Advertisement
ಸಂಸತ್ತಿನ ಮೇಲ್ಮನೆಯಾದ ಮಜಿಲಿ ಮಿಲ್ಲಿಯಲ್ಲಿ ಸ್ಪೀಕರ್ ರುಸ್ತುಮ್ ಎಮೋಮಲಿ ಅವರ ಅಧ್ಯಕ್ಷತೆಯಲ್ಲಿ ನಡೆದ 18ನೇ ಅಧಿವೇಶನದಲ್ಲಿ ಹಿಜಾಬ್ ನಿಷೇಧ ಕುರಿತಾದ ಮಸೂದೆಯನ್ನು ಅಂಗೀಕರಿಸಲಾಗಿದೆ. ನಿಯಮ ಗಳನ್ನು ಉಲ್ಲಂ ಸಿ ಹಿಜಾಬ್ ಧರಿಸಿದರೆ ಅದಕ್ಕೆ ಭಾರೀ ದಂಡವನ್ನು ವಿಧಿಸುವ ಬಗ್ಗೆ ಮಸೂದೆ ಪ್ರಸ್ತಾವಿಸಿದೆ.
2007ರಲ್ಲಿ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದಕ್ಕೆ ನಿಷೇಧ
ಆ ಬಳಿಕ ಸಾರ್ವಜನಿಕ ಸಂಸ್ಥೆಗಳಿಗೂ ನಿಷೇಧ ವಿಸ್ತರಣೆ
ಸರಕಾರದ ವಿರುದ್ಧ ಅನೇಕ ಪ್ರತಿಭಟನೆಗಳು, ಮುಸ್ಲಿಂ ಸಂಸ್ಥೆಗಳ ಆಕ್ಷೇಪ
ವಿರೋಧದ ನಡುವೆಯೂ ಹಿಜಾಬ್ ನಿಷೇಧ ಜಾರಿ
2017ರಲ್ಲಿ ಹಿಜಾಬ್ ವಿರುದ್ಧ ದೇಶಾದ್ಯಂತ ಅಭಿಯಾನಗಳು ಆರಂಭ
ಹಿಜಾಬ್ ತೀವ್ರಗಾಮಿ ವಾದದ ಪ್ರತೀಕ, ವಿದೇಶಿ ಉಡುಗೆ ಎಂದು ಬಣ್ಣನೆ
ತಜಕಿಸ್ಥಾನದ ಸಾಂಪ್ರದಾಯಿಕ ಉಡುಗೆಗೆ ಮಾನ್ಯತೆ ನೀಡಲು ಒತ್ತಾಯ
ಕಾನೂನಿನ ಮೂಲಕವೇ ಹಿಜಾಬ್ ನಿಷೇಧಿಸಲು ಮಸೂದೆ ಮಂಡನೆ
ಹಿಜಾಬ್ “ಅನ್ಯಗ್ರಹ ಜೀವಿಗಳ ಉಡುಗೆ’ ಎಂದೇ ಮಸೂದೆಯಲ್ಲಿ ಉಲ್ಲೇಖ
ಮೇ 8ರಂದು ಮಸೂದೆಗೆ ಸಮ್ಮತಿ, ಜೂ. 19ರಂದು ಸಂಸತ್ತಿನಲ್ಲಿ ಅಂಗೀಕಾರ