Advertisement

ಕರಾವಳಿಯಿಂದ ರಾಮದುರ್ಗ ಪಟ್ಟಣಕ್ಕೆ ಕಾಲಿಟ್ಟ ಹಿಜಾಬ್ ವಿವಾದ

11:49 AM Feb 05, 2022 | Team Udayavani |

ರಾಮದುರ್ಗ: ಪಟ್ಟಣದ ಈರಮ್ಮ ಶಿ. ಯಾದವಾಡ ಸರಕಾರಿ ಪದವಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದು, ಕರಾವಳಿಗೆ ಸೀಮಿತವಾದ ಹಿಜಾಬ್ ವಿವಾದ ಈಗ ತಾಲೂಕು ಮಟ್ಟಕ್ಕೆ ವ್ಯಾಪಿಸುತ್ತಿರುವುದು  ಆತಂಕದ ಸಂಗತಿಯಾಗಿದೆ.

Advertisement

ಸ್ಥಳೀಯ ಈರಮ್ಮ ಶಿ.ಯಾದವಾಡ ಸರಕಾರಿ ಪ್ರಥಮ ದರ್ಜೆಯ ಕಾಲೇಜಿಗೆ ಕಳೆದ ಬುಧವಾರ ಕೇಸರಿ ಶಾಲು ಧರಿಸಿದ ಕೆಲ ವಿದ್ಯಾರ್ಥಿಗಳು  ಕಾಲೇಜಿಗೆ ಆಗಮಿಸಿದ ಸುದ್ದಿ ತಿಳಿದ ಪಿ.ಎಸ್.ಐ ಎಸ್.ಎಂ.ಕಾರಜೋಳ ಅವರು ಕಾಲೇಜಿಗೆ ಆಗಮಿಸಿ ಪ್ರಾಚಾರ್ಯ ಕೊಠಡಿಗೆ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಕರೆಯಿಸಿ ಬುದ್ದಿವಾದ ಹೇಳಿ ಅವರ ಮನವೊಲಿಸಿ ಶಾಲು ತೆಗೆಸಿದ್ದಾರೆಂದು ತಿಳಿದುಬಂದಿದೆ.

ಹನುಮ ಮಾಲೆ ಧರಿಸಿದ್ದರಿಂದ 108 ದಿನ ವೃತ ಮಾಡಲಾಗುತ್ತಿದ್ದು, ಅದಕ್ಕಾಗಿ ಕೇಸರಿ ಶಾಲು ಧರಿಸಿದ್ದೇವೆ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ. ಶಾಲು ಧರಿಸದೇ ಕಾಲೇಜಿಗೆ ಬರುವುದಾದರೆ ಹಿಜಾಬ್ ಧರಿಸಿ ಕಾಲೇಜಿಗೆ ಬರುವವರಿಗೆ ಏಕೆ ಅವಕಾಶ ಕೊಟ್ಟಿದ್ದೀರಿ ಎಂದು ಕೆಲ ವಿದ್ಯಾರ್ಥಿಗಳು ಪ್ರಾಚಾರ್ಯರನ್ನು ಹಾಗೂ ಪೊಲೀಸರನ್ನು ಪ್ರಶ್ನಿಸಿದರೆಂದು ಹೇಳಲಾಗುತ್ತಿದೆ.

ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದು ನಿಮ್ಮ ಗುರಿಯಾಗಬೇಕು. ಕಲಿಯುವ ವಯಸ್ಸಿನಲ್ಲಿ ಧರ್ಮದ ವಿಚಾರವನ್ನು ಕಾಲೇಜಿನ ಆವರಣಕ್ಕೆ ತರುವುದು ಒಳ್ಳೇಯದಲ್ಲ. ಧರ್ಮದ ಬಗ್ಗೆ ಮಠಮಂದಿರ, ಮಸೀದಿ, ಚರ್ಚುಗಳಿವೆ ಮಾತ್ರ ಸೀಮಿತವಾಗಬೇಕು. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಪೊಲೀಸರು ವಿದ್ಯಾರ್ಥಿಗಳಿಗೆ ತಿಳಿ ಹೇಳಿ ಕಳಿಸಿದ್ದರಿಂದ ವಿವಾದ ಸುಖಾಂತ್ಯ ಕಂಡಿದೆ.

ಇತ್ತಿಚಿನ ದಿನಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ. ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಬೇರೆಯವರಿಗೆ ಅವಕಾಶ ಇರದಿದ್ದರೂ ಬೈಕ್ ಮೇಲೆ ಕಾಲೇಜು ಕ್ಯಾಂಪಸ್‌ಗೆ ಬರುತ್ತಿದ್ದಾರೆ. ಪಟ್ಟಣದಿಂದ ಹೊರವಲಯದಲ್ಲಿ ಕಾಲೇಜು ಇರುವುದರಿಂದ ಪಡ್ಡೆ ಹುಡುಗರ ಕಾಟ ಹೆಚ್ಚುತ್ತಿದೆ. ಹಾಗಾಗಿ ಕಾಲೇಜು ಅವಧಿಯಲ್ಲಿ ಪೊಲೀಸ್ ಬೀಟ್ ಹಾಕಬೇಕೆಂದು ಹಿಂದೂ ಜಾಗರಣಾ ವೇದಿಕೆಯ ಬೇಟಿ ಬಚಾವೋ ಜಿಲ್ಲಾ ಪ್ರಮುಖ ಚಂದ್ರಕಾಂತ ಹೊಸಮನಿ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next