Advertisement

ಜಮ್ನಾನಗರದಲ್ಲಿ ‘ಮಹಾತ್ಮ ಗೋಡ್ಸೆ’ ಪ್ರತಿಮೆ ಸ್ಥಾಪನೆಗೆ ಮುಂದಾದ ಹಿಂದೂ ಸೇನೆ

02:56 PM Sep 12, 2021 | Team Udayavani |

ನವ ದೆಹಲಿ  : ಮಹಾತ್ಮ ಗಾಂಧಿ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಸ್ಥಾಪನೆ

Advertisement

ಮಾಡುವುದಾಗಿ ಗುಜರಾತ್ ಮೂಲದ ಹಿಂದೂ ಸೇನೆ ಎಂಬ ಹೆಸರಿನ ಸಂಘಟನೆಯೊಂದು ತಿಳಿಸಿದೆ.

ರಾಷ್ಟ್ರಪಿತ ಗಾಂಧಿಯನ್ನು ಹತ್ಯೆಗೈದ ಗೋಡ್ಸೆಯನ್ನು ಗಲ್ಲಿಗೇರಿಸಿದ ದಿನ(ನವೆಂಬರ್ 15)ದಂದೇ, ಗೋಡ್ಸೆ ಪ್ರತಿಮೆ ಸ್ಥಾಪಿಸುವುದಾಗಿ ಸಂಘಟನೆ ನಿರ್ಧಾರಕ್ಕೆ ಬಂದಿದ್ದು, ಯುವಕರಲ್ಲಿ ರಾಷ್ಟ್ರೀಯತೆಯ ಭಾವವನ್ನು ವೃದ್ಧಿಸುವ ಉದ್ದೇಶದಿಂದ ಸೌರಾಷ್ಟ್ರದ ಜಮ್ನಾನಗರದಲ್ಲಿ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಸಂಘ ತಿಳಿಸಿದೆ.

ಇದನ್ನೂ ಓದಿ : ಅರಣ್ಯ ಭೂಮಿ ವಿಚಾರದಲ್ಲಿ ಚುನಾಯಿತ‌  ಪ್ರತಿನಿಧಿಗಳು ಮೃತರಾಗಿದ್ದಾರೆ : ಕಾಗೋಡು

ಈ ಕುರಿತಾಗಿ ಮಾಧ್ಯಮಗಳಿಗೆ ತಿಳಿಸಿದ ಹಿಂದೂ ಸೇನಾ ಸಂಘಟನೆಯ ಸಂಘಟನೆಯ ಅಧ್ಯಕ್ಷ ಪ್ರತೀಕ್ ಭಟ್, ಜರುಗಿದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಯುವಕರ ಹೃದಯದಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ತುಂಬುವ ನಿಟ್ಟಿನಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗುವುದು. ದ್ವಾರಕಾಧೀಶ್ ಮಂದಿರದಲ್ಲಿ ನಡೆಸಲಾದ ಸಭೆಯಲ್ಲಿ ಗೋಡ್ಸೆ ಪ್ರತಿಮೆ ಸ್ಥಾಪಿಸಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡುವ ನಿಟ್ಟಿನಲ್ಲಿ 30 ಸದಸ್ಯರ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

Advertisement

‘ದೇಶಭಕ್ತಿಯ ಕುರಿತು ಯುವಕರಿಗೆ ಸಂದೇಶ ನೀಡಲು ನಾವು ಜಮ್ನಾನಗರದಲ್ಲಿ ‘ಮಹಾತ್ಮ ಗೋಡ್ಸೆ’ ಪ್ರತಿಮೆಯನ್ನು ಸ್ಥಾಪಿಸುವುದಕ್ಕಾಗಿ ಸಭೆ ನಡೆಸಿದ್ದೇವೆ. ಇಂದಿನ ಯುವಕರಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಈ ಬಲವನ್ನು ಚಲಾಯಿಸುವ ಮಾರ್ಗದರ್ಶಕ ವ್ಯಕ್ತಿಗಳಿಲ್ಲ. ಗೋಡ್ಸೆ ಅವರ ಬದುಕಿನ ಬಗ್ಗೆ ಸಾಕಷ್ಟು ಋಣಾತ್ಮಕ ಮಾಹಿತಿಗಳು ಹರಿದಾಡುತ್ತಿವೆ. ಗೋಡ್ಸೆ ಚಿಂತನೆಗಳನ್ನು ಯುವಕರಿಗೆ ಧಾರೆಯೆರಯಬೇಕು. ಗೋಡ್ಸೆ ಅವರ ಬಗ್ಗೆ ಸತ್ಯಾಂಶವನ್ನು ತಿಳಿಸುವುದು ಇದರ ಪ್ರಯತ್ನವಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಟರ್ಟಲ್ ಸಂರಕ್ಷಕ  ಡಾ. ಶೈಲೇಂದ್ರ ಸಿಂಗ್ | ಆಮೆಗಳ ಉಳಿವಿಗೆ ಸಿಂಗ್ ಕೊಡುಗೆ ಅನನ್ಯ

Advertisement

Udayavani is now on Telegram. Click here to join our channel and stay updated with the latest news.

Next