ಹಿರೇಬಾಗೇವಾಡಿ: ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿ ಆಡಳಿತ ವ್ಯವಸ್ಥೆಯು ವಿಫಲವಾಗಿದ್ದರಿಂದ ಗ್ರಾಮದಲ್ಲಿ ಶಿಕ್ಷಣ ಹಿನ್ನಡೆ ಅನುಭವಿಸುವಂತಾಗಿದೆ.
Advertisement
ಇದಕ್ಕೆ ಹಿರೇಬಾಗೇವಾಡಿಯ ಸರ್ಕಾರಿ ಪದವಿ ಪೂರ್ವ ವಿದ್ಯಾಲಯವೇ ನಿದರ್ಶನ. ಕೇವಲ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅವಲಂಬಿಸಿದ ಗ್ರಾಮಕ್ಕೆ ಸರ್ಕಾರಿ ಪ್ರೌಢ ಶಾಲೆ ಹಾಗೂ ಕಾಲೇಜುಗಳು ಬೇಕೆನ್ನುವುದು ಸ್ಥಳೀಯ ಕೆಲ ಶಿಕ್ಷಣ ಪ್ರೇಮಿಗಳ ಆಶಯವಾಗಿತ್ತು. ಈ ದಿಸೆಯಲ್ಲಿ ಕೆಲ ಉತ್ಸಾಹಿಗಳು ಪ್ರಯತ್ನಿಸಿದ್ದರಿಂದ ಹಂತ-ಹಂತವಾಗಿ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜು ಅಸ್ತಿತ್ವಕ್ಕೆ ಬಂದಿವೆ. ಆದರೆ ಸರ್ಕಾರದ ಅನುದಾನ ಲಭ್ಯವಿದ್ದರೂ ಸಕಾಲದಲ್ಲಿ ಸದ್ಬಳಕೆಯಾಗದೇ ವಿದ್ಯಾರ್ಥಿಗಳಿಗೆ ಕಟ್ಟಡ ಸೌಲಭ್ಯ ಸಿಗುತ್ತಿಲ್ಲ.
Related Articles
Advertisement
ಸರ್ಕಾರ ಅನುದಾನ ನೀಡಿ ಎರಡು ವರ್ಷವಾದರೂ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದೇ ನೂತನ ಕಟ್ಟಡದಲ್ಲಿ ಕಲಿಯುವ ಭಾಗ್ಯ ಇಲ್ಲಿನ ವಿದ್ಯಾರ್ಥಿಗಳಿಗೆ ಕೂಡಿ ಬಂದಿಲ್ಲ. ಈ ಬಗ್ಗೆ ಕಾಲೇಜಿನ ಅಧ್ಯಕ್ಷರಾಗಿರುವ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಗಮನ ಹರಿಸಿ ಕಟ್ಟಡ ಹಸ್ತಾಂತರ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಬೇಕೆಂಬುದು ಸ್ಥಳೀಯರ ಅಗ್ರಹವಾಗಿದೆ.