Advertisement

ಪಾದಯಾತ್ರೆಗೆ ತುಮಕೂರಲ್ಲೇ ತಡೆ

10:56 PM Dec 10, 2019 | Team Udayavani |

ತುಮಕೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ್ದ ಅಂಗನ ವಾಡಿ ಕಾರ್ಯಕರ್ತೆಯರ ಬೆಂಗಳೂರು ಪಾದ ಯಾತ್ರೆಗೆ ಕಾನೂನು ಸುವ್ಯವಸ್ಥೆ ನೆಪವೊಡ್ಡಿ ರಾಜ್ಯ ಸರ್ಕಾರ ತುಮಕೂರಿನಲ್ಲೇ ತಡೆಯೊಡ್ಡಿದೆ.

Advertisement

ಪಾದಯಾತ್ರೆಗೆ ಹೊರಟ ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಮೈಸೂರು, ಕೋಲಾರ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತರನ್ನು ತಡೆ ಹಿಡಿಯಲಾಗಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಸಮಿತಿ ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮೀ ಆರೋಪಿಸಿದರು.

ಕೋಲಾರ ಜಿಲ್ಲೆಯ ಮಾಲೂರಿನ ರಾಜ್ಯ ಕಾರ್ಯ ದರ್ಶಿ ನಾಗರತ್ನ ಅವರನ್ನು ಗೃಹ ಬಂಧನದ ಲ್ಲಿಟ್ಟಿದ್ದರು, ವಕೀಲರ ಮೂಲಕ ಅವರನ್ನು ಬಿಡಿಸಲಾಗಿದೆ ಎಂದರು. ಅಂಗನವಾಡಿಗಳಲ್ಲಿಯೇ ಎಲ್‌ಕೆಜಿ- ಯುಕೆಜಿ ಪ್ರಾರಂಭ ಸೇರಿ ಇತರೆ 13 ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಾದಯಾತ್ರೆ- ಪ್ರತಿಭಟನೆಗೆ ಅನುಮತಿ ಕೊಡಬೇಕೆಂದು ನ.25 ರಂದು ಸಿಎಂ ಹಾಗೂ ಪೊಲೀಸ್‌ ಇಲಾಖೆಗೆ ತಿಳಿಸಿ ದಾಗ, ಮೌಖೀಕವಾಗಿ ತಿಳಿಸಿ ಈಗ, ಅನು ಮತಿ ನಿರಾಕರಿಸ ಲಾಗಿದೆ ಎಂದು ದೂರಿದರು.

ಕೊರೆಯುವ ಚಳಿಯಲ್ಲೇ ರಾತ್ರಿ ಕಳೆದರು: ಪೊಲೀಸರು ಪಾದಯಾತ್ರೆ ತಡೆದಿರುವ ಹಿನ್ನೆಲೆಯಲ್ಲಿ ತುಮಕೂರು ಅಮಾನಿಕೆರೆ ಗಾಜಿನ ಮನೆ ಬಳಿ ಅಂಗನವಾಡಿ ಕಾರ್ಯಕರ್ತೆಯರು ರಾತ್ರಿಯಿಡೀ ಪ್ರತಿಭಟನೆ ಮುಂದುವರಿಸಿದರು. ಕೊರೆಯುವ ಚಳಿಯಲ್ಲೂ ಸಾವಿರಾರು ಮಂದಿ ವಿವಿಧ ಬೇಡಿಕೆ ಈಡೇರುವವರೆಗೂ ಪ್ರತಿ ಭಟನೆ ನಿಲ್ಲಿಸು ವುದಿಲ್ಲ ಎಂದು ಪಟ್ಟು ಹಿಡಿದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next