Advertisement

ಹೆದ್ದಾರಿ ಬಾಕಿ ಕಾಮಗಾರಿ ಶೀಘ್ರ ಪೂರ್ಣ

03:44 PM Oct 25, 2019 | Suhan S |

ಟೇಕಲ್‌: ಟೇಕಲ್‌ ಹೋಬಳಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಅಗಲೀಕರಣ ಬಾಕಿ ಕೆಲಸವನ್ನು ದೀಪಾವಳಿ ಹಬ್ಬದ ನಂತರ ಮುಗಿಸುವುದಾಗಿ ರಾಜ್ಯ ಹೆದ್ದಾರಿ ಅಭಿಯಂತರರು ಮತ್ತು ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಸಂಸದ ಎಸ್‌.ಮುನಿಸ್ವಾಮಿ ತಿಳಿಸಿದರು.

Advertisement

ಟೇಕಲ್‌ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಈ ಭಾಗದ ವ್ಯಾಪಾ ರಸ್ಥರು ಮತ್ತು ಸಾರ್ವಜನಿಕರು ಮಾಡಿದ ಮನವಿಗೆ ಸ್ಪಂದಿಸಿ ಮಾತನಾಡಿದರು. ಕೆಂಪನಹಳ್ಳಿಯಿಂದ ಕೆ.ಜಿ.ಹಳ್ಳಿ ಗ್ರಾಮ, ಟೇಕಲ್‌ ಮಾರ್ಗವಾಗಿ ಬಂಗಾರಪೇಟೆ ಗಡಿಯವರೆಗಿನ ಹೆದ್ದಾರಿ ಅಗಲೀಕರಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದರಿಂದ ವಾಹನಗಳು ಓಡಾಡುವಾಗ ದೂಳು ಅಂಗಡಿಗಳಿಗೆ ಬರುತ್ತದೆ ಮತ್ತು ಜನರಿಗೆ ಆರೋಗ್ಯ ಕೆಟ್ಟು ಆಸ್ಪತ್ರೆ ಸೇರುವ ಪ್ರಸಂಗ ಇದೆ. ನೀವಾದರೂ ರಸ್ತೆಗೆ ಡಾಂಬರೀಕರಣ ಮಾಡಿಸಲು ಪ್ರಯತ್ನಿಸಿ ಎಂದು ಜನರು ಮನವಿ ಮಾಡಿದರು. ಶೀಘ್ರದಲ್ಲೆ ನಿಮ್ಮ ಬೇಡಿಕೆ ಈಡೇರಿಸಿಕೊಡುವುದರ ಜೊತೆಗೆ ಸರ್ಕಾರದಿಂದ ಜನರಿಗೆ ತಲುಪಬೇಕಾದ ಸೌಲಭ್ಯಗಳನ್ನು ಮಧ್ಯವರ್ತಿಗಳನ್ನು ಅವಲಂಬಿಸಿದೆ, ನೇರವಾಗಿ ಫ‌ಲಾನುಭವಿಗಳಿಗೆ ತಲುಪುವಂತೆ ಮಾಡಲು ಪಾರದರ್ಶಕ ಆಡಳಿತ ಕೊಡುತ್ತೇನೆ ಎಂದರು.

ಕಾರ್ಯಕರ್ತರಿಗೆ ಆಶ್ವಾಸನೆ: ಭಾಜಪ ಉಮೇದುವಾರರನ್ನು ಗೆಲ್ಲಿಸಲು ಪ್ರಯತ್ನಿಸಿ ಭಾಜಪ ಕಾರ್ಯಕರ್ತರಿಗೆ ಸಂಘ ಸಂಸ್ಥೆಗಳಲ್ಲಿ ನಿಗಮಗಳಲ್ಲಿ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಪಕ್ಷಕ್ಕೆ ದುಡಿದವರಿಗೆ ಮೊದಲ ಆದ್ಯತೆ ಕಲ್ಪಿಸಿ ಅವರ ಅಭಿವೃದ್ಧಿಗೆ ಸಹಕರಿಸುವುದಾಗಿ ನುಡಿದರು.

ಅಟ್ರಾಸಿಟಿ ದಾಖಲಿಸಬೇಡಿ: ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಸಮಾಜದವರೂ ಹೊಂದಾಣಿಕೆಯಿಂದ ಜೀವನ ಮಾಡುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ ಸಣ್ಣಪುಟ್ಟ ಘರ್ಷಣೆಗಳಾದಾಗ ಅದನ್ನು ಅಟ್ರಾಸಿಟಿ ಎಂದು ಅಮಾಯಕರಿಗೆ ಅವಮಾನವಾಗುವಂತೆ ಮಾಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಪೊಲೀಸ್‌ ಇಲಾಖೆ ಎರಡೂ ಕಡೆಯವರನ್ನು ಕರೆಸಿ ಸಮಾಲೋಚಿಸಿ ಸಂಧಾನ ಮಾಡಿ ಗ್ರಾಮಗಳಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಂಡು ಬರುವಂತೆ ಪೊಲೀಸ್‌ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಜನರಿಗೆ ಅನ್ಯಾಯವಾಗದಂತೆ ಮಾಡಿ ಸಾಮಾಜಿಕ ನ್ಯಾಯ ಮತ್ತು ಸೌಹಾರ್ದತೆ ಕಾಪಾಡುವಂತೆ ಮಾಡುವುದಾಗಿ ಆಶ್ವಾಸನೆ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next