Advertisement
ಹೆದ್ದಾರಿಯ 2 ಕಡೆ ತಲಾ ದ್ವಿಪಥ ರಸ್ತೆ ನಿರ್ಮಾಣ ಮಾಡಲಾಗಿದೆ. ಗ್ರಾಮಮಿತಿಗಳಲ್ಲಿ ಪಾದಚಾರಿ ರಸ್ತೆ ನಿರ್ಮಿಸದೆ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಜಾನುವಾರು ಗಳ ಓಡಾಟ ದುಸ್ತರವಾಗಿದೆ. ಶಾಲೆ, ಅಸ್ಪತ್ರೆ, ಹೊಲಗದ್ದೆಗಳಿಗೆ ನಡೆದುಕೊಂಡು ಹೋಗಲು ಪಾದಚಾರಿ ರಸ್ತೆ ಅಗತ್ಯದ ಕುರಿತು ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದರೂ ಪ್ರಾ ಕಾರ ಮೌನ ವಹಿಸಿದೆ.
Related Articles
Advertisement
ಅಪಾಯಕಾರಿಯಾದ ಸರ್ವಿಸ್ ರಸ್ತೆಯ ಸಂಚಾರ: ಆಕ್ರೋಶ:
ಸರ್ವಿಸ್ ರಸ್ತೆ ನಿರ್ಮಾಣವಾಗಿ ವರ್ಷ ಕಳೆದರೂ ಕೆಲವು ಕಡೆ ರಸ್ತೆ ಬದಿ, ಕಾಲುವೆ, ಕೆರೆಕಟ್ಟೆಗಳಿಗೆ ತಡೆಗೋಡೆ ನಿರ್ಮಿಸಲು ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಬೂದನೂರು ಬಳಿ ಕೆರೆ, ಕಾಲುವೆ, ಗುಂಡಿಗಳಿಗೆ ಸರಿಯಾದ ಭದ್ರತೆ ಒದಗಿಸಿಲ್ಲ. ಇದರಿಂದ ರಾತ್ರಿ ವೇಳೆ ಸಂಚಾರ ದುಸ್ತರವಾಗಿದೆ. ಇನ್ನೂ ಹೈವೇ ಪ್ರಾ ಕಾರ ಕೇಂದ್ರದಿಂದ 150 ಕೋಟಿ ರೂ. ಅನುದಾನ ಬರಲಿದ್ದು, ಬಳಿಕ ಕಾಮಗಾರಿ ಮಾಡುವುದಾಗಿ ತಿಳಿಸಿದೆ. ಆದರೆ ಯಾವಾಗ ಅನುದಾನ ಬರುತ್ತದೆಯೋ ಗೊತ್ತಿಲ್ಲ. ಇದರಿಂದ ಕಾಮಗಾರಿ ಮಾಡುವ ಸೂಚನೆಯೂ ಗೋಚರಿಸುತ್ತಿಲ್ಲ. ಅಲ್ಲಿಯ ವರೆಗೂ ಮುಂಜಾಗ್ರತೆಯಾಗಿ ಸರ್ವಿಸ್ ರಸ್ತೆಗೆ ಭದ್ರತೆ ಒದಗಿಸಬೇಕು. ಇಲ್ಲದಿದ್ದರೆ ಮುಂದೆ ಪ್ರಾಣಹಾನಿಯಾಗುವ ಸಾಧ್ಯತೆ ಹೆಚ್ಚಿದೆ.
ರಸ್ತೆಯ ಬಹುತೇಕ ಕಡೆ ಪೂರ್ಣ ಗೊಳ್ಳದ ಕಾಮಗಾರಿ:
ಸರ್ವಿಸ್ ರಸ್ತೆಯ ಬಹುತೇಕ ಕಡೆ ಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಚರಂಡಿ ಸ್ಥಳೀಯ ಕೆರೆ ಕಟ್ಟೆ ಕಾಲುವೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಪರಿಣಾಮ ಪರಿಸರ ಮಾಲಿನ್ಯ ಹೆಚ್ಚುವ ಆತಂಕ ಸೃಷ್ಟಿಯಾಗಿದೆ. ಆದರೆ ಹೆದ್ದಾರಿ ಪ್ರಾ ಧಿಕಾರದವರು ಕಾಮಗಾರಿ ನಿಲ್ಲಿಸಿದ್ದಾರೆ. ಹೆದ್ದಾಗಿ ಕಾಮಗಾರಿಗೆ ಆಗಮಿಸಿ ಅಲ್ಲಲ್ಲಿ ವಾಸ ಮಾಡುತ್ತಿದ್ದ ಕಾರ್ಮಿಕರು ಸಹ ಜಾಗ ಖಾಲಿ ಮಾಡಿದ್ದಾರೆ. ಇದರಿಂದ ಮುಂದೆ ಅಲ್ಲಲ್ಲಿ ಉಳಿದಿರುವ ಕಾಮಗಾರಿ ನಡೆಯುವುದು ಅನುಮಾನವಾಗಿದೆ.
-ಎಚ್.ಶಿವರಾಜು