Advertisement
ಅಲ್ಲದೆ ಬೈರಾಪುರ ಗ್ರಾಮದಲ್ಲಿ ನಿರ್ಮಿಸುತ್ತಿರುವ ಕೆಳ ಸೇತುವೆ ಕಾಮಗಾರಿಯೂ ಪೂರ್ಣಗೊಳ್ಳದೆ ಆಲೂರು ಪಟ್ಟಣದಿಂದ ಮಗ್ಗೆ ಮಾರ್ಗವಾಗಿಕೆ.ಹೊಸಕೋಟೆ ಕಡೆಗೆ ಹೋಗುವ ವಾಹನ ಸವಾರರು ಹೆದ್ದಾರಿ ದಾಟಲಾಗುತ್ತಿಲ್ಲ.ರಾಷ್ಟ್ರೀಯ ಹೆದ್ದಾರಿ- 75 ರ ವಿಸ್ತರಣೆ ಕಾಮಗಾರಿ ಆರಂಭ ಗೊಂಡು ವರ್ಷಗಳೇ ಕಳೆದಿದ್ದು ಯಾವಾಗ ಪೂರ್ಣಗೊಳ್ಳುತ್ತದೋ ಎಂದು ಹೆದ್ದಾರಿ ಬದಿಯ ಗ್ರಾಮಗಳ ಜನಕಾಯುತ್ತಿದ್ದಾರೆ.
ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆ ಮಾಡಲು 600 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ನಿಗದಿಯಂತೆ ಕಾಮಗಾರಿ ನಡೆಯದ ಕಾರಣ ಹೆದ್ದಾರಿ ಬದಿ ಗ್ರಾಮಸ್ಥರು, ವ್ಯಾಪಾರಿಗಳು ವಾಹನ ಸವಾರರು ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಅವೈಜ್ಞಾನಿಕ, ಕಳಪೆ ಕಾಮಗಾರಿ: ಈ ಕಾಮಗಾರಿ ನಡೆಯುವ ವೇಳೆ ರಾ.ಹೆದ್ದಾರಿ ಪ್ರಾಧಿಕಾರ ಎಂಜಿನಿ ಯರ್‌ಗಳಾಗಲಿ ಅಥವಾ ಇಲಾಖಾ ಅಧಿಕಾರಿಗಳಾಗಲಿಪರಿಶೀಲನೆ ನಡೆಸಿಲ್ಲ. ರಸ್ತೆ ಪಕ್ಕದ ಸರ್ವೀಸ್ ರಸ್ತೆಗೆ 6 ತಿಂಗಳಿಂದ ಅಡ್ಡಲಾಗಿ ತಡೆಗೊಡೆ ನಿರ್ಮಾಣ ಮಾಡ ಲಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಕೂಡಿದ್ದು ಹಲವು ಬಾರಿ ಬಿದ್ದು ಹೋಗಿದೆ. ಮತ್ತೆಕಟ್ಟಲಾಗುತ್ತಿದೆ.
Related Articles
ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ.
Advertisement
ಕುಂಟುತ್ತಾ ಸಾಗಿದ ಸೇತುವೆ ಕಾಮಗಾರಿಆಲೂರು ಪಟ್ಟಣದ ಮಗ್ಗೆ ಮಾರ್ಗವಾಗಿ ಕೆ.ಹೊಸಕೋಟೆಕಡೆಗೆ ಹೋಗುವವರು ಈ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಕೊಂಡೆ ಹೋಗಬೇಕಿದೆ. ವಾಹನ ದಟ್ಟಣೆ ತಪ್ಪಿಸಲು ಹೆದ್ದಾರಿ ವಾಹನ ಯಾವುದೇ ಅಡೆ ತಡೆಯಿಲ್ಲದೇ ಸರಾಗವಾಗಿ ಸಂಚರಿಸಲು ಬೈರಾಪುರ ಗ್ರಾಮದಲ್ಲಿ ಹೆದ್ದಾರಿ ಕಾಮಗಾರಿ ಅಡ್ಡಲಾಗಿ ಸೇತುವೆ ನಿರ್ಮಾಣಮಾಡಲಾಗುತ್ತಿದೆ. ಪ್ರಯಾಣಿಕರು ಹೈರಾಣ
ಸದ್ಯ ಸೇತುವೆ ಕಾಮಗಾರಿಯೇನೋ ಮುಕ್ತಯವಾಗಿ ಆಲೂರಿನಿಂದ ಮಗ್ಗೆ ಮಾರ್ಗವಾಗಿ ಕೆ.ಹೊಸಕೋಟೆ ಗ್ರಾಮದಕಡೆ ವಾಹನಗಳು ಸಂಚರಿಸುತ್ತಿವೆ. ಆದರೆಕೆಳಭಾಗದ ಹೆದ್ದಾರಿ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಅದೇಕಾರಣ ಬೆಂಗಳೂರು-ಮಂಗಳೂರು ಹೋಗುವ ಹಾಗೂ ಬರುವ ಭಾರೀ ಗಾತ್ರದ ವಾಹನ ಸೇತುವೆ ಪಕ್ಕದಲ್ಲೇ ಹಾದುಹೋಗುತ್ತವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ಸವಾರರು ಹೈರಾಣಾಗಿದ್ದಾರೆ. ಅಪಘಾತಗಳಿಗೆ ಶಾಸಕ, ಸಂಸದರೇ ನೇರ ಹೊಣೆ
ಹಾಸನ -ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸುಮಾರು3 ವರ್ಷಗಳಿಂದಲೂ ಮಂದಗತಿಯಿಂದ ನಡೆಯುತ್ತಿದೆ. ಇದರಿಂದ ಜನಸಾಮಾನ್ಯರು, ಸವಾರರು, ಅಪಘಾತಗಳಿಂದ ಹೈರಾಣಾಗಿದ್ದಾರೆ. ಆದರೂ, ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕಣಗಾಲ್ ಮೂರ್ತಿ ಎಚ್ಚರಿಸಿದ್ದಾರೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನ ಗುತ್ತಿಗೆದಾರರ ಮಂದಗತಿ ಕಳಪೆಕಾಮಗಾರಿಯಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಮೃತರ ಕುಟುಂಬಕ್ಕೆ ಹೊಣೆಯಾರು?. ನೇರ ಹೊಣೆಯನ್ನು ಸಂಸದರು, ಶಾಸಕರು ಹೊರಬೇಕು.
– ಗಣೇಶ್, ಸ್ನೇಹಜೀವಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲಿಕ, ಬೈರಾಪುರ ಹೆದ್ದಾರಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ಹಾಸನ ಹಾಗೂ ಸಕಲೇಶಪುರದ ಭಾಗದಿಂದ
ಬರುವ ಸವಾರರು ಹರಸಾಹಸ ಪಡುವಂತಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಗಳ ವಿರುದ್ಧ ರಾಷ್ಟ್ರೀಯ
ಹೆದ್ದಾರಿ ತಡೆದು ಪ್ರತಿಭಟನೆ ಮಾಡಲಾಗುತ್ತದೆ.
– ಸಿ.ಡಿ.ಅಶೋಕ್, ಮಾಜಿ ಅಧ್ಯಕ್ಷರು
ಗ್ರಾಮ ಪಂಚಾಯ್ತಿ ಬೈರಾಪುರ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಮಂದಗತಿಯಲ್ಲಿ ಸಾಗಿರುವುದರಿಂದ ರಸ್ತೆ ಬದಿ ಬೀದಿ ಬದಿವ್ಯಾಪಾರಿಗಳಿಗೆ ತೊಂದರೆಯಾಗಿದೆ. 2-3ವರ್ಷದಿಂದ ವ್ಯಾಪಾರವಿಲ್ಲದೆ ಹಲವು ಕುಟುಂಬ ಬೀದಿಗೆ ಬಿದ್ದಿವೆ.ಆದರೆ, ಶಾಸಕರು, ಸಂಸದರುಈ ಬಗ್ಗೆಕ್ರಮಕೈಗೊಂಡಿಲ್ಲ.
– ರುದ್ರೇಗೌಡ, ಸದಸ್ಯರು ಗ್ರಾಪಂ ಬೈರಾಪುರ – ಟಿ.ಕೆ.ಕುಮಾರಸ್ವಾಮಿ ಆಲೂರು