ಸಿರವಾರ: ಪಟ್ಟಣದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಓಡಾಟ ಹೆಚ್ಚಾಗಿದ್ದು, ತಹಶೀಲ್ದಾರ್ ನೇತೃತ್ವದಲ್ಲಿ ಎಲ್ಲಾ ಅ ಧಿಕಾರಿಗಳು ರಸ್ತೆಗಿಳಿದು ಜಾಗೃತಿ ಮೂಡಿಸಿದರು.
ಜಿಲ್ಲಾದ್ಯಂತ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಳಗ್ಗೆ 6ರಿಂದ 10ರ ವರೆಗೆ ಅವಶ್ಯಕ ವಸ್ತುಗಳ ಅಂಗಡಿಗಳನ್ನು ಮಾತ್ರ ತೆಗೆಯಲು ಅನುಮತಿ ನೀಡಿದ್ದು, ನಂತರ ಯಾವುದೇ ವಾಹನಗಳ ಓಡಾಟ ಕಂಡು ಬಂದಲ್ಲಿ ದಂಡ ವಿ ಧಿಸುವುದಕ್ಕೆ ಆದೇಶಿಸಿದ್ದರು. ಅದರಂತೆ ಗುರುವಾರ ಬೆಳಗ್ಗೆ ತಾಲೂಕು ಆಡಳಿತ, ಪಟ್ಟಣ ಪಂಚಾಯತಿ ಕಾರ್ಯಲಯ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಸಂಜೀವಿನಿ ಟ್ರಸ್ಟ್ ಹಾಗೂ ಊರಿನ ನಾಗರಿಕರ ಸಹಯೋಗದಲ್ಲಿ ಜಾಗೃತಿ ಜಾಥಾ ಹಾಗೂ ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ತಡೆದು ದಂಡ ವಿಧಿ ಸಿ ಎಚ್ಚರಿಕೆ ನೀಡಿದರು.
ನಂತರ ತಹಶೀಲ್ದಾರ್ ವಿಜಯೇಂದ್ರ ಹುಲಿನಾಯಕ ಮಾತನಾಡಿ, ಕೋವಿಡ್ ಹಾವಳಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು ಜಿಲ್ಲಾಧಿ ಕಾರಿಗಳು ಅನಗತ್ಯ ವಾಹನ ಓಡಾಟ ನಿಷೇಧಿ ಸಿದ್ದಾರೆ. ನಿಯಮ ಬಾಹಿರವಾಗಿ ಅಂಗಡಿಗಳನ್ನು ತೆರೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ವೈದ್ಯಾಧಿ ಕಾರಿ ಸುನೀಲ್ ಸರೋದೆ ಮಾತನಾಡಿ, ಪಟ್ಟಣದಲ್ಲಿ ಕೋವಿಡ್ ಹಾವಳಿ ಹೆಚ್ಚಿದ್ದು, ಸಾರ್ವಜನಿಕರು ಜಾಗೃತಿಯಿಂದ ಮನೆಯಲ್ಲಿ ಇರಿ. ಕೆಮ್ಮು, ಜ್ವರ, ನೆಗಡಿಯಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ.
ಸೂಕ್ತ ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಬಾಳಿ ಎಂದರು. ಪಪಂ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ, ವೈದ್ಯಾಧಿ ಕಾರಿ ಡಾ| ಪರಿಮಳಾ ಮೈತ್ರಿ, ಪಿಎಸ್‌ಐ ಸುಜಾತ ನಾಯಕ, ಗ್ರಾಮ ಲೆಕ್ಕಾ ಧಿಕಾರಿ ವಿಲ್ಸನ್, ಜೆಇ ಶರಣಬಸವ, ಮುಖಂಡರಾದ ಟಿ.ಬಸವರಾಜ, ಅಯ್ಯನಗೌಡ ಎರೆಡ್ಡಿ, ನರಸಿಂಹರಾವ್ ಕುಲಕರ್ಣಿ, ಗುರುನಾಥಗೌಡ, ವೆಂಕಟೇಶ ಜಕ್ಕಲದಿನ್ನಿ, ಜ್ಞಾನಮಿತ್ರ, ಶ್ರೀಕಾಂತ ಸೇರಿದಂತೆ ಸಿಬ್ಬಂದಿ ಇದ್ದರು.