Advertisement

ಪಶು ಆಸ್ಪತ್ರೆಗೆ ವೈದ್ಯರು, ಸಿಬ್ಬಂದಿ ನೇಮಿಸಿ

04:12 PM Apr 18, 2021 | Team Udayavani |

ಮಾಸ್ತಿ: ಮಾಲೂರು ತಾಲೂಕಿನ ಪಶುಇಲಾಖೆ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂಸಿಬ್ಬಂದಿ ಕೊರತೆ ನೀಗಿಸಿ, ಪಶುಗಳಿಗೆಸಕಾಲಕ್ಕೆ ಚಿಕಿತ್ಸೆಯ ಸೌಲಭ್ಯ ಕಲ್ಪಿಸುವಮೂಲಕ ಹೈನೋದ್ಯಮವನ್ನುಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿ,ರೈತ ಸಂಘದಿಂದ ಮಾಸ್ತಿ ಪಶುವೈದ್ಯಾಧಿಕಾರಿಗಳ ಮೂಲಕಪಶುಪಾಲನಾ ಇಲಾಖೆ ಸಚಿವರಿಗೆಮನವಿ ಸಲ್ಲಿಸಲಾಯಿತು.ರೈತ ಸಂಘದ ರಾಜ್ಯ ಉಪಾಧ್ಯಕ್ಷಕೆ.ನಾರಾಯಣಗೌಡ ಮಾತನಾಡಿ,ಕೊರೊನಾದಿಂದ ಎಲ್ಲಾ ಕ್ಷೇತ್ರದಜನರು ಸಂಕಷ್ಟದಲ್ಲಿದ್ದಾರೆ. ಆದರೆ,ಹೈನೋದ್ಯಮ ಮಾತ್ರ ರೈತರ ಕೈ ಬಿಟ್ಟಿಲ್ಲ.

Advertisement

ಬೆಂಗಳೂರು ಸೇರಿದಂತೆ ಇನ್ನಿತರೆನಗರಗಳಿಂದ ಹಳ್ಳಿಗಳತ್ತ ಬಂದಅನೇಕರ ಜೀವನಕ್ಕೆ ಹೈನೋದ್ಯಮಪೂರಕವಾಗಿದೆ. ಹೈನೋದ್ಯಮಕ್ಕೆಬೇಕಾದ ಸೌಲಭ್ಯಗಳನ್ನು ಸರ್ಕಾರನೀಡಬೇಕು. ಪಶು ಆಸ್ಪತ್ರೆಗಳಲ್ಲಿವೈದ್ಯರು, ಸಿಬ್ಬಂದಿ ಕೊರತೆ ಇದೆ.ಇದರಿಂದ ರೈತರು ತಮ್ಮ ಪಶುಗಳಿಗೆಆರೋಗ್ಯದಲ್ಲಿ ಏರುಪೇರಾದಾಗಸಾಕಷ್ಟು ಪರದಾಡುವ ಪರಿಸ್ಥಿತಿಎದುರಾಗಿದೆ. ಹೀಗಾಗಿ ಕೂಡಲೇ ಈಸಮಸ್ಯೆ ಪರಿಹಾರಕ್ಕಾಗಿ ಮಾಲೂರುತಾಲೂಕಿನ ಪಶು ಇಲಾಖೆ ಆಸ್ಪತ್ರೆಗಳಲ್ಲಿವೈದ್ಯರು, ಸಿಬ್ಬಂದಿ ನೇಮಕ ಮಾಡಬೇಕುಎಂದು ಆಗ್ರಹಿಸಿದರು.

ಕ್ರಮ ಕೈಗೊಳ್ಳುವ ಭರವಸೆ: ಮನವಿಸ್ವೀಕರಿಸಿದ ಮಾಸ್ತಿ ಪಶು ಆಸ್ಪತ್ರೆಯವೈದ್ಯಾಧಿಕಾರಿ ಡಾ.ನಂದೀಶ್‌ಮಾತನಾಡಿ, ಸಿಬ್ಬಂದಿ ಕೊರತೆಯಿಂದಸಮರ್ಪಕ ಸೇವೆ ಕಷ್ಟವಾಗಿದೆ. ಈ ಬಗ್ಗೆಸರ್ಕಾರ ಗಮನಹರಿಸಿ, ಸಿಬ್ಬಂದಿನೇಮಕ ಮಾಡಿದರೆ ಗ್ರಾಮೀಣ ಜನತೆಗೆಅನುಕೂಲವಿದೆ. ಹಿರಿಯಅಧಿಕಾರಿಗಳಿಗೆ ತಮ್ಮ ಮನವಿ ತಲುಪಿಸಿ,ಕ್ರಮ ಕೈಗೊಳ್ಳುವುದಾಗಿ ಭರವಸೆನೀಡಿದರು.ವರದಾಪುರ ಗ್ರಾಮದ ರೈತಯಶವಂತ್‌ ಮಾತನಾಡಿದರು.

ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌,ತಾಲೂಕು ಅಧ್ಯಕ್ಷ ವೆಂಕಟೇಶ್‌,ಉಪಾಧ್ಯಕ್ಷ ಯಲ್ಲಪ್ಪ, ಪ್ರಧಾನಕಾರ್ಯದರ್ಶಿ ಹರೀಶ್‌, ಕೋಲಾರತಾಲೂಕು ಅಧ್ಯಕ್ಷ ಈಕಂಬಳ್ಳಿಮಂಜುನಾಥ್‌, ಮಾಸ್ತಿ ನಾಗರಾಜ್‌,ಸತೀಶ್‌, ನಾರಾಯಣಪ್ಪ, ಮುರುಗೇಶ್‌,ನಾರಾಯಣಸ್ವಾಮಿ, ಶ್ರೀನಿವಾಸರೆಡ್ಡಿ,ರೂಪೇಶ್‌, ಕುಡಿಯನೂರುರಾಮೇಗೌಡ, ವೆಂಕಟೇಶ್‌, ಆಂಜಿಹಾಜರಿದ್ದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next