ಚಿತ್ರದುರ್ಗ : ಪರಿಸ್ಥಿತಿ ಹೀಗೆ ಮುಂದುವರೆದರೆ ಹಿಂದೂ, ಮುಸ್ಲಿಂ ಗ್ಯಾಪ್ ಹೆಚ್ಚಳ. ಇದೇ ದೇಶದಲ್ಲಿ ಹಿಂದೂ, ಮುಸ್ಲಿಂರು ಹುಟ್ಟಿ ಬೆಳೆದಿದ್ದೇವೆ.ಒಟ್ಟಾಗಿ ಹೋಗದಿದ್ದರೆ ತುಂಬಾ ಕಷ್ಟ ಆಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಸೋಮವಾರ ಹೇಳಿಕೆ ನೀಡಿದ್ದಾರೆ.
ಭಾಗವದ್ವಜ ಮುಂದೆ ರಾಷ್ಟ್ರಧ್ವಜ ಆಗಲಿದೆ ಎಂಬ ಹೇಳಿಕೆಗೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಹೇಳಿದ್ದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿ, ಸದನದಲ್ಲೇ ಡಿಕೆಶಿ, ಸಿದ್ಧರಾಮಯ್ಯಗೆ ಉತ್ತರಿಸುತ್ತೇನೆ. ಕೋರ್ಟ್ ಆದೇಶ ಮೀರಿ ಅನೇಕ ವಿದ್ಯಾರ್ಥಿಗಳು ಹಿಜಾಬ್ ಧರಿಸಿದ್ದಾರೆ.ಭವಿಷ್ಯ ಹಾಳು ಮಾಡಿಕೊಳ್ಳಬೇಡಿ, ಸಮವಸ್ತ್ರ ಧರಿಸಿ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಮುಸ್ಲಿಂ ಹೆಣ್ಣು ಮಕ್ಕಳನ್ನು ಬಳಸಿಕೊಂಡು ಕಾಂಗ್ರೆಸ್ ರಾಜಕಾರಣ ಮಾಡಿದರೆ ಒಳ್ಳೆಯದಲ್ಲ. ಹೆಚ್.ಸಿ.ಮಹಾದೇವಪ್ಪ, ಡಿಕೆಶಿ, ಸಿದ್ಧರಾಮಯ್ಯ ಕೋರ್ಟಿನ ಮಾತು ಕೇಳುತ್ತಾರೋ ಇಲ್ಲವೋ ಅಷ್ಟು ಹೇಳಲಿ ಎಂದು ಸವಾಲೆಸೆದರು.
ಸಿದ್ಧರಾಮಯ್ಯ ಬಜೆಟ್ ಮಂಡಿಸಿದಾಗ ಸಾಲ ಮಾಡಿಲ್ಲ.ಇಡೀ ದೇಶಕ್ಕೆ ಸಿದ್ಧರಾಮಯ್ಯ ಸಾಲಕೊಟ್ಟ ಕುಬೇರ.ಸಾಲ ಮಾಡದೆ ಇಷ್ಟು ವರ್ಷ ಆಡಳಿತ ನಡೆಸಿದ್ದಾರೆ. ಸಿದ್ಧರಾಮಯ್ಯ ಅವಧಿ ವಿಜಯನಗರ ಸಾಮ್ರಾಜ್ಯದಂತಿತ್ತು ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಮೋದಿ ಮನೆಮನೆಗೆ ಗಂಗೆ ಯೋಜನೆ ತಂದಿದ್ದಾರೆ.ಸ್ವಚ್ಛತೆ, ಉದ್ಯೋಗ ಕೊಡುವ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.