Advertisement
ನಗರ ವ್ಯಾಪ್ತಿಯಿಂದ ಹೊರ ಬರುತ್ತಿದ್ದಂತೆ ಬಹುತೇಕ ರಸ್ತೆ ಬದಿ ತ್ಯಾಜ್ಯಗಳ ರಾಶಿ ಕಾಣಿಸುತ್ತದೆ.
ಕೊಳೆತ ಆಹಾರ ಪದಾರ್ಥಗಳು, ಮಕ್ಕಳಿಗೆ ಹಾಕುವ ಪ್ಯಾಂಪರ್ಸ್, ಮೊಟ್ಟೆ ಹೊರ ಕವಚ, ಕೋಳಿ ಮಾಂಸದ ಉಳಿಕೆ, ಮದ್ಯದ ಖಾಲಿ ಬಾಟಲಿಗಳು, ಆಹಾರ ಪೊಟ್ಟಣಗಳು ಹೀಗೆ ಎಲ್ಲವನ್ನೂ ಚೀಲದಲ್ಲಿ ತಂದು ಎಸೆಯಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಇವುಗಳಿಂದ ವಾಸನೆ ಬರಲಾರಂಭಿಸಿ, ರಸ್ತೆಯಲ್ಲಿ ತೆರಳುವವರಿಗೆ ಯಾತನೆಯಾಗುತ್ತಿದೆ. ಕೆಲವು ಕಡೆ ಸ್ಥಳೀಯರು ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಮತ್ತಷ್ಟು ಮಾಲಿನ್ಯ ಉಂಟಾಗುತ್ತಿದೆ.
Related Articles
ರಸ್ತೆಗೆ ಕಸ ಎಸೆಯುವವರಲ್ಲಿ ಬಹುತೇಕರು ಕಾರು, ಬೈಕ್, ಸ್ಕೂಟರ್‌ಗಳಲ್ಲಿ ಹೋಗುವಾಗ ರಸ್ತೆ ಬದಿ ಎಸೆದು ಹೋಗುತ್ತಾರೆ. ಕೆಲವರು ತಮ್ಮ ಜತೆ ಮಕ್ಕಳನ್ನು ಕರೆತಂದು ಅವರೆದುರೇ ತ್ಯಾಜ್ಯ ಎಸೆಯುತ್ತಾರೆ. ಇದರಿಂದ ಮಕ್ಕಳೂ ಅದನ್ನೇ
ಕಲಿಯುವಂತಾಗಿದೆ.
Advertisement
ಜಾನುವಾರುಗಳಲ್ಲಿ ರೋಗ ಭೀತಿರಸ್ತೆ ಬದಿಗಳಲ್ಲಿ ಬಿಸಾಕಿದ ತ್ಯಾಜ್ಯ, ವಿಷಯುಕ್ತ ಆಹಾರಗಳನ್ನು ಜಾನುವಾರುಗಳು ತಿನ್ನುತ್ತವೆ. ಬಿಸಿಲ ಬೇಗೆಗೆ ಆಹಾರ ಅರಸಿಕೊಂಡು ಬರುವ ಗೋವುಗಳು ರಸ್ತೆ ಬದಿಯ ಪ್ಲಾಸ್ಟಿಕ್, ಹಳಸಿದ ಆಹಾರ ಇತ್ಯಾದಿಗಳನ್ನು ತಿನ್ನುವುದರಿಂದ ಬೇಸಗೆಯ ಈ ಅವಧಿಯಲ್ಲಿ ಅವುಗಳು ಜೀರ್ಣವಾಗದೆ ಜಾನುವಾರುಗಳು ಕೂಡ ಅನಾರೋಗ್ಯಕ್ಕೆ ಒಳಗಾಗುತ್ತಿವೆ. ಸಾಮಾಜಿಕ ಅಪರಾಧವಾಗಿ ಪರಿಗಣಿಸಬೇಕು
ಸ್ವತ್ಛತೆ ಕಾಪಾಡುವುದು ಎಲ್ಲರ ಕರ್ತವ್ಯ. ಆದರೂ ಕೂಡ ಇದು ಕಟ್ಟುನಿಟ್ಟಾಗಿ ಪಾಲನೆ ಯಾಗುತ್ತಿಲ್ಲ. ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ಕಸ ಎಸೆಯುವುದು ಸಾಮಾಜಿಕ ಅಪರಾಧವಾಗಿ ಪರಿಗಣಿಸಿ ಕ್ರಿಮಿನಲ್ ಪ್ರಕರಣ ದಾಖಲಿಸ ಲಾಗುತ್ತದೆ. ಅದೇ ರೀತಿ ಇಲ್ಲೂ ಮಾಡುವುದು ಅನಿವಾರ್ಯವಾಗಿದೆ. ನಾಮಫಲಕ ಲೆಕ್ಕಕ್ಕೆ ಮಾತ್ರ
ಹೆದ್ದಾರಿ ಹಾದುಹೋಗುವ ಆಯಾ ಪಂಚಾಯತ್, ಸ್ಥಳೀಯಾಡಳಿತಗಳು ತ್ಯಾಜ್ಯ ಸುರಿಯಬಾರದು ಎಂದು ಬೋರ್ಡ್ ಅಳವಡಿಸಿದ್ದರೂ, ಅದರ ಬುಡದಲ್ಲೇ ಕಸ ತಂದು ಸುರಿಯ ಲಾಗುತ್ತಿದೆ. ನಗರಸಭೆ, ಪುರಸಭೆ, ಸ್ಥಳಿಯಾಡಳಿತ ಮಟ್ಟದಲ್ಲಿ ಸಾರ್ವಜನಿಕ ರಲ್ಲಿ ಸ್ವತ್ಛತಾ ಜಾಗೃತಿ ಮೂಡಿಸಲಾಗುತ್ತಿದೆ. ಸಂಘ ಸಂಸ್ಥೆಗಳೂ ಕಸ ಸ್ವತ್ಛಗೊಳಿಸುವ ಕೆಲಸ ಮಾಡುತ್ತಿವೆ.