲಿಯೂ ನೀರಿನ ಮಟ್ಟ ತೀವ್ರ ಕುಸಿತಗೊಂಡಿದ್ದು ಬೇಸಗೆಯಲ್ಲಿ ಕುಡಿಯುವ ನೀರು ಒದಗಿಸುವುದು ಪಂಚಾಯತ್‌ಗೆ ಸವಾಲಾಗಿ ಪರಿಣಮಿಸಿದೆ.

Advertisement

ಹಿರ್ಗಾನ ಮೂರೂರಿನ ದುಗ್ಗಣ್ಣ ರಾಯ ವಠಾರದಲ್ಲಿ ಸುಮಾರು 1 ಎಕ್ರೆ ಜಾಗದಲ್ಲಿರುವ ಈ ಕೆರೆಯು ಶತಶತಮಾನಗಳಿಂದ ಸುತ್ತಲಿನ ಕೃ ಭೂುಗೆ ನೀರು ಒದಗಿಸುತ್ತಿತ್ತು.

ಜಲಮಟ್ಟ ವರ್ಷದಿಂದ ವರ್ಷಕ್ಕೆ ಕುಸಿತ
1975ರ ವರೆಗೆ ಈ ಕೆರೆಯ ನೀರನ್ನೇ ಬಳಸಿ ನೆಲ್ಲಿಕಟ್ಟೆ, ಕಂಬÛಪಲ್ಕೆ, ರಾಜೀವನಗರ, ಬೆದ್ರ್ ಮಾರ್‌ ಮುಂತಾದ ಪರಿಸರದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಅನಂತರದ ದಿನಗಳಲ್ಲಿ ಕೆರೆಯಲ್ಲಿ ಹೂಳು ತುಂಬಿ ನೀರು ನಿಲ್ಲಲು ಅವಕಾಶವಿಲ್ಲದೆ ಜಲಮಟ್ಟ ವರ್ಷದಿಂದ ವರ್ಷಕ್ಕೆ ಕುಸಿದು ಈಗ ಬೇಸಗೆಯಲ್ಲಿ ನೀರೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆರೆಯಲ್ಲಿ ನೀರಿನಾಶ್ರಯ ಇಲ್ಲದೆ ಇರುವುದರಿಂದ ಕೃಷಿಗೆ ಬೇಕಾದ ನೀರಿನ ವ್ಯವಸ್ಥೆ ಇಲ್ಲದೆ ವರ್ಷಕ್ಕೆ 2 ಬೆಳೆ ಬೆಳೆಯುತ್ತಿದ್ದ ಭತ್ತದ ಗದ್ದೆಗಳು ಈಗ ಪಾಳುಬಿದ್ದಿವೆ.

ಪಂಚಾಯತ್‌ ವ್ಯಾಪ್ತಿಯಲ್ಲಿ ಹೊಸದಾಗಿ ತೆರೆದ ಬಾವಿ, ಕೊಳವೆ ಬಾವಿ ನಿರ್ಮಾಣ ಮಾಡುವ ಬದಲಿಗೆ ಜಲಮೂಲವಿರುವ ಪ್ರಾಚೀನ ಕೆರೆಯನ್ನು ಅಭಿವೃದ್ಧಿಪಡಿಸಿದಲ್ಲಿ ಪಂಚಾಯತ್‌ ವ್ಯಾಪ್ತಿಗೆ ಬೇಕಾದಷ್ಟು ನೀರು ದೊರೆತು ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿ ಸರಕಾರದ ಧ ಯೋಜನೆಗಳ ಮೂಲಕ ಕೆರೆ ಅಭಿವೃದ್ಧಿ ಪಡಿಸಬೇಕು ಎಂದು ಸ್ಥಳಿಯರು ಮನ ಮಾಡಿದ್ದಾರೆ.

ಅಭಿವೃದ್ಧಿಗೆ ಚಿಂತನೆ 
ಪಂಚಾಯತ್‌ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಯೋಗ ಖಾತರಿ ಯೋಜನೆಯಡಿ ಮಾಡಬೇಕು ಎಂಬ ಸರಕಾರದ ಸೂಚನೆ ಇರುವುದರಿಂದ ಈ ಕೆರೆ ಅಭಿವೃದ್ಧಿ ಪಡಿಸಲು ಸಾಧ್ಯವೇ ಎಂಬ ಬಗ್ಗೆ ಚಿಂತನೆ ಮಾಡಲಾಗುವುದು.
-ಸಂಧ್ಯಾ ಶೆಟ್ಟಿ, ಪಿಡಿಒ, ಹಿರ್ಗಾ ನ  ಗ್ರಾ.ಪಂ.

ಹೆಚ್ಚಿನ ಅನುದಾನ ಅಗತ್ಯ
ಪಂಚಾಯತ್‌ನ‌ ಸೀಮಿತ ಅನುದಾನದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಲು ಅಸಾಧ್ಯವಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ವಿಶೇಷ ಅನುದಾನ ಒದಗಿಸಿದಲ್ಲಿ ಕೆರೆ ಅಭಿವೃದ್ಧಿಪಡಿಸಿ ಕುಡಿಯುವ ನೀರಿನ ಸಮಸ್ಯೆ ಮುಕ್ತಿಗೊಳಿಸಬಹುದು. ಈ ಬಗ್ಗೆ ಈಗಾಗಲೇ ಅಧಿಕಾರಿಗಳ ಗಮನ ಸೆಳೆಯಲಾಗಿದೆ.
– ಸಂತೋಷ್‌ ಕುಮಾರ್‌ ಶೆಟ್ಟಿ, ಅಧ್ಯಕ್ಷರು, ಹಿರ್ಗಾನ ಗ್ರಾ.ಪಂ.

– ಜಗದೀಶ್‌ ರಾವ್‌ ಅಂಡಾರು

Advertisement

Udayavani is now on Telegram. Click here to join our channel and stay updated with the latest news.

Next