Advertisement

ಹಿಮಾಚಲ ಚುನಾವಣೆ ನ.9ಕ್ಕೆ, ಎಣಿಕೆ ಡಿ.18ಕ್ಕೆ

06:00 AM Oct 13, 2017 | Team Udayavani |

ಹೊಸದಿಲ್ಲಿ: ಬಹು ನಿರೀಕ್ಷಿತ ಹಿಮಾಚಲ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಿದೆ. ನ. 9ರಂದು ಮತದಾನ ನಡೆಯಲಿದ್ದು, ಡಿ. 18ರಂದು ಫ‌ಲಿತಾಂಶ ಪ್ರಕಟವಾಗಿದೆ. ಇದೇ ವೇಳೆ ಪ್ರಮುಖ ವಾಗಿರುವ ಗುಜರಾತ್‌ ವಿಧಾನ
ಸಭೆ ಚುನಾವಣೆ ದಿನಾಂಕದ ಕುರಿತೂ ಪ್ರಸ್ತಾವಿಸಿರುವ ಕೇಂದ್ರ ಚುನಾವಣಾ ಆಯೋಗ, ಡಿ.18ರ ಒಳಗಾಗಿ ಗುಜರಾತ್‌ ವಿಧಾನಸಭೆ ಚುನಾವಣೆಯೂ ನಡೆದು ಫ‌ಲಿತಾಂಶ ಪ್ರಕಟವಾಗುತ್ತದೆ ಎಂದಿದೆ.

Advertisement

ಗುಜರಾತ್‌ನಲ್ಲಿ ಕೆಲವೊಂದು ಅಭಿವೃದ್ಧಿ ಕಾಮಗಾರಿಗಳನ್ನು ಆರಂಭ ಮಾಡಿರುವುದರಿಂದ ಕೊಂಚ ವಿಳಂಬವಾಗಿ ಚುನಾವಣೆ ದಿನಾಂಕ ಘೋಷಿಸ ಬೇಕೆಂದು ಅಲ್ಲಿನ ಸರಕಾರ ಮನವಿ ಮಾಡಿ ದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ.ಜೋತಿ ತಿಳಿ ಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ತಕ್ಷಣವೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಇದೇ ಮೊದಲ ಬಾರಿಗೆ ಮಹಿಳೆ ಯರೇ ಸಂಪೂರ್ಣವಾಗಿ ಉಸ್ತುವಾರಿ ವಹಿಸಲಿ ರುವ 136 ಮತಗಟ್ಟೆ ತೆರೆಯಲಾಗುತ್ತದೆ. 68 ಸದಸ್ಯ ಬಲದ ವಿಧಾನಸಭೆ ಯಲ್ಲಿ ಕಾಂಗ್ರೆಸ್‌ 35, ಬಿಜೆಪಿ 25, ಪಕ್ಷೇತತರು ನಾಲ್ವರು, ಒಂದು ಸ್ಥಾನ ತೆರವಾಗಿದೆ. 

ಆರ್‌.ಕೆ.ನಗರ ಕ್ಷೇತ್ರಕ್ಕೂ ಚುನಾವಣೆ:  ತಮಿಳುನಾಡಿನ ಮಾಜಿ ಸಿಎಂ ದಿ| ಜಯಲಲಿತಾ ಪ್ರತಿನಿಧಿಸುತ್ತಿದ್ದ ಚೆನ್ನೈನ ಆರ್‌.ಕೆ.ನಗರ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯೂ ಡಿ.31ರ ಒಳಗಾಗಿ ನಡೆಯಲಿದೆ. ದಿನಾಂಕದ ಬಗ್ಗೆ ಶೀಘ್ರವೇ ಆಯೋಗ ನಿರ್ಧರಿಸಿ ಪ್ರಕಟಿಸಲಿದೆ ಎಂದಿದ್ದಾರೆ ಸಿಇಸಿ.

Advertisement

Udayavani is now on Telegram. Click here to join our channel and stay updated with the latest news.

Next