Advertisement
ಸುಡು ಬಿಸಲು ಒಂದೆಡೆ, ಮತ್ತೂಂದೆಡೆ ಆಕಾಶದೆತ್ತರಕ್ಕೆ ಹಾರುವ ಧೂಳು ಪ್ರಯಾಣಿಕರ ವಾಹನ ಸವಾರರ ಸುಗಮ ಸಂಚಾ ರಕ್ಕೆ ಅಡ್ಡಿಯಾಗಿದ್ದು, ಹಲವು ರೋಗ-ರುಜಿ ನಗಳಿಗೆ ಆಹ್ವಾನ ನೀಡಿದೆ.
Related Articles
Advertisement
ಕೃಷಿ ಜಮೀನಿಗೆ ತೆರಳಲು ಹರಸಾಹಸ: ಕಣವಿ ವೀರಭದ್ರೇಶ್ವರಕ್ಕೆ ಹೋಗುವ ಮಾರ್ಗದಲ್ಲಿ ಮೊದಲು ವಿರೂಪಾಕ್ಷ ನಾಯಕ ವೃತ್ತ ಇತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳೆದ ವರ್ಷ ಅದನ್ನು ತೆರವುಗೊಳಿಸಿ ಅಂಡರ್ ಬ್ರಿಡ್ಜ್ ನಿರ್ಮಿಸುವ ಕಾಮಗಾರಿ ಕೈಗೆತ್ತಿಗೊಂಡಿತ್ತು. ಆದರೆ ಅದು ಕೂಡ ಅಪೂರ್ಣಗೊಂಡಿದ್ದು, ಗಣಿ ಅದಿರು ಸಾಗಣೆ ಮತ್ತು ಭಾರೀ ವಾಹನಗಳು ಮಾರ್ಗದಲ್ಲಿ ಸಂಚಾರ ಮಾಡಲು ಹರಸಹಾಸ ಪಡುವಂತಾಗಿದೆ. ಅಲ್ಲದೆ, ರಸ್ತೆಯ ಮೊಣಕಾಲುದ್ದ ತೆಗ್ಗು ಗುಂಡಿಗಳಿಂದ ರೈತರು ತಮ್ಮ ಕೃಷಿ ಜಮೀನುಗಳಿಗೆ ತೆರಳುವುದು ಕಷ್ಟಕರವಾಗಿದೆ.
ಧೂಳಿನಿಂದಾಗಿ ಟ್ರಾಫಿಕ್ ಪೊಲೀಸ್ ಠಾಣೆ ಸ್ಥಳಾಂತರ: ಅಂಡರ್ ಬ್ರಿಡ್ಜ್ ನಿರ್ಮಾಣ ಮಾಡುವ ಸಮೀಪದಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಇದೆಯಾದರೂ, ವಿಪರೀತ ಧೂಳಿನ ಪರಿ ಣಾ ಮಕ್ಕೆ ಠಾಣೆಯನ್ನೇ ಬೇರೆಡೆ ಸ್ಥಳಾಂತರಿಸಿದ್ದಾರೆ. ಸಿಪಿಐ ಒಂದೆಡೆಯಾದರೆ, ಪಿಎಸ್‌ಐ ಇನ್ನೊಂದೆಡೆ ಇದ್ದಾರೆ. ಇದರಿಂದಾಗಿ ಠಾಣೆಗೆ ಬರುವ ಸಾರ್ವಜನಿಕರಿಗೂ ಕಿರಿಕಿರಿಯಾಗಿದೆ.
ಶಾಲೆ ಮಕ್ಕಳು ಪಾಠ ಕೇಳುವಂತಿಲ್ಲ: ಇನ್ನೂ ಶಾಲೆಗಳಲ್ಲಿ ಮಕ್ಕಳು ಪಾಠ ಕೇಳುವಂತಿಲ್ಲ. ಅಷ್ಟೋಂದು ಧೂಳು ಆವರಿಸಿರುತ್ತದೆ. ಮತ್ತು ಕೃಷಿ ಜಮೀನುಗಳ ಬೆಳೆಗಳಿಗೆ ಧೂಳ್ ಇದ್ದು ಬೆಳೆ ನಶಿಸಿ ಹೋಗುತ್ತಿವೆ. ಈಗಾಗಲೆ ಗಣಿ ಧೂಳಿನಿಂದ ನಗರದ ವಾಸಿಗಳಿಗೆ ದಮ್ಮು, ಕೆಮ್ಮು ಅಸ್ತಮ, ಸಂದಿವಾತ ಸೇರಿ ಹಲವು ಖಾಯಿಲೆಗಳು ಕಾಣಿಸಿಕೊಂಡಿವೆ. ಇನ್ನು ಬಳ್ಳಾರಿಗೆ ತೆರಳುವ ಬೈಪಾಸ್‌ನಲ್ಲಿ ಪಾದಾಚಾರಿಗಳು ಹೋಗುವಂತಿಲ್ಲ.
ಅಷ್ಟೊಂದು ವಾಯು ಮಾಲಿನ್ಯ ಉಂಟಾಗಿದೆ. ಅಲ್ಲದೆ, ಈಗಾಗಿರುವ ಸಿಸಿ ರಸ್ತೆ ಕಾಮಗಾರಿ ಸಹ ಕಳಪೆಯಾಗಿದ್ದು, ಅರ್ಧಂಬರ್ಧ ಕಾಮಗಾರಿಯಲ್ಲೇ ಸಿಸಿ ರಸ್ತೆ ಕಿತ್ತು ಹೋಗಿದೆ. ಇದರಿಂದಾಗಿ ಬೈಕ್ ಹಾಗೂ ವಾಹನ ಸವಾರರು ಸಂಕಷ್ಟ ಎದುರಿಸಬೇಕಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂಗ್ಯಾಮನ್ ಇಂಡಿಯಾ ಕಂಪನಿಯ ನಿರ್ಲಕ್ಷ್ಯಧೋರ ಣೆಯಿಂದಾಗಿ ವಾಹನ ಸವಾರರು, ಸಾರ್ವಜನಿಕರು, ಕೃಷಿಕರು ಪ್ರತಿನಿತ್ಯ ಕಿರಿಕಿರಿ ಅನುಭವಿಸಬೇಕಾಗಿದೆ. ಗ್ಯಾಮನ್ ಇಂಡಿಯಾ ಕಂಪನಿ ರಸ್ತೆ ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತಿಲ್ಲ. ಬದಲಿಗೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಆಯುಷ್ಯವನ್ನು ಕಸಿದುಕೊಳ್ಳುತ್ತಿದೆ. ಈ ಧೂಳಿನಿಂದ ಈಗಾಗಲೇ ಕೃಷಿ ಭೂಮಿಗಳಲ್ಲಿ ಬೆಳೆ ಹಾಳಾಗಿವೆ. ಮತ್ತು ಶಾಲಾ ವಿದ್ಯಾರ್ಥಿಗಳು ನೆಮ್ಮದಿಯಿಂದ ಪಾಠ ಕೇಳುತ್ತಿಲ್ಲ. ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬ್ರಿಡ್ಜ್ ನಿರ್ಮಾಣದ ಪ್ರದೇಶಗಳಿಗೆ ಭೇಟಿ ನೀಡಿ ಧೂಳು ಮುಕ್ತ ರಸ್ತೆಗಳಾನ್ನಾಗಿ ಮಾಡಬೇಕು.
ಪೂಜಾರ್ ವೆಂಕೋಬ ನಾಯಕ, ಕೃಷಿಕ. ರಸ್ತೆ ಅಭಿವೃದ್ಧಿ ಹೆಸರಲ್ಲಿ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಾಧಿಕಾರ ಹಾಗೂ ಗ್ಯಾಮನ್ ಇಂಡಿಯಾ ಕಂಪನಿಯವರು ಚೆಲ್ಲಾಟ ಆಡುತ್ತಿದ್ದಾರೆ. ಗಣಿಧೂಳಿಗೆ ಶಾಲೆಗೆ ಬರುವುದಕ್ಕೆ ಬೇಸರವಾಗಿದೆ. ಧೂಳು ಎದ್ದೇಳದಂತೆ ಕನಿಷ್ಠ ರಸ್ತೆಗೆ ನೀರನ್ನು ಸಹ ಹಾಕುವುದಿಲ್ಲ. ಪ್ರಾಧಿಕಾರದವರು ಇದೇ ರೀತಿ ನಿರ್ಲಕ್ಷ್ಯ ಮಾಡಿದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯಬೇಕಾಗುತ್ತದೆ.
ಎ.ಎನ್.ದೀಪಾಶ್ರೀ, ಶಿವಚಂದ್ರ ತೇಜಸ್ವಿ. ವಿದ್ಯಾರ್ಥಿಗಳು, ನ್ಯಾಷನಲ್ ಶಾಲೆ. ಪಿ.ಸತ್ಯನಾರಾಯಣ