Advertisement
ಪ್ರಧಾನಿ ಮೋದಿ ಗೋರಕ್ಷಣೆ ನೆಪದಲ್ಲಿ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಹೇಳುತ್ತಾರೆ. ಆದರೆ ಅವರು ಅದನ್ನು ಅನುಸರಿಸುವಂತೆ ಮಾಡುವುದೇ ಇಲ್ಲ ಎಂದು ಖರ್ಗೆ ಪ್ರಬಲವಾಗಿ ಆಕ್ಷೇಪಿಸಿದರು. ಗೋರಕ್ಷಕರ ಮೇಲೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಕೇಂದ್ರ ಸರಕಾರ ವಿವರಣೆ ನೀಡೀತೆ ಎಂದು ಪ್ರಶ್ನಿಸಿದರು. ಅಂಥ ಕೃತ್ಯಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳದೇ ಇರುವುದರಿಂದಲೇ ಗೋರಕ್ಷಕರೆಂಬ ಗುಂಪು ಬಲಿಷ್ಠವಾಗಿದೆ ಎಂದು ಪ್ರಬಲ ಟೀಕಾ ಪ್ರಹಾರ ಮಾಡಿದರು ಖರ್ಗೆ.
Related Articles
Advertisement
ಡಿವೈಎಸ್ಪಿ ಅಯೂಬ್ ಘಟನೆ ಪ್ರಸಾವ: ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಕೇಂದ್ರ ಸಚಿವ ಅನಂತ ಕುಮಾರ್, ಹುಕುಂ ದೇವ್ ನಾರಾಯಣ ಸಿಂಗ್ ಅವರು ವಿಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದರು. ಇತ್ತೀಚೆಗಷ್ಟೇ ಗುಂಪೊಂದು ಕರ್ತವ್ಯ ನಿರತ ಡಿವೈಎಸ್ಪಿ ಅಯೂಬ್ ಪಂಡಿತ್‌ರನ್ನು ಥಳಿಸಿ ಹತ್ಯೆ ಮಾಡಿತ್ತು. ಅದನ್ನು ಯಾಕೆ ವಿಪಕ್ಷದವರು ಉಲ್ಲೇಖೀಸುತ್ತಿಲ್ಲವೆಂದು ಪ್ರಶ್ನಿಸಿದರು. ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಧಾನಿ ಕೂಡ ಈ ನಿಟ್ಟಿನಲ್ಲಿ ಹಲವು ಬಾರಿ ಹೇಳಿದ್ದಾರೆ ಎಂದರು ಸಚಿವ ಅನಂತಕುಮಾರ್.
ಸಬ್ಸಿಡಿ ಸಹಿತ ಸಿಲಿಂಡರ್‌ಗೆ ಇನ್ನು ಪ್ರತಿ ತಿಂಗಳು 4 ರೂ. ಏರಿಕೆಸಬ್ಸಿಡಿ ಸಹಿತ ಅಡುಗೆ ಅನಿಲ ಬಳಕೆದಾರರು ಗಮನಿಸಿ. ಮುಂದಿನ ವರ್ಷದ ಮಾರ್ಚ್ ಒಳಗಾಗಿ ಎಲ್‌ಪಿಜಿ ಸಬ್ಸಿಡಿ ಸ್ಥಗಿತಗೊಳ್ಳಲಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಪ್ರತಿ ತಿಂಗಳಿಗೆ 4 ರೂ.ನಂತೆ ದರ ಹೆಚ್ಚಳವಾಗಲಿದೆ. ಈ ಬಗ್ಗೆ ಕೇಂದ್ರ ಸರಕಾರವೇ ಸ್ವತಃ ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ಆದೇಶ ನೀಡಿದೆ. ಕೆಲ ಸಮಯದ ಹಿಂದೆ ತೈಲ ಕಂಪನಿಗಳಿಗೆ ವ್ಯಾಟ್ ಹೊರತು ಪಡಿಸಿ ಪ್ರತಿ ತಿಂಗಳು 2 ರೂ. ಹೆಚ್ಚಳ ಮಾಡುವ ಬಗ್ಗೆ ಸೂಚನೆ ನೀಡಿತ್ತು. ಈಗ ಅದನ್ನು ನಾಲ್ಕು ರೂಪಾಯಿ ಎಂದು ಪರಿಷ್ಕರಿಸಲು ಸರಕಾರ ಮುಂದಾಗಿದೆ. ಲೋಕಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಈ ಮಾಹಿತಿ ನೀಡಿದ್ದಾರೆ. ಇದರಿಂದಾಗಿ 2018ರ ಮಾರ್ಚ್ ವೇಳೆಗೆ ಅಡುಗೆ ಅನಿಲ ಸಬ್ಸಿಡಿ ಎಂಬ ವಿಚಾರ ಸಂಪೂರ್ಣವಾಗಿ ನಿಂತು ಹೋಗಲಿದೆ. ಜು.1ರಂದು ಬರೋಬ್ಬರಿ 32 ರೂ.ಗಳಷ್ಟು ದರ ಪರಿಷ್ಕರಣೆ ಮಾಡಿದ್ದವು. ಅದು ಆರು ವರ್ಷಕ್ಕೆ ಹೋಲಿಕೆ ಮಾಡಿದರೆ ಗರಿಷ್ಠಾತಿ ಗರಿಷ್ಠ ಹೆಚ್ಚಳವಾಗಿದೆ. ಸಬ್ಸಿಡಿ ಸಹಿತ ಎಲ್‌ಪಿಜಿ ಬೆಲೆ ಬೆಂಗಳೂರಿನಲ್ಲಿ 477 ಆಗಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆ 564 ರೂ. ಜಿಎಸ್‌ಟಿಯ ಅನುಕೂಲ ಎಲ್ಲರಿಗೂ ತಲುಪಲಿ: ಮೋದಿ
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯ ಅನು ಕೂ ಲ ತೆಯು ಎಲ್ಲರಿಗೂ ತಲುಪುವಂತಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದಿದ್ದಾರೆ. ಸೋಮವಾರ ಹರಿಯಾಣ, ದಿಲ್ಲಿ, ಜಮ್ಮು-ಕಾಶ್ಮೀರ ಸೇರಿದಂತೆ ಕೆಲವು ರಾಜ್ಯಗಳ ಬಿಜೆಪಿ ಸಂಸದರ ಜತೆ ಮಾತುಕತೆ ನಡೆಸಿದ ಮೋದಿ ಅವರು, ಜಿಎಸ್‌ಟಿ ಅನುಷ್ಠಾನಕ್ಕೆ ಸಂಬಂಧಿಸಿ ಆಯಾ ರಾಜ್ಯಗಳ ಸಂಸದ ರಿಂದ ಮಾಹಿತಿಯನ್ನು ಪಡೆದಿದ್ದಾರೆ. ಬಳಿಕ ಮಾತ ನಾಡಿದ ಅವರು, “ಜಿಎಸ್‌ಟಿಯ ಲಾಭವು ಎಲ್ಲರಿಗೂ ತಲುಪುವಂತಾಗಬೇಕು. ಸಣ್ಣ ವ್ಯಾಪಾರಿ ಗಳು ಕೂಡ ಜಿಎಸ್‌ಟಿಗೆ ನೋಂದಣಿಯಾಗಬೇಕು’ ಎಂದಿದ್ದಾರೆ. 2 ಮಸೂದೆ ಮಂಡನೆ: ಈ ನಡುವೆ, ಲೋಕಸಭೆ ಯಲ್ಲಿ ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಜಮ್ಮು-ಕಾಶ್ಮೀರವನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವ 2 ವಿಧೇಯಕಗಳನ್ನು ಮಂಡಿಸಿದ್ದಾರೆ. ಸರಕಾರದ ಭೀಮ್ ಆ್ಯಪ್‌ನಲ್ಲಿ ಈವರೆಗೆ 1,500 ಕೋಟಿ ರೂ.ಗಳಷ್ಟು ವಹಿವಾಟು ನಡೆಸಲಾಗಿದೆ ಎಂದು ಸಚಿವ ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದ್ದಾರೆ.