Advertisement

BJP 296-300 ಸ್ಥಾನ: ಫ‌ಲೋಡಿ ಜೂಜು ಅಡ್ಡೆ ಭವಿಷ್ಯ!

11:56 PM May 16, 2024 | Team Udayavani |

ಜೈಪುರ: ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 296ರಿಂದ 300 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ. ಅಂದರೆ ಕಳೆದ ಬಾರಿ ಗೆದ್ದ ಸ್ಥಾನಕ್ಕಿಂತ ಕಡಿಮೆ ಯಾಗಲಿದೆ. ಹೀಗೆಂದು ಚುನಾವಣೆ ಫ‌ಲಿತಾಂಶಗಳ ನಿಖರ ಭವಿಷ್ಯ ಹೇಳುತ್ತದೆ ಎಂದೇ ಕರೆಯಲಾಗುವ ರಾಜಸ್ಥಾನದ ಫ‌ಲೋಡಿ ಜೂಜು ಅಡ್ಡೆ ಹೇಳಿದೆ.

Advertisement

ಈ ಬಾರಿ 400ಕ್ಕಿಂತ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಬಿಜೆಪಿ ಚುನಾವಣೆ ಘೋಷಣೆಯಾಗುವ ಮೊದಲಿ ನಿಂದಲೂ ಹೇಳುತ್ತಿತ್ತು.

ಗುಜರಾತ್‌ ಕ್ಲೀನ್‌ಸ್ವೀಪ್
ಈ ಬಾರಿಯೂ ಬಿಜೆಪಿ ಗುಜರಾತ್‌ನಲ್ಲಿ ಎಲ್ಲ ಸ್ಥಾನಗಳಲ್ಲಿ ಜಯ ಗಳಿಸಲಿದೆ. ಮಧ್ಯಪ್ರದೇಶದಲ್ಲೂ 28 ಸ್ಥಾನ ಗೆಲ್ಲಲಿದೆ. ಒಡಿಶಾದಲ್ಲಿ 12 ಸ್ಥಾನ, ತೆಲಂಗಾಣದಲ್ಲಿ 6, ದಿಲ್ಲಿಯಲ್ಲಿ 6, ತಮಿಳುನಾಡಿನಲ್ಲಿ 4 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಬಜಾರ್‌ ಹೇಳಿದೆ. ಅಲ್ಲದೆ ಪಶ್ಚಿಮ ಬಂಗಾಲದಲ್ಲೂ ಸ್ಥಾನ ಹೆಚ್ಚಳವಾಗಲಿದ್ದು, ಈ ಬಾರಿ 22 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಭವಿಷ್ಯ ನುಡಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next