ಆಲೂರು: ತಾಲೂಕಿನಲ್ಲಿ ಹಾದು ಹೋಗಿರುವ ಬೆಂಗಳೂರು – ಮಂಗ ಳೂರು ರಾಷ್ಟ್ರೀಯ ಹೆದ್ದಾರಿ- 75ರ ವಿಸ್ತ ರಣೆ ಕಾಮಗಾರಿ ಮಂದಗತಿಯಲ್ಲಿ ಸಾಗಿ ದ್ದು, ವಾಹನ ಸವಾರರು, ಹೆದ್ದಾರಿ ಬದಿ ಯ ಗ್ರಾಮಸ್ಥರು, ವ್ಯಾಪಾರಿಗಳು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ. ಅಲ್ಲದೆ, ಬೈರಾಪುರ ಬಳಿ ನಿರ್ಮಿಸುತ್ತಿರುವ ಕೆಳಸೇ ತುವೆ ಕಾಮಗಾರಿ ಪೂರ್ಣಗೊಳ್ಳದೇ ಆಲೂರು ಪಟ್ಟಣದಿಂದ ಮಗ್ಗೆ ಗ್ರಾಮದ ಕಡೆಗೆ ಹೋಗುವ ವಾಹನ ಸವಾರರು ಹೆದ್ದಾರಿ ದಾಟ ಲಾಗದೇ ಹೈರಾಣಾಗಿ ದ್ದಾರೆ. ರಾಷ್ಟ್ರೀಯ ಹೆದ್ದಾರಿ-75ರ ವಿÓರಣ¤ ೆ ಕಾಮಗಾರಿ ಆರಂಭಗೊಂಡು ವರ್ಷಗಳೇ ಕಳೆದಿದ್ದು, ಯಾವಾಗ ಪೂರ್ಣಗೊಳ್ಳುತ್ತದೋ ಎಂದು ಹೆದ್ದಾರಿ ಬದಿಯ ಗ್ರಾಮಗಳ ಜನರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಕುಂಟುತ್ತ ಸಾಗಿದ ಸೇತುವೆ ಕಾಮಗಾರಿ: ಆಲೂರು ಪಟ್ಟಣದಿಂದ ಮಗ್ಗೆ ಗ್ರಾಮದ ಕಡೆಗೆ ಹೋಗುವವರು ಈ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿಕೊಂಡೇ ಹೋಗಬೇಕಿದೆ. ಹೀಗಾಗಿ ವಾಹನ ದಟ್ಟಣೆ ತಪ್ಪಿಸಲು, ಹೆದ್ದಾರಿ ವಾಹನಗಳು ಯಾವುದೇ ಅಡತಡೆ ಇಲ್ಲದೆ, ಸರಾಗವಾಗಿ ಸಂಚರಿಸಲು ಬೈರಾಪುರ ಗ್ರಾಮದಲ್ಲಿ ಹೆದ್ದಾರಿಗೆ ಅಡ್ಡಲಾಗಿದೆ ಕೆಳಸೇತುವೆ ನಿರ್ಮಿಸಲಾಗುತ್ತಿದೆ.
ಪ್ರಯಾಣಿಕರು ಹೈರಾಣ: ಸದ್ಯ ಸೇತುವೆ ಕಾಮಗಾರಿಯೇನೋ ಮುಕ್ತಾಯವಾಗಿ ಆಲೂರಿನಿಂದ ಮಗ್ಗೆ ಗ್ರಾಮಕ್ಕೆ ಹೋಗುವ ವಾಹನಗಳು ಅದರ ಮೇಲೆ ಸಂಚಾರ ನಡೆಸುತ್ತಿವೆ. ಆದರೆ, ಸೇತುವೆ ಕೆಳಭಾಗದ ಹೆದ್ದಾರಿ ಕಾಮಗಾರಿ ಮಾತ್ರ ಪೂರ್ಣ ಗೊಂಡಿಲ್ಲ. ಆದ ಕಾರಣ, ಬೆಂಗಳೂರು ಮತ್ತು ಮಂಗಳೂರು ಕಡೆಯಿಂದ ಬರುವ ಬಸ್, ಲಾರಿಯಂತಹ ಭಾರೀ ವಾಹನ ಗಳು ಸೇತುವೆ ಪಕ್ಕದಲ್ಲೇ ಹಾದು ಹೋಗುತ್ತಿವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು, ಹೆದ್ದಾರಿ ಪ್ರಯಾಣಿಕರು ಹೈರಾಣಾಗಿ ಹೋಗಿದ್ದಾರೆ.
ಇದನ್ನೂ ಓದಿ:ಚಿರತೆ ನೋಡಿ ಹುಲಿ ಎಂದ ಕಾರು ಚಾಲಕ; ವಿಡಿಯೋ ವೈರಲ್
ಅಪಘಾತ ವಲಯ: ಈ ಸೇತುವೆ ಕಾಮಗಾರಿ ಪೂರ್ಣ ಗೊಳ್ಳದ ಕಾರಣ, ಹೆದ್ದಾರಿ ದಾಟುವಾಗ ವಾಹನಗಳಡಿ ಯಲ್ಲಿ ಸಿಲುಕಿ ಹಲವು ಮಂದಿ ಅಪಘಾತಕ್ಕೆ ಒಳಗಾಗಿದ್ದಾರೆ. ಬೆಂಗಳೂರು, ಹಾಸನ
ದಿಂದ ಸಕಲೇಶಪುರ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಸೇರಿ ಇತರೆ ಧಾರ್ಮಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿ ಯನ್ನು 45 ಕಿ.ಮೀ. ವಿಸ್ತರಣೆ ಮಾಡಲು 600 ಕೋಟಿ ರೂ. ವೆಚದ c ಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ನಿಗದಿಯಂತೆ ಕಾಮಗಾರಿ ನಡೆಯದ ಕಾರಣ, ಹೆದ್ದಾರಿ ಬದಿಯ ಗ್ರಾಮಸ್ಥರು, ವ್ಯಾಪಾರಿಗಳು, ವಾಹನ ಸವಾರರು ಪ್ರತಿದಿನವೂ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ