Advertisement
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 9 ಮಂದಿ ವಿದ್ಯಾರ್ಥಿನಿಯರು ಬುಧವಾರ ಬೆಳಗ್ಗೆ ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಆಗಮಿಸಿದ್ದು ಪ್ರಾಂಶುಪಾಲರು ಹಿಜಾಬ್ ಸಹಿತವಾಗಿ ತರಗತಿ ಪ್ರವೇಶಿಸಲು ಅವಕಾಶವಿಲ್ಲ ಎಂದು ತಿಳಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕಾಲೇಜಿನಿಂದ ಹಿಂತೆರಳಿದ್ದಾರೆ.
Related Articles
Advertisement
ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರನ್ನು ಮನವೊಲಿಸಲು ಪ್ರಯತ್ನಿಸಲಾಯಿತಾದರೂ, ಯಾವುದಕ್ಕೂ ಒಪ್ಪದ ಕಾರಣ ಅವರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಅನಿಲ್ ಕುಮಾರ್ ತಿಳಿಸಿದ್ದಾರೆ.
ಹಿಜಾಬ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಪರೀಕ್ಷೆಯೂ ಬೇಕು, ಹಿಜಾಬ್ ಕೂಡಾ ಬೇಕು. ಹಿಜಾಬ್ ಬಗ್ಗೆ ಹಿಂದಿನಿಂದ ಇರದ ಸಮಸ್ಯೆ ಈಗ ಕಾಣಿಸಿಕೊಂಡಿರುವುದು ಬೇಸರ ಮೂಡಿಸಿದೆ. ಪ್ರಾಂಶುಪಾಲರು ನಮಗೆ ನ್ಯಾಯ ದೊರಕಿಸಿಕೊಡುತ್ತಾರೆಂಬ ನಿರೀಕ್ಷೆಯಲ್ಲಿದ್ದೇವೆ ಎಂದು ವಿದ್ಯಾರ್ಥಿನಿಯರಾದ ರಿಜಾನಾ ಮತ್ತು ಶೆಹನಾಜ್ ತಿಳಿಸಿದ್ದಾರೆ.