ಮಣಿಪಾಲ: ಮನೆ ಇಲ್ಲ. ಊರು ಬಿಟ್ಟು ಮೂರು ವರ್ಷಗಳಾಗಿವೆ. ಸಮಾರು 8,700 ಮೈಲ್ ಪ್ರಯಾಣ, ಕೈಯಲ್ಲಿ ಹಣ ಇಲ್ಲ-ಪರಿಚಯ ಇಲ್ಲದ ಊರು, ತತ್‌ಕ್ಷಣ ಕೋವಿಡ್ 19 ವೈರಸ್ ಲಾಕ್‌ಡೌನ್ ಜಾರಿಯಾಯಿತು. ಪರಿಸ್ಥಿತಿ ಏನಾಗಿರಬೇಡ ?
ಹೌದು ಸದ್ಯ ಕ್ರಿಶ್ಚಿಯನ್ ಲೂಯಿಸ್ ಅವರು ತಮ್ಮ ಚಾರಿಟಿಯೊಂದಕ್ಕಾಗಿ ದೇಣಿಗೆ ಸಂಗ್ರಹಿಸಲು ಬ್ರಿಟಿಷ್ ಕರಾವಳಿಯಿಂದ ಪಾದಯಾತ್ರೆ ಆರಂಭಿಸಿದ್ದರು. ಸೌತ್ ವೇಲ್ಸ್‌ನ ಸ್ವಾನ್ಸೀ ಮೂಲದ ಲೂಯಿಸ್, 2017ರ ಬೇಸಗೆಯಲ್ಲಿ ತನ್ನ ಪ್ರಯಾಣವನ್ನು ಆರಂಭಿಸಿದ್ದರು. ಜೇಬಿನಲ್ಲಿ ಕೇವಲ 12 ಪೌಂಡ್‌ಗಳಿದ್ದವು.
ತನ್ನ ಜೆಟ್ ಎಂಬ ನಾಯಿಯೊಂದಿಗೆ ಪ್ರಯಾಣ ಮುಂದುವರಿದಿತ್ತು. ಈ ಮಾರ್ಚ್‌ನಲ್ಲಿ ದೂರದ ಸ್ಕಾಟಿಷ್ ಶೆಟ್ಲಾಂಡ್ಡ್ ದ್ವೀಪಗಳಿಗೆ ಆಗಮಿಸಿದ್ದರು. ಹೋಗಲು ಮನೆಯಿಲ್ಲ. ರಭಸದ ಗಾಳಿ ಬೀಸುವ ಜಾಗ ಅದು. ಉಳಿದುಕೊಳ್ಳಲು ಯಾರೋ ಬಿಟ್ಟು ಹೋದ ಪುಟ್ಟ ಒಂದು ತೆಳ್ಳನೆಯ ಟೆಂಟ್ ಮಾತ್ರ ಇತ್ತು. ಅಲ್ಲೆ ಅಪರಿಚಿತರ ಈ ದಯೆಗೆ ಧನ್ಯವಾದಗಳನ್ನು ಹೇಳುತ್ತಾ ಮಲಗಿದ್ದರು.
‘ಇದು ಸೂಪರ್ ಆಗಿದೆ, ಲಾಕ್‌ಡೌನ್‌ನ ಸಂದರ್ಭ ನಾನು ಇದಕ್ಕಿಂತ ಒಳ್ಳೆಯ ಜಾಗವನ್ನು ಹುಡುಕಲು ಸಾಧ್ಯವಿಲ್ಲ ಎಂದು ಲೂಯಿಸ್ ಹಿಲ್ಡಾಸೆ ದ್ವೀಪದಲ್ಲಿ ಆಂಗ್ಲ ಸುದ್ದಿಸಂಸ್ಥೆ ಸಿಎನ್‌ಎನ್‌ಗೆ ಹೇಳಿದ್ದರು. ಈ ಅಪರಿಚಿತ ಊರಿನಲ್ಲಿ ಲೂಯಿಸ್ ಇಲ್ಲಿನ ಸ್ಥಳೀಯ ಮೀನುಗಾರ ವಿಕ್ಟರ್ ಎಂಬವರಿಂದ ನೀರು ಮತ್ತು ಆಹಾರವನ್ನು ಪಡೆದಿದ್ದರು.
ಸತತ ಮೂರು ವರ್ಷಗಳ ಅವರ ಪ್ರಯಾಣ ಇದಾಗಿತ್ತು. ಬೆಳಗ್ಗೆ ಯಾತ್ರೆ ಶುರುಮಾಡಿದರೆ, ರಾತ್ರಿಯಾಗುತ್ತದ್ದಂತೆ ಒಂದೆಡೆ ವಿಶ್ರಾಂತಿ. ಈ ಸಂದರ್ಭ ಅವರು ಮಾಧ್ಯಮಗಳಿಂದ ತುಂಬಾ ದೂರ ಇದ್ದರು. ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಯಾರನ್ನಾದರೂ ಕೇಳಲೇಬೇಕಿತ್ತು. ತಮ್ಮ ಈ ಪ್ರವಾಸದಲ್ಲಿ ಕೋವಿಡ್ 19 ವೈರಸ್ ಸಾಂಕ್ರಾಮಿಕ ರೋಗ ಸುದ್ದಿಗಳಿಂದ ತಪ್ಪಿಸಿಕೊಂಡಿದ್ದರು.
ಲಾಕ್‌ಡೌನ್ ಆಗುತ್ತಿದೆ ಎಂದು ನನಗೆ ತಿಳಿದಿತ್ತು. ಆದರೆ ನಾನು ಸರಿಯಾದ ನಿರ್ಧಾರ ಕೈಗೊಳ್ಳಬೇಕಿತ್ತು. ನಾನು ಮನೆಗೆ ಹೋಗಲು ಸಾಧ್ಯವಿಲ್ಲ, ಏಕೆಂದರೆ ನನಗೆ ಹೋಗಲು ಮನೆ ಇಲ್ಲ ಎನ್ನುತ್ತಾರೆ ಅವರು. ಆದರೆ ಶೆಟ್ಲ್ಯಾಂಡ್ಡ್ ಜನರು ಒಂದು ದೋಣಿಯನ್ನು ಕೊಟ್ಟಿದ್ದರು.
ಪರಿಣಾಮವಾಗಿ ನಾನು ದ್ವೀಪಕ್ಕೆ ಬಂದು ಭೂಮಿಯಲ್ಲಿ ವಾಸಿಸಲು ಪ್ರಾರಂಭಿಸಿದೆ ಎಂದು ಹೇಳಿದರು. ಪ್ರಸ್ತುತ ನಿರ್ಬಂಧಗಳ ಪ್ರಕಾರ, ಯುಕೆ ಜನರು ಅಗತ್ಯ ಕಾರಣಗಳಿಗಾಗಿ ಮಾತ್ರ ಶಾಪಿಂಗ್ ಮಾಡಬಹುದು. ವ್ಯಾಯಾಮವನ್ನು ತೆಗೆದುಕೊಳ್ಳಲು, ವೈದ್ಯಕೀಯ ಅಗತ್ಯ ಗಳಿಗಾಗಿ, ಸಹಾಯವನ್ನು ನೀಡುವಂತಹ ಮಹತ್ವದ ಕಾರಣಗಳಿಗಾಗಿ ಮಾತ್ರ ತಮ್ಮ ಮನೆಗಳನ್ನು ಬಿಡಲು ಅನುಮತಿಸಲಾಗಿದೆ.