Advertisement
ಕಾರಣವೇನು?ಹಿಮಾಚಲಪ್ರದೇಶ ಹಿಮಾಲಯ ಪರ್ವತಶ್ರೇಣಿಯಲ್ಲಿ ಬರುತ್ತದೆ. ಇಲ್ಲಿನ ಮಣ್ಣು ಮೂಲಭೂತವಾಗಿ ಸಡಿಲವಾಗಿರುತ್ತದೆ. ಇತ್ತೀಚೆಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದಕ್ಕೆ ಬೇರೆಯದ್ದೇ ಕಾರಣಗಳಿವೆ. ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ಹೆಚ್ಚಿವೆ. ಇದಕ್ಕಾಗಿ ಪರ್ವತಗಳ ಇಳಿಜಾರುಪ್ರದೇಶಗಳನ್ನು ಕಡಿಯಲಾಗುತ್ತಿದೆ. ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ. ರಸ್ತೆ ನಿರ್ಮಾಣ, ಜಲವಿದ್ಯುತ್ ಯೋಜನೆಗಳು, ಸುರಂಗ ನಿರ್ಮಾಣ, ಗಣಿಗಾರಿಕೆ ಮುಂತಾದ ಕಾರಣಕ್ಕೆ ಪರ್ವತಗಳನ್ನೇ ಸ್ಫೋಟಿಸಲಾಗುತ್ತಿದೆ. ಇದರಿಂದ ನೆಲ ತೀವ್ರವಾಗಿ ಅದುರಿ, ಕುಸಿಯುತ್ತಿದೆ. ಮತ್ತೂಂದು ಮುಖ್ಯ ಕಾರಣವೆಂದರೆ, ಕಡಿಮೆ ಅವಧಿಯಲ್ಲಿ ವಿಪರೀತ ಮಳೆಯಾಗುತ್ತಿರುವುದು. ಇಲ್ಲಿ ಮಳೆ ಬೀಳುವ ಅವಧಿ ಕಡಿಮೆಯಿದೆ. ಆದರೆ ತೀವ್ರತೆ ಬಹಳ ಹೆಚ್ಚಾಗಿದೆ. ಹೀಗಾಗಿ ಸವಕಳಿಯೂ ಹೆಚ್ಚಾಗುತ್ತಿದೆ.
ಭೂಕುಸಿತಗಳು ಗರಿಷ್ಠ ಪ್ರಮಾಣದಲ್ಲಿ ಕಂಡುಬಂದಿದ್ದು ಮುಂಗಾರು ಮಳೆ ಅವಧಿಯಲ್ಲಿ. ಮನುಷ್ಯ ಚಟುವಟಿಕೆಗಳು ಹೆಚ್ಚಿದ್ದು, ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಪ್ರಾಕೃತಿಕ ಸಂಪನ್ಮೂಲಗಳನ್ನು ಶೋಷಿಸುತ್ತಿರುವುದೇ ಇದಕ್ಕೆ ಕಾರಣವೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಿಮಾಚಲದಲ್ಲಿ 17,120 ಪ್ರದೇಶಗಳನ್ನು ಭೂಕುಸಿತಪೀಡಿತ ತಾಣಗಳೆಂದು ಗುರುತಿಸಲಾಗಿದೆ. ಈ ಪೈಕಿ 675 ಸ್ಥಳಗಳು ವಸತಿಯೋಗ್ಯವೇ ಅಲ್ಲ ಎನ್ನುವಂತಹ ಸ್ಥಿತಿಗೆ ಮುಟ್ಟಿವೆ. 2020ರಲ್ಲಿ ಸಂಭವಿಸಿದ ಭೂಕುಸಿತ – 16
2022ರಲ್ಲಿ ಸಂಭವಿಸಿದ್ದು – 117
ಈ ಪೈಕಿ ಕುಲ್ಲುವೊಂದರಲ್ಲೇ ಆಗಿದ್ದು- 21
ಭೂಕುಸಿತ ಭೀತಿ ಹೆಚ್ಚಿರುವ ಪ್ರದೇಶಗಳು- 17,120