Advertisement

ಹಿಜಾಬ್ ಒಂದು ವಿವಾದದ ವಿಷಯವೇ ಅಲ್ಲ,ಬೇಕಂತಲೇ ಷಡ್ಯಂತ್ರವನ್ನಾಗಿ ಮಾಡಲಾಗುತ್ತಿದೆ-ಆಸಿಫ್ ಶೇಖ್

03:36 PM Feb 07, 2022 | Team Udayavani |

ಭಟ್ಕಳ: ಹಿಜಾಬ್ ಒಂದು ವಿವಾದದ ವಿಷಯವೇ ಅಲ್ಲ, ಮುಂಚಿನಿಂದಲೂ ಮುಸ್ಲಿಂ ಹೆಣ್ಣು ಮಕ್ಕಳು ಶಾಲೆ ಕಾಲೇಜುಗಳಿಗೆ ಹಿಜಾಬ್ ಹಾಕಿಕೊಂಡೇ ಹೋಗುತ್ತಿದ್ದರು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಆಸಿಫ್ ಶೇಖ್ ಹೇಳಿದ್ದಾರೆ.

Advertisement

ಅವರು ಇಲ್ಲಿನ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಾಲದಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಹಿಜಾಬ್‌ನ್ನು ಆಕಸ್ಮಿಕವಾಗಿ ವಿವಾದದ ವಿಷಯವನ್ನಾಗಿ ಮಾಡಲಾಗಿದ್ದು ಈ ಹಿಂದಿನಿಂದಲೂ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಹಾಕಿಕೊಂಡೇ ಶಾಲೆಗೆ ಹೋಗುತ್ತಿದ್ದರು ಎಂದು ನೆನಪಿಸಿದ ಅವರು ಅಂದು ಯಾವುದೇ ರೀತಿಯ ಅಡೆತಡೆ ಇರಲಿಲ್ಲ, ಆದರೆ ಕಳೆದ ಎರಡು ತಿಂಗಳಿನಿಂದ ಇದನ್ನೊಂದು ವಿವಾದದ ವಿಷಯವನ್ನಾಗಿಸಿರುವುದು ಸರಿಯಲ್ಲ ಎಂದರು.

ಮೇಲ್ನೋಟಕ್ಕೆ ಇದು ಒಂದು ಷಡ್ಯಂತ್ರದ ಅಭಿಯಾನದ ರೂಪದಂತೆ ಗೋಚರಿಸುತ್ತದೆ.  ಉಡುಪಿಯಲ್ಲಿ ಪ್ರಾರಂಭವಾದ ಹಿಜಾಬ್ ಗೊಂದಲ ನೋಡ ನೋಡುತ್ತಿದ್ದಂತೆಯೇ ಕುಂದಾಪುರ ಮಾಗ೯ವಾಗಿ ಬೈಂದೂರು ಹಾಗೆ ಇಡೀ ರಾಜ್ಯದಲ್ಲಿ ಹರಡುತ್ತಾ ಹೋಗುತ್ತಿದೆ. ಉಡುಪಿ ಮತ್ತು ಇತರ ಕಡೆಗಳ ಅಂದರೆ ಕುಂದಾಪುರ ಇತ್ಯಾದಿ ಕಾಲೇಜುಗಳ ಸಮಸ್ಯೆಗಳಲ್ಲಿ ವ್ಯತ್ಯಾಸವಿದೆ. ಕುಂದಾಪುರ ಹಾಗೂ ಇತರ ಕಡೆಗಳ ಕಾಲೇಜುಗಳಲ್ಲಿ ಪ್ರಾರಂಭದಿಂದಲೂ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಹಾಕಿಕೊಂಡೇ ಕಾಲೇಜುಗಳಿಗೆ ಹೋಗುತ್ತಿದ್ದರು. ಒಂದೇ ಸವನೆ ಹಿಜಾಬ್ ತೆಗೆಯದೆ ಕಾಲೇಜಿಗೆ ಪ್ರವೇಶ ಇಲ್ಲ ಅಂತ ಕಾಲೇಜಿನ ಗೇಟ್ ಮುಚ್ಚಿ ಬಿಟ್ಪರೆ ವಿದ್ಯಾರ್ಥಿನಿಯರಿಗೆ ಎಷ್ಟೊಂದು ಆಘಾತ ಅಪಮಾನ ಆಗಿರಬಹುದು ಎನ್ನುವುದನ್ನು ಊಹಿಸಲೂ ಕಷ್ಟ ಎಂದ ಅವರು ಇನ್ನು ಕೆಲವೇ ಸಮಯದಲ್ಲಿ ವಾರ್ಷಿಕ ಪರೀಕ್ಷೆ ಬರುತ್ತಿದೆ. ಇಂತಹ ಸಮಯದಲ್ಲಿ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರ ಹಾಕಿದರೆ ಅವರ ಭವಿಷ್ಯಕ್ಕೆ ಎಂತಹ ಮಾರಕ ಎನ್ನುವುದನ್ನು ವಿಚಾರ ಮಾಡಿಲ್ಲವೇ ಎಂದೂ ಪ್ರಶ್ನಿಸಿದರು. ಇದು ಒಂದು ದೊಡ್ಡ ಪ್ರಮಾಣದ ಷಡ್ಯಂತ್ರದ ಭಾಗವಾಗಿ ಹಾಗೂ ಒಂದು ದೊಡ್ಡ ಅಭಿಯಾನದ ಅಂಗವಾಗಿ ಅಲ್ಪ ಜ್ಞಾನ ಇರುವವರಿಗೂ ಅಥ೯ವಾಗದೆ ಇರಲಾರದು ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅಬ್ದುಲ್ ಜಬ್ಬಾರ್, ಸಯೀದ್,  ಫಾರುಕ್ ಶೇಖ್, ಶೌಖತ್ ಖತೀಬ್ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next