Advertisement

Hijab controversy: ಹಾಸನದ ಖಾಸಗಿ ಕಾಲೇಜಿನಲ್ಲಿ  ಹಿಜಾಬ್‌- ಕೇಸರಿ ಶಾಲು ವಿವಾದ

10:16 PM Mar 07, 2024 | Suhan S |

ಹಾಸನ: ನಗರದ  ಖಾಸಗಿ ಕಾಲೇಜೊಂದರಲ್ಲಿ ಹಿಜಾಬ್‌ ಮತ್ತು ಕೇಸರಿ ಶಾಲು ವಿವಾದ  ಆರಂಭವಾಗಿದೆ. ವಿದ್ಯಾಸೌಧ ಪ್ರಥಮ ದರ್ಜೆ ಕಾಲೇಜಿಗೆ ಸಮವಸ್ತ್ರದಲ್ಲೇ ಬರುತ್ತಿದ್ದ ಒಂದು ಕೋಮಿನ ವಿದ್ಯಾರ್ಥಿನಿಯರು ಇತ್ತೀಚೆಗೆ ಹಿಜಾಬ್‌ ಧರಿಸಿ  ಬರಲಾರಂಭಿಸಿದ್ದರು. ಕಾಲೇಜು ಸಮವಸ್ತ್ರ ಧರಿಸಿ ಬರುವಂತೆ ಉಪನ್ಯಾಸಕರು, ಪ್ರಾಂಶುಪಾಲರು ಸೂಚನೆ ನೀಡಿದ್ದರೂ  ಹಿಜಾಬ್‌ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರ ವಿರುದ್ಧ ಸಿಡಿದೆದ್ದ ಇನ್ನಿತರ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರಲಾರಂಭಿಸಿದ್ದಾರೆ.

Advertisement

ಕೇಸರಿ ಶಾಲು ಧರಿಸಿ ರೀಲ್ಸ್‌ ಮಾಡಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದ ಉಪನ್ಯಾಸಕರಿಗೆ ತಿರುಗೇಟು ನೀಡಿರುವ ವಿದ್ಯಾರ್ಥಿಗಳು, ಹಿಜಾಬ್‌ ಧರಿಸಿ ತರಗತಿಗೆ ಬರುತ್ತಿದ್ದವರನ್ನು ಪ್ರಶ್ನಿಸದ ನೀವು ಕೇಸರಿ ಶಾಲು ಧರಿಸಿ ಬರುವುದನ್ನೇಕೆ ಪ್ರಶ್ನಿಸುತ್ತೀರಿ ಎಂದು ಹರಿಹಾಯ್ದಿದ್ದಾರೆ. ಹಿಜಾಬ್‌ ಮತ್ತು ಕೇಸರಿ ಶಾಲು  ವಿವಾದ ಈಗ ಕಾಲೇಜಿನ ಆಡಳಿತ ಮಂಡಳಿಗೆ ತಲೆನೋವು ತಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next