Advertisement

Updated: ಕಲ್ಲಡ್ಕ, ಪುತ್ತೂರು ಶೇಖಮಲೆಯಲ್ಲಿ ಗುಡ್ಡ ಕುಸಿತ: ಕೆಲಕಾಲ ವಾಹನ ಸಂಚಾರ ಸ್ಥಗಿತ

04:05 PM Jul 30, 2024 | Team Udayavani |

ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರ ಶೇಖಮಲೆ ಎಂಬಲ್ಲಿ ಮಂಗಳವಾರ(ಜು.30) ಬೆಳಗ್ಗೆ ಮಣ್ಣು ಕುಸಿದು ಬಿದ್ದಿರುವ ಘಟನೆ ನಡೆದಿದೆ.

Advertisement

ಮಣ್ಣು ಕುಸಿದು ಬಿದ್ದ ಪರಿಣಾಮ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಕೆಲವು ಗಂಟೆಗಳ ಕಾಲ ಪುತ್ತೂರು ಸುಳ್ಯ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದಾಗಿ ವರದಿ ತಿಳಿಸಿದೆ.

ಸ್ಥಳಕ್ಕೆ ಸಂಪ್ಯ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಬ್ಯಾರಿಕೇಡ್‌ ಅಳವಡಿಸಿ, ನಂತರ ಮಣ್ಣನ್ನು ಬದಿಗೆ ಸರಿಸುವ ಮೂಲಕ ಮಧ್ಯಾಹ್ನದ ಹೊತ್ತಿಗೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ವರದಿ ವಿವರಿಸಿದೆ.

ಕಲ್ಲಡ್ಕದಲ್ಲಿ ಗುಡ್ಡ ಕುಸಿತ:

ಭಾರೀ ಗಾಳಿ ಮಳೆಯಿಂದಾಗಿ ವಿಟ್ಲ ಕಲ್ಲಡ್ಕ ರಸ್ತೆಯ ಪಾತ್ರತೋಟ ಎಂಬಲ್ಲಿ ಮಂಗಳವಾರ (ಜು.30) ಗುಡ್ಡ ಕುಸಿತ ಸಂಭವಿಸಿದ್ದು, ವಿಟ್ಲ-ಕಲ್ಲಡ್ಕದ ಮುಖ್ಯ ರಸ್ತೆಯಲ್ಲಿ ಮಣ್ಣು ಕುಸಿದು ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿತ್ತು.

Advertisement

ಗುಡ್ಡ ಕುಸಿತದಿಂದ ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿ ಬಿದ್ದಿದ್ದು, ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಸಾರ್ವಜನಿಕರು ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

ಕಲ್ಲಡ್ಕದಿಂದ ಬರುವವರು ಮಜ್ಜೋಣಿಯಿಂದ ಕೋಡಪದವು, ಮಂಗಲಪಡವಿನಿಂದ ಸಂಚರಿಸಬಹುದು. ವೀರಕಂಭ, ಅನಂತಾಡಿ-ಮಂಗಲಪದವು ಮೂಲಕ ವಾಹನ ಸಂಚರಿಸಬಹುದಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next