ನವದೆಹಲಿ: ಟ್ವೀಟರ್‌ನಲ್ಲಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಹಿಂಬಾಲಕರೊಬ್ಬರ ನಡುವೆ ಭಾಷಾ ವಿವಾದವೊಂದು ಹುಟ್ಟಿಕೊಂಡು ದೊಡ್ಡ ಸುದ್ದಿ ಮಾಡಿದೆ. ಇದೆಲ್ಲ ಶುರುವಾಗಿದ್ದು ವಿರಾಟ್ ಕೊಹ್ಲಿ ಪೋಸ್ಟ್ ಮೂಲಕ. ನಾನೊಂದು ಹೊಸ ಸ್ಪೀಕರ್ ಕೊಂಡುಕೊಂಡೆ ಎಂದು ಕೊಹ್ಲಿ ಟ್ವೀಟ್ ಮಾಡಿದರು. ನನಗೊಂದು ಕಳುಹಿಸಿ (ಸೆಂಡ್ ಮಿ ಒನ್) ಎಂದು ಭಜ್ಜಿ ಇಂಗ್ಲಿಷ್‌ನಲ್ಲಿ ಪ್ರತಿಕ್ರಿಯಿಸಿದರು. ಸುಗೇಶ್‌ಪಥಿ ಎಂಬ ಹಿಂಬಾಲಕರು ಕಡೆಗೂ ನೀವು ಇಂಗ್ಲಿಷ್‌ನಲ್ಲಿ ಪೋಸ್ಟ್ ಮಾಡಿದಿರಿ (ಫೈನಲಿ ಯು ಪೋಸ್ಟೆಡ್ ಇನ್ ಇಂಗ್ಲಿಷ್) ಎಂದು ಪ್ರತಿಕ್ರಿಯಿಸಿದರು.
ಇದು ಭಜ್ಜಿಯನ್ನು ಕೆರಳಿಸಿದೆ. ಇದಕ್ಕೆ ಸಿಟ್ಟಿನಲ್ಲಿ ಉತ್ತರಿಸಿದ ಅವರು, ಈ ಇಂಗ್ಲಿಷ್‌ಜಿಯನ್ನು ನೋಡಿದಿರಾ? ಹಿಂದಿಯಲ್ಲಿ ಮಾತನಾಡುವುದು ನಾಚಿಕೆಯ ವಿಷಯವೇ? ಇಂಗ್ಲಿಷ್‌ನ ಹಿಂದೆ ಈ ರೀತಿ ಓಡುತ್ತಿರುವ ನಿಮಗೆ ನಾಚಿಕೆಯಾಗಬೇಕು ಎಂದು ಬೈದರು. ಕೆಲವರು ಹರ್ಭಜನ್‌ಗೆ ಸುಗೇಶ್‌ಪಥಿ ಚೆನ್ನೈ ಯವರು ಅವರಿಗೆ ಹಿಂದಿ ಅರ್ಥವಾಗುವುದಿಲ್ಲ ಎಂಬ ವಿಷಯವನ್ನು ಮನವರಿಕೆ ಮಾಡಿಕೊಟ್ಟರು. ನಿಮ್ಮ ಉತ್ತರ
ಬಹಳ ಕಠಿಣವಾಗಿತ್ತು, ಇದು ಸರಿಯಲ್ಲ ಎಂದೂ ಹೇಳಿದರು.
ಈ ವಿಚಾರ ದೀರ್ಘಕಾಲ ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿತ್ತು.