Advertisement

ಪಾಕ್‌ ಚುನಾವಣಾ ಕಣದಲ್ಲಿ ಮೊದಲ ಬಾರಿಗೆ ಹಿಂದೂ ಮಹಿಳೆ !

08:59 PM Dec 26, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ತಾನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಆ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಮಹಿಳೆ ಡಾ.ಸವೀರಾ ಪ್ರಕಾಶ್‌ ಸಾರ್ವತ್ರಿಕ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ. ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯಿಂದ ಅವರಿಗೆ ಬುಧವಾರ ಅಧಿಕೃತವಾಗಿ ಟಿಕೆಟ್‌ ಸಿಗಲಿದೆ. ಅಂದ ಹಾಗೆ ಅವರು ಸ್ಪರ್ಧಿಸಲಿರುವ ಕ್ಷೇತ್ರ ಉಗ್ರಪೀಡಿತವಾಗಿರುವ ಖೈಬರ್‌ ಪಖ್ತುಂಕ್ವಾ ಪ್ರಾಂತ್ಯದ ಬುನರ್‌ ಜಿಲ್ಲೆ. ಇದು ಮಹಿಳಾ ಮೀಸಲು ಕ್ಷೇತ್ರವೂ ಆಗಿದೆ. ಅವರು ಈಗಾಗಲೇ ನಾಮಪತ್ರ ಸಲ್ಲಿಕೆಯನ್ನೂ ಮಾಡಿದ್ದಾರೆ.

Advertisement

2022ರಲ್ಲಿ ಅಬೋಟಾಬಾದ್‌ನ ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್‌ ಪದವಿ ಪಡೆದಿರುವ ಅವರು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿಯ ಬುನೇರ್‌ ಜಿಲ್ಲೆಯ ಮಹಿಳಾ ಘಟಕದ ಕಾರ್ಯದರ್ಶಿಯೂ ಆಗಿದ್ದಾರೆ. ಅವರ ತಂದೆ ಓಂ ಪ್ರಕಾಶ್‌ ಕೂಡ 35 ವರ್ಷಗಳಿಂದಲೂ ಪಿಪಿಪಿ ಪಕ್ಷದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು, ವೃತ್ತಿಯಲ್ಲಿ ಅವರೂ ವೈದ್ಯರಾಗಿದ್ದರು. ಜನಸೇವಾ ಮನೋಭಾವ ಹಿನ್ನೆಲೆಯಲ್ಲಿ ಮಗಳನ್ನು ರಾಜಕೀಯ ಪ್ರವೇಶಕ್ಕೆ ಕರೆ ತಂದಿರುವುದಾಗಿ ಹೇಳಿಕೊಂಡಿದ್ದಾರೆ.

ಈ ನಡುವೆ ಫೆ.8ರಂದು ನಡೆಯಲಿರುವ ಚುನಾವವಣೆಯಲ್ಲಿ 28,626 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಪೈಕಿ 3,139 ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next