Advertisement

“ಹಿಂದೂ ಧರ್ಮ ಎಂದಿಗೂ ಅಳಿಸಲಾಗದು’

06:40 AM Mar 20, 2018 | Team Udayavani |

ಬ್ರಹ್ಮಾವರ: ಸನಾತನ ಹಿಂದೂ ಧರ್ಮ ಬಲಿಷ್ಠವಾದುದು. ಇದನ್ನು ಯಾರಿಂದಲೂ ಅಳಿಸಲಾಗದು ಎಂದು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಎಂ.ಶ್ರೀಪತಿ ಅಡಿಗ ಹೇಳಿದರು.

Advertisement

ಅವರು ಮಂದಾರ್ತಿ ಶೇಡಿಕೊಡ್ಲಿನಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಮಂದಾರ್ತಿ ವಲಯ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು.

ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ದಿಕ್ಸೂಚಿ ಭಾಷಣದಲ್ಲಿ ದೇಶದ ಧರ್ಮ, ಸಂಸ್ಕೃತಿ ಉಳಿಸುವುದು ನಮ್ಮ ಧ್ಯೇಯ ಎಂದರು. 

ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್‌ ಕೆ.ಆರ್‌. ರಾಷ್ಟ್ರೀಯತೆ ಪರ ಕೆಲಸ ಮಾಡುವ ದೊಡ್ಡ ಯುವ ಶಕ್ತಿಯನ್ನು ಸಂಘಟನೆ ಹೊಂದಿದೆ ಎಂದವರು ತಿಳಿಸಿದರು.

ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್‌ ಮೆಂಡನ್‌ ಧರ್ಮದ ಆಪತ್ತು ತಡೆಯಲು ಸಂಘಟಿತರಾಗೋಣ ಎಂದವರು ತಿಳಿಸಿದರು.

Advertisement

ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹಕ ಡಾ| ವಾದಿರಾಜ ಸ್ವಾಭಿಮಾನಿ ಸಂಘಟನೆ ಸದಸ್ಯರಾಗುವುದು ಹೆಮ್ಮೆಯ ವಿಚಾರ ಎಂದರು.

ವಿಹಿಂಪ ಜಿಲ್ಲಾಧ್ಯಕ್ಷ ಪಿ. ವಿಲಾಸ್‌ ನಾಯಕ್‌ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉದ್ಯಮಿಗಳಾದ ಶ್ರೀನಿವಾಸ ಶೆಟ್ಟಿಗಾರ್‌ ಬಾರಕೂರು, ಉದಯ್‌ಕುಮಾರ್‌ ಆರ್‌. ಶೆಟ್ಟಿ ಬೆಳಗಾವಿ, ಗೋಪಿನಾಥ ಕಾಮತ್‌ ವಂಡಾರು, ಸಂತೋಷ್‌ ಶೆಟ್ಟಿ ನಲ್ಕುದ್ರು, ಸರ್ವೋತ್ತಮ ಗಾಣಿಗ ಮಂದಾರ್ತಿ, ಬಜರಂಗದಳ ಬ್ರಹ್ಮಾವರ ಪ್ರಖಂಡ ಸಂಚಾಲಕ ರಾಘವೇಂದ್ರ ಪೂಜಾರಿ  ಉಪಸ್ಥಿತರಿದ್ದರು.

ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಪ್ರಮೋದ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು.ಇದಕ್ಕೂ ಮೊದಲು ಮಂದಾರ್ತಿ ದೇಗುಲದ ರಥಬೀದಿಯಿಂದ ಬೃಹತ್‌ ಶೋಭಾಯಾತ್ರೆ ನಡೆಯಿತು. ಸಾವಿರಾರು ಮಂದಿ ಪಾಲ್ಗೊಂಡಿದ್ಧರು.

ಒಗ್ಗೂಡಿ ಮುನ್ನಡೆಯಿರಿ
ಎಲ್ಲ ಜಾತಿಗಳು ಹಿಂದೂ ಎನ್ನುವ ಬೃಹತ್‌ ಮರದ ಬೇರುಗಳು. ಆದ್ದರಿಂದ ನಾವೆಲ್ಲರೂ ಒಂದೇ ಮನಸ್ಸು, ಭಾವನೆಯಿಂದ ಒಗ್ಗೂಡಿ ಮುನ್ನಡೆಯೋಣ  ಎಂದು ದೇವಸ್ಥಾನದ ಅರ್ಚಕ ಎಂ.ಶ್ರೀಪತಿ ಅಡಿಗ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next