ಶಿವಮೊಗ್ಗ: ಶಾಲಾ ವಿದ್ಯಾರ್ಥಿಗಳ ಹಿಜಾಬ್- ಕೇಸರಿ ಶಾಲು ಗಲಾಟೆ ಇದೀಗ ಶಿವಮೊಗ್ಗದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಶಿವಮೊಗ್ಗದ ಬಾಪೂಜಿನಗರ ದಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಹೊರಭಾಗದಲ್ಲಿ ಪರಸ್ಪರ ಕಲ್ಲುತೂರಾಟ ನಡೆದಿದೆ.
ಶಲ್ಯಧಾರಿ ವಿದ್ಯಾರ್ಥಿಗಳ ಗುಂಪಿನ ಕಡೆ ಅನ್ಯಕೋಮಿನ ಯುವಕರು ಕಲ್ಲು ತೂರಿದ ಘಟನೆ ನಡೆದಿದ್ದು, ಇದಕ್ಕೆ ಪ್ರತಿಯಾಗಿ ಮತ್ತೊಂದು ಯುವಕರ ಗುಂಪು ಕಲ್ಲು ತೂರಿದೆ. ಶಲ್ಯಧಾರಿ ಯುವಕರು ಕಲ್ಲು ತೂರಿದವರನ್ನು ಅಟ್ಟಾಡಿಸಿಕೊಂಡ ಹೋಗಿದೆ.
ಪರಿಸ್ಥಿತಿ ಮಿತಿ ಮೀರುವುದನ್ನು ಅರಿತ ಪೊಲೀಸರು ಲಾಠಿ ಬೀಸಿದ್ದಾರೆ. ಎಸ್ ಪಿ ಲಕ್ಷ್ಮಿಪ್ರಸಾದ್‌ಖುದ್ದು ಲಾಠಿ ಹಿಡಿದು ಅಖಾಡಕ್ಕೆ ಇಳಿದಿದ್ದಾರೆ.
ಇದನ್ನೂ ಓದಿ:ತಾರಕಕ್ಕೇರಿದ ಹಿಜಾಬ್- ಕೇಸರಿ ವಿವಾದ: ಉಡುಪಿ ಎಂಜಿಎಂ ಕಾಲೇಜಿಗೆ ಅನಿರ್ಧಿಷ್ಟಾವಧಿ ರಜೆ ಘೋಷಣೆ
ನ್ಯಾಷನಲ್ ಕಾಲೇಜು ಆವರಣದ ಎಚ್ ಎಸ್ ರುದ್ರಪ್ಪ ಕಾಲೇಜು ಬಳಿಯೂ ಕಲ್ಲುತೂರಾಟ ನಡೆಸಲಾಗಿದೆ.ಕಲ್ಲು ತೂರಾಟ ನಡೆಸಿದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದ್ದಾರೆ.
ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮಣಿ, ಎಸ್ಪಿ ಲಕ್ಷ್ಮೀಪ್ರಸಾದ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.