Advertisement

Hindu ಮದುವೆ ಪವಿತ್ರ,ಅದು ಕೇವಲ ಒಪ್ಪಂದವಲ್ಲ: ಅಲಹಾಬಾದ್‌ ಹೈಕೋರ್ಟ್‌

01:48 AM Sep 16, 2024 | Team Udayavani |

ಪ್ರಯಾಗ್‌ರಾಜ್‌: ಹಿಂದೂ ಮದುವೆಗಳು ಪವಿತ್ರ­ವಾ­ಗಿದ್ದು, ಒಪ್ಪಂದಗಳಂತೆ ಅವುಗಳನ್ನು ಮುರಿಯಲು ಸಾಧ್ಯವಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ. ವಿಚ್ಛೇದನ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಪರಸ್ಪರ ಒಪ್ಪಿಗೆ ಆಧಾರದಲ್ಲಿ ಮಾತ್ರ ಕೋರ್ಟ್‌ಗಳು ವಿಚ್ಛೇದನ ನೀಡಬಲ್ಲವು. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೂ ಈ ಪರಸ್ಪರ ಒಪ್ಪಿಗೆ ಇರಬೇಕು ಎಂದು ಹೇಳಿದೆ.

Advertisement

2008ರಲ್ಲಿ ವಿಚ್ಛೇದನಕ್ಕೆ ಮಹಿಳೆ ಒಪ್ಪಿಕೊಂಡಿದ್ದರೂ ಬಳಿಕ ಅಸಮ್ಮತಿ ತೋರಿದ್ದರು. ಇದಾದ ಬಳಿಕ ದಂಪತಿ ಒಟ್ಟಿಗಿದ್ದು, ಇಬ್ಬರು ಮಕ್ಕಳು ಜನಿಸಿದ್ದರು. ಬಳಿಕ ಕೆಳ ನ್ಯಾಯಾಲಯ ವಿಚ್ಛೇದನ ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮಹಿಳೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ವಿಚ್ಛೇದನ ಆದೇಶವನ್ನು ರದ್ದುಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next