Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಟಿಪ್ಪು ಜಯಂತಿ ಮೂಲಕ ಸಾಮರಸ್ಯವನ್ನು ಕೆಡಿಸುವ ಯತ್ನ ಮಾಡಿದರು. ಶಾದಿ ಭಾಗ್ಯದ ಹೆಸರಿನಲ್ಲಿ ಕೆಲವೇ ಸಮುದಾಯಕ್ಕೆ ಅವಕಾಶ ಮಾಡಿಕೊಟ್ಟವರು. ಈ ರೀತಿಯ ನಿರ್ಧಾರಗಳು ಸಮಾಜದ ಸಾಮರಸ್ಯಕ್ಕೆ ಹೇಗೆ ಧಕ್ಕೆ ತಂದಿವೆ ಎಂಬುದನ್ನು ಈಗ ಹಿಜಾಬ್ ಕುರಿತು ಮಾತನಾಡುವ ಅವರು ಅರ್ಥಮಾಡಿಕೊಳ್ಳಲಿ ಎಂದರು.
ಶಾಲೆಯ ನಿಯಮ ಹಾಗೂ ಅನುಶಾಸನ ಪಾಲಿಸಿಕೊಂಡು ಕಲಿಯಬೇಕಾದದ್ದು ಧರ್ಮ. ಅದರೊಂದಿಗೆ ಬೇರೆ ಧರ್ಮ ಬರುವುದು ಸರಿಯಲ್ಲ. ಶಾಲೆಯ ನಿಯಮದಡಿಯಲ್ಲಿಯೇ ಎಲ್ಲರೂ ಕಲಿಯಬೇಕು. ಯಾರಿಗೆ ಈ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯ ಇಲ್ಲವೋ ಅವರು ಬೇರೆ ದಾರಿ ನೋಡಿಕೊಳ್ಳಬಹುದು. ಇಲ್ಲಿ ತಾಲಿಬಾನ್ ಮಾಡಲು ಅವಕಾಶ ನೀಡುವುದಿಲ್ಲ ಎಂದರು. ದನ ಕಳ್ಳತನ, ದನ ಆಕ್ರಮ ಸಾಗಾಟದ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ. ಮುಖ್ಯಮಂತ್ರಿಯವರು, ಗೃಹಸಚಿವರು ಹಾಗೂ ಉಸ್ತುವಾರಿ ಸಚಿವರ ಸಭೆ ನಡೆಸಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ ಎಂದು ನಳಿನ್ ತಿಳಿಸಿದರು.
Related Articles
Advertisement
ಸಂಪುಟ: ಸಿಎಂ ವಿವೇಚನೆಸಚಿವ ಸಂಪುಟದ ಪುನಾರಚನೆ ವಿಚಾರ ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರ. ಸಂದರ್ಭ ಬಂದಾಗ ರಾಷ್ಟ್ರೀಯ ನಾಯಕರ ಜತೆ ಮಾತನಾಡಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ನಳಿನ್ ಕುಮಾರ್ ಉತ್ತರಿಸಿದರು. ಮಂತ್ರಿಮಂಡಲದಲ್ಲಿ ಇರಬೇಕು ಎಂದು ಅಪೇಕ್ಷೆ ಪಡುವುದು ತಪ್ಪಲ್ಲ. ಆದರೆ ಎಲ್ಲ ಶಾಸಕರಿಗೂ ಮಂತ್ರಿ ಸ್ಥಾನ ನೀಡಲು ಸಾಧ್ಯವಿಲ್ಲ. ಅದಕ್ಕೆ ನಿಯಮಗಳಿವೆ. ರಾಷ್ಟ್ರೀಯ ನಾಯಕರು ಹಾಗೂ ನಾವು ಚರ್ಚೆ ಮಾಡಿ ಯಾರಿಗೆ ಅವಕಾಶ ನೀಡಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತೇವೆ. ಹಾದಿಬೀದಿಯಲ್ಲಿ ಚರ್ಚೆ ಮಾಡುವುದು ಸರಿಯಲ್ಲ ಎಂದರು.